IND vs SA T20 ಸೌತ್ ಆಫ್ರಿಕಾ ವಿರುದ್ದದ ಟಿ20 ಸರಣಿಯಿಂದ ಕೆಎಲ್ ರಾಹುಲ್, ಕುಲ್ದೀಪ್ ಯಾದವ್ ಔಟ್!

By Suvarna NewsFirst Published Jun 8, 2022, 6:37 PM IST
Highlights
  • ಸರಣಿಗೂ ಮೊದಲು ಗಾಯಗೊಂಡ ಕೆಎಲ್ ರಾಹುಲ್
  • ಟಿ20 ತಂಡ ಮುನ್ನಡೆಸಲಿದ್ದಾರೆ ರಿಷಬ್ ಪಂತ್
  • ಕುಲ್ದೀಪ್ ಯಾದವ್ ಕೂಡ ಸರಣಿಯಿಂದ ಔಟ್

ಮುಂಬೈ(ಜೂ.08): ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ಇಂಜುರಿಯಾಗಿರುವ ಕೆಎಲ್ ರಾಹುಲ್ ಹಾಗೂ ಕುಲ್ದೀಪ್ ಯಾದವ್ ಸರಣಿಯಿಂದ ಹೊರಬಿದ್ದಿದ್ದಾರೆ. ನಾಯಕನೇ ಟೂರ್ನಿಯಿಂದ ಹೊರಬಿದ್ದಿರುವ ಕಾರಣ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ರಿಷಬ್ ಪಂತ್ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ರಿಷಬ್ ಪಂತ್ ನಾಯಕನಾಗಿ ಬಡ್ತಿ ಪಡದರೆ, ಹಾರ್ಧಿಕ್ ಪಾಂಡ್ಯಗೆ ಉಪನಾಯಕನ ಪಟ್ಟ ನೀಡಲಾಗಿದೆ. 

ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿ ಜೂನ್ 9 ರಿಂದ ಆರಂಭಗೊಳ್ಳುತ್ತಿದೆ. 5 ಪಂದ್ಯಗಳ ಟಿ20 ಸರಣಿ ಇದಾಗಿದ್ದು, ಸಂಪೂರ್ಣ ಟೂರ್ನಿಯಿಂದ ಕೆಎಲ್ ರಾಹುಲ್ ಹಾಗೂ ಕುಲ್ದೀಪ್ ಯಾದವ್ ಹೊರಬಿದ್ದಿದ್ದಾರೆ. ರೋಹಿತ್ ಶರ್ಮಾ ಇಂಜುರಿ ಕಾರಣ ವಿಶ್ರಾಂತಿ ನೀಡಲಾಗಿದೆ. ರೋಹಿತ್ ಬದಲಿಗೆ ಕೆಎಲ್ ರಾಹುಲ್‌ಗೆ ನಾಯಕತ್ವ ನೀಡಲಾಗಿತ್ತು. ಇದೀಗ ರಾಹುಲ್ ಕೂಡ ಇಂಜುರಿಗೆ ತುತ್ತಾಗಿರುವ ಕಾರಣ ರಿಷಬ್ ಪಂತ್‌ಗೆ ನಾಯಕತ್ವ ನೀಡಲಾಗಿದೆ.

Latest Videos

ಕ್ವಾರ್ಟರ್ ಫೈನಲ್ ನಲ್ಲಿ ಮುಗ್ಗರಿಸಿದ ಕರ್ನಾಟಕ

ಮೊದಲ ಟಿ20 ಪಂದ್ಯಕ್ಕಾಗಿ ಟೀಂ ಇಂಡಿಯಾ ದೆಹಲಿಯಲ್ಲಿ ಬೀಡುಬಿಟ್ಟಿದೆ. ಕೋಟ್ಲಾ ಪಂದ್ಯದಲ್ಲಿನ ಅಭ್ಯಾಸದ ವೇಳೆ ರಾಹುಲ್ ಹಾಗೂ ಕುಲ್ದೀಪ್‌ಗೆ ಗಾಯವಾಗಿದೆ. ಇದೀಗ ಇಬ್ಬರು ಆಟಗಾರರು ಬೆಂಗಳೂರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಆಗಮಿಸಲಿದ್ದಾರೆ. ಬಳಿಕ ಬಿಸಿಸಿಐ ವೈದ್ಯಕೀಯ ತಂಡ ರಾಹುಲ್ ಹಾಗೂ ಕುಲ್ದೀಪ್ ಯಾದವ್ ಇಂಜುರಿ ಕುರಿತು ಪರೀಕ್ಷೆ ನಡೆಸಲಿದ್ದಾರೆ. ಇಷ್ಟೇ ಅಲ್ಲ ವಿಶ್ರಾಂತಿಯ ಸಮಯವನ್ನು ಹೇಳಲಿದ್ದಾರೆ.

ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿದೆ. ಇದೀಗ ಉತ್ತಮ ಫಾರ್ಮ್‌ನಲ್ಲಿದ್ದ ಕೆಎಲ್ ರಾಹುಲ್ ಕೂಡ ಔಟ್ ಆಗಿದ್ದಾರೆ. ಪಂದ್ಯಕ್ಕೂ ಒಂದು ದಿನ ಮೊದಲೇ ಟೀಂ ಇಂಡಿಯಾಗೆ ಇಂಜುರಿ ಶಾಕ್ ಎದುರಾಗಿದೆ.ರಾಹುಲ್ ಹಾಗೂ ಕುಲ್ದೀಪ್ ಹೊರಬಿದ್ದಿದ್ದಾರೆ. ಆದರೆ ಇವರ ಬದಲಿ ಆಟಗಾರರನ್ನು ಬಿಸಿಸಿಐ ಆಯ್ಕೆ ಮಾಡಿಲ್ಲ. 

ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಮಿಥಾಲಿ ರಾಜ್‌

ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟಿಂ ಇಂಡಿಯಾ:
ರಿಷಬ್ ಪಂತ್ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ವೆಂಕಟೇಶ್ ಅಯ್ಯರ್, ಯಜುವೇಂದ್ರ ಚಹಾಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್

ಭಾರತ ಸೌತ್ ಆಫ್ರಿಕಾ ಟಿ20 ಸರಣಿ
ಜೂನ್ 09, ಮೊದಲ ಟಿ20 ಪಂದ್ಯ, ಸಂಜೆ 7 ಗಂಟೆಗೆ, ದೆಹಲಿ
ಜೂನ್ 12, ಎರಡನೇ ಟಿ20 ಪಂದ್ಯ, ಸಂಜೆ 7 ಗಂಟೆಗೆ,ಕಟಕ್
ಜೂನ್ 14, ಮೂರನೇ ಟಿ20 ಪಂದ್ಯ, ಸಂಜೆ 7 ಗಂಟೆಗೆ, ವಿಶಾಖಪಟ್ಟಣಂ
ಜೂನ್ 17, ನಾಲ್ಕನೇ ಟಿ20 ಪಂದ್ಯ, ಸಂಜೆ 7 ಗಂಟೆಗೆ, ರಾಜ್‌ಕೋಟ್
ಜೂನ್ 19, ಐದನೇ ಟಿ20 ಪಂದ್ಯ, ಸಂಜೆ 7 ಗಂಟೆಗೆ, ಬೆಂಗಳೂರು

click me!