Ind vs SA: ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ; 2 ಮಹತ್ವದ ಬದಲಾವಣೆ

By Naveen Kodase  |  First Published Oct 9, 2022, 1:12 PM IST

ಭಾರತ-ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಏಕದಿನ ಪಂದ್ಯಕ್ಕೆ ರಾಂಚಿ ಆತಿಥ್ಯ
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ
ಎರಡೂ ತಂಡದಲ್ಲೂ ಎರಡು ಮಹತ್ವದ ಬದಲಾವಣೆ


ರಾಂಚಿ(ಅ.09): ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಅಫ್ರಿಕಾ ತಂಡದ ಹಂಗಾಮಿ ನಾಯಕ ಕೇಶವ್ ಮಹರಾಜ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.  ಈಗಾಗಲೇ ಮೊದಲ ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ದಕ್ಷಿಣ ಆಫ್ರಿಕಾ ತಂಡವು, ಎರಡನೇ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಇನ್ನೊಂದೆಡೆ ಟೀಂ ಇಂಡಿಯಾ ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾಗಿದೆ. 

ದಕ್ಷಿಣ ಆಫ್ರಿಕಾ ತಂಡದಲ್ಲಿ ಎರಡು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದ್ದು, ತಬ್ರೀಜ್ ಶಮ್ಸಿ ಹಾಗೂ ತೆಂಬಾ ಬವುಮಾ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ರೀಜಾ ಹೆಂಡ್ರಿಕೇಸ್ ಹಾಗ ಬೊರನ್‌ ಫೋರ್ಟಿನ್‌ ತಂಡ ಕೂಡಿಕೊಂಡಿದ್ದಾರೆ. ಇನ್ನು ಭಾರತ ತಂಡದಲ್ಲೂ ಎರಡು ಬದಲಾವಣೆ ಮಾಡಲಾಗಿದ್ದು, ಋತುರಾಜ್ ಗಾಯಕ್ವಾಡ್‌ ಹಾಗೂ ರವಿ ಬಿಷ್ಣೋಯಿ ತಂಡದಿಂದ ಹೊರಬಿದ್ದಿದ್ದು, ವಾಷಿಂಗ್ಟನ್ ಸುಂದರ್ ಮತ್ತು ಶೆಹಬಾಜ್ ಅಹಮದ್ ತಂಡ ಕೂಡಿಕೊಂಡಿದ್ದಾರೆ. ಶೆಹಬಾಜ್ ಅಹಮದ್ ಮೊದಲ ಬಾರಿಗೆ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ.

Tap to resize

Latest Videos

ಭಾರತ ತಂಡದ ಪರ ಕಳೆದ ಪಂದ್ಯದಲ್ಲಿ ಆರಂಭಿಕ ಬ್ಯಾಟರ್‌ಗಳಿಬ್ಬರು ವೈಫಲ್ಯ ಅನುಭವಿಸಿದ್ದರು. ನಾಯಕ ಶಿಖರ್ ಧವನ್ ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ. ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದ ಸಂಜು ಸ್ಯಾಮ್ಸನ್‌, ಶ್ರೇಯಸ್ ಅಯ್ಯರ್ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಇನ್ನು ಬೌಲರ್‌ಗಳು ಕೂಡಾ ಹೊಣೆಯರಿತು ಪ್ರದರ್ಶನ ತೋರಬೇಕಿದೆ.

🚨 Toss Update from Ranchi 🚨

South Africa have elected to bat against in the second ODI.

Follow the match ▶️ https://t.co/6pFItKiAHZ pic.twitter.com/NKjxZRPH4e

— BCCI (@BCCI)

ದಕ್ಷಿಣ ಆಫ್ರಿಕಾಗೆ ಇದು ಮಹತ್ವದ ಸರಣಿ ಎನಿಸಿದೆ. 2023ರ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲು ಸೂಪರ್‌ ಲೀಗ್‌ ಅಂಕಗಳನ್ನು ಸಂಪಾದಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ ಸಕಲ ಪ್ರಯತ್ನ ನಡೆಸಲಿದೆ. ಮೊದಲ ಏಕದಿನ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್, ಹೆನ್ರಿಚ್ ಕ್ಲಾಸೆನ್ ಹಾಗೂ ಡೇವಿಡ್ ಮಿಲ್ಲರ್ ಆಕರ್ಷಕ ಬ್ಯಾಟಿಂಗ್ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾಗಿದ್ದರು. ಇನ್ನು ಬೌಲಿಂಗ್‌ನಲ್ಲಿ ಕಗಿಸೋ ರಬಾಡ, ಲುಂಗಿ ಎಂಗಿಡಿ ಮಾರಕ ದಾಳಿ ನಡೆಸುವ ಮೂಲಕ ಭಾರತೀಯ ಬ್ಯಾಟರ್‌ಗಳನ್ನು ಕಾಡಿದ್ದರು.

ಭಾರತ: ಶಿಖರ್ ಧವನ್‌(ನಾಯಕ), ಶುಭ್‌ಮನ್‌ ಗಿಲ್‌, ಇಶಾನ್‌ ಕಿಶನ್‌, ಶ್ರೇಯಸ್‌ ಅಯ್ಯರ್, ಸಂಜು ಸ್ಯಾಮ್ಸನ್‌, ಶಾರ್ದೂಲ್‌ ಠಾಕೂರ್, ವಾಷಿಂಗ್ಟನ್ ಸುಂದರ್, ಶಾಬಾಜ್‌ ಅಹಮದ್, ಆವೇಶ್‌ ಖಾನ್, ಕುಲ್ದೀಪ್‌ ಯಾದವ್, ಮೊಹಮ್ಮದ್ ಸಿರಾಜ್‌.

ದ.ಆಫ್ರಿಕಾ: ಕ್ವಿಂಟನ್ ಡಿ ಕಾಕ್‌, ಡೇವಿಡ್ ಮಲಾನ್‌, ರೀಜಾ ಹೆಂಡ್ರಿಕ್ಸ್‌ , ಏಯ್ಡನ್‌ ಮಾರ್ಕ್ರಮ್‌, ಹೆನ್ರಿಚ್ ಕ್ಲಾಸೆನ್‌, ಡೇವಿಡ್ ಮಿಲ್ಲರ್‌, ಬೊರನ್‌ ಫೋರ್ಟಿನ್‌, ವೇಯ್ನ್‌ ಪಾರ್ನೆಲ್‌, ಕೇಶವ್ ಮಹಾರಾಜ್‌(ನಾಯಕ), ಕಗಿಸೋ ರಬಾಡ, ತಬ್ರಿಜ್‌ ಶಮ್ಸಿ, ಲುಂಗಿ ಎನ್‌ಗಿಡಿ

ಪಂದ್ಯ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

click me!