IND vs SA ಭಾರತ ಹಾಗೂ ಸೌತ್ ಆಫ್ರಿಕಾ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ, ಪಂದ್ಯ ಟಾಸ್ ವಿಳಂಬ!

By Suvarna NewsFirst Published Oct 6, 2022, 1:38 PM IST
Highlights

ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಏಕದಿನ ಸರಣಿಗೆ ಮಳೆ ಅಡ್ಡಿಯಾಗಿದೆ. ಇದರ ಪರಿಣಾಮ ಮೊದಲ ಏಕದಿನ ಪಂದ್ಯದ ಟಾಸ್ ವಿಳಂಭವಾಗಿದೆ.

ಲಖನೌ(ಅ.06): ಭಾರತ ಹಾಗೂ ಸೌತ್ ಆಫ್ರಿಕಾ ವಿರುದ್ದದ ಟಿ20 ಸರಣಿ ಬೆನ್ನಲ್ಲೇ ಇದೀಗ ಹೈವೋಲ್ಟೇಜ್ ಏಕದಿನ ಸರಣಿ ಆರಂಭಗೊಂಡಿದೆ. ಆದರೆ ಮೊದಲ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಮಳೆಯಿಂದಾಗಿ ಲಖನೌ ಪಂದ್ಯದ ಟಾಸ್ ವಿಳಂಭವಾಗಿದೆ. ಭಾರಿ ಮಳೆ ಸುರಿಯುತ್ತಿರುವ ಕಾರಣ ಪಂದ್ಯ ಆರಂಭವೂ ಮತ್ತಷ್ಟು ತಡವಾಗಲಿದೆ.  ಭಾರಿ ಮಳೆರಾಯ ಸದ್ಯ ಬ್ರೇಕ್ ನೀಡಿದ್ದಾನೆ. ಆದರೆ ಮೈದಾನಕ್ಕೆ ಹಾಕಿರುವ ಕವರ್ ತೆಗೆದಿಲ್ಲ. ಹೀಗಾಗಿ ಪಂದ್ಯ ಆರಂಭ ವಿಳಂಬವಾಗಲಿದೆ.

ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಪಾಲ್ಗೊಂಡ ಟೀಂ ಇಂಡಿಯಾ ಪ್ರಮುಖ ಆಟಗಾರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಏಕದಿನ ಪಂದ್ಯದಿಂದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್‌ಗೆ ವಿಶ್ರಾಂತಿ ನೀಡಲಾಗಿದೆ. ದಿನೇಶ್ ಕಾರ್ತಿಕ್, ರಿಷಬ್ ಪಂತ್ ಸೇರಿದಂತೆ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. 

ಭಾರತದ ಕ್ವೀನ್ ಸ್ವೀಪ್ ಸರಣಿ ಗೆಲುವಿಗೆ ರೋಸೋ ಬ್ರೇಕ್, ಅಂತಿಮ ಪಂದ್ಯದಲ್ಲಿ ಸೋಲಿನ ಶಾಕ್

ಟೀಂ ಇಂಡಿಯಾ  ಸಂಭವನೀಯ ತಂಡ
ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ರಾಹುಲ್ ತ್ರಿಪಾಠಿ, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್

ಸೌತ್ ಆಫ್ರಿಕಾ ಸಂಭವನೀಯ ತಂಡ
ಕ್ವಿಂಟನ್ ಡಿ ಕಾಕ್, ಜನ್ನೆಮನ್ ಮಲನ್, ಟೆಂಬಾ ಬವುಮಾ (ನಾಯಕ), ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಆಂಡಿಲೆ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್, ಮಾರ್ಕೊ ಜಾನ್ಸೆನ್, ಲುಂಗಿ ಎನ್ಗಿಡಿ, ಕಗಿಸೊ ರಬಾಡ

ಟಿ20 ಸರಣಿಯಲ್ಲಿ ಸೌತ್ ಆಫ್ರಿಕಾ ಆರಂಭಿಕ 2 ಪಂದ್ಯ ಸೋತು ಸರಣಿ ಕೈಚೆಲ್ಲಿತು. ಆದರೆ ಅಂತಿಮ ಪಂದ್ಯದಲ್ಲಿ ನೀಡಿದ ಪ್ರದರ್ಶನ ಸೌತ್ ಆಫ್ರಿಕಾ ಆತ್ಮಿವಿಶ್ವಾಸ ಹೆಚ್ಚಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ದಿಟ್ಟ ಹೋರಾಟ ನೀಡುವ ಮೂಲಕ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿತ್ತು.  ಇದೀಗ ಏಕದಿನ ಸರಣಿಯಲ್ಲೂ ಸೌತ್ ಆಫ್ರಿಕಾ ಅದೇ ಪ್ರದರ್ಶನ ಮುಂದುವರಿಸಲು ಸಜ್ಜಾಗಿದೆ.

ಭಾರತ ವಿರುದ್ಧದ ಏಕದಿನ ಪಂದ್ಯದಲ್ಲಿ ಕ್ವಿಂಟನ್ ಡಿಕಾಕ್ ಪ್ರದರ್ಶನ:
ಪಂದ್ಯ: 16
ಇನ್ನಿಂಗ್ಸ್: 16 
ರನ್: 1013
ಸರಾಸರಿ: 63.31 
ಸ್ಟ್ರೈಕ್ ರೇಟ್: 92.59 
ಗರಿಷ್ಠ ಸ್ಕೋರ್: 135 
ಶತಕ: 6 
ಅರ್ಧಶತಕ:  2 

click me!