* ಜೋಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಪೂಜಾರ, ರಹಾನೆ
* ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಗಳಿಸಿದ್ದು ಕೇವಲ 3 ರನ್
* ಅನುಭವಿ ಬ್ಯಾಟರ್ ಅಜಿಂಕ್ಯ ಶೂನ್ಯ ಸುತ್ತಿ ಪೆವಿಲಿಯನ್ ಪೆರೆಡ್
ಬೆಂಗಳೂರು(ಜ.03): ಭಾರತ ಕ್ರಿಕೆಟ್ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ (Cheteshwar Pujara) ಹಾಗೂ ಅಜಿಂಕ್ಯ ರಹಾನೆ (Ajinkya Rahane) ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಜೋಹಾನ್ಸ್‌ಬರ್ಗ್ ಟೆಸ್ಟ್ (Johannesburg Test) ಪಂದ್ಯದಲ್ಲಿ ಸಿಕ್ಕಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಈ ಇಬ್ಬರು ಬ್ಯಾಟರ್‌ಗಳು ವಿಫಲವಾಗಿದ್ದಾರೆ. ದಕ್ಷಿಣ ಆಫ್ರಿಕಾದ ವೇಗಿ ಡ್ಯೂನೆ ಒಲಿವಿಯರ್ ಬೌಲಿಂಗ್‌ನಲ್ಲಿ ಚೇತೇಶ್ವರ್(03) ಹಾಗೂ ಅಜಿಂಕ್ಯ ರಹಾನೆ(00) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ, ಟೀಂ ಇಂಡಿಯಾ (Team India) ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಈ ಇಬ್ಬರು ಆಟಗಾರರಿಗೆ ಗೇಟ್‌ಪಾಸ್ ನೀಡಿ ಯುವಕರಿಗೆ ಅವಕಾಶ ನೀಡಲು ಇದು ಸಕಾಲ ಎಂದು ಫ್ಯಾನ್ಸ್ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಕಳೆದೆರಡು ವರ್ಷಗಳಿಂದ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ರನ್ ಗಳಿಸಲು ಸಾಕಷ್ಟು ಪರದಾಡುತ್ತಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಪೂಜಾರ ಕ್ರಮವಾಗಿ 20.37 ಹಾಗೂ 30.42ರ ಸರಾಸರಿಯಲ್ಲಿ ರನ್ ಗಳಿಸಿದ್ದರೆ, ಅಜಿಂಕ್ಯ ರಹಾನೆ 38.85 ಹಾಗೂ 19.57ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಚೇತೇಶ್ವರ್ ಪೂಜಾರ 2019ರ ಜನವರಿ ಬಳಿಕ ಇದುವರೆಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸಿಲ್ಲ. ಇನ್ನು ರಹಾನೆ ಕೂಡಾ 2019ರ ಅಕ್ಟೋಬರ್ ಬಳಿಕ ಮೂರಂಕಿ ಮೊತ್ತ ದಾಖಲಿಸಲು ವಿಫಲವಾಗಿದ್ದಾರೆ. ನಿರಂತರ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ರಹಾನೆ ಬ್ಯಾಟಿಂಗ್ ಸರಾಸರಿ ಇದೀಗ 40ಕ್ಕಿಂತ ಕೆಳಗೆ ಕುಸಿದಿದೆ.
undefined
ಕೊಹ್ಲಿ ಅನುಪಸ್ಥಿತಿಯಲ್ಲಿ ಜವಾಬ್ದಾರಿಯುತ ಪ್ರದರ್ಶನ ನೀಡಬೇಕಿತ್ತು: ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ(Virat Kohli) ಜೋಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ಅನುಭವಿ ಬ್ಯಾಟರ್‌ಗಳಾದ ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ತೋರಬೇಕಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಈ ಇಬ್ಬರು ಅಲ್ಪ ಮೊತ್ತಕ್ಕೆ ವಿಕೆಟ್ ಕೈಚೆಲ್ಲುವ ಮೂಲಕ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ.
Ind vs SA, 2nd Test: ಟೀಂ ಇಂಡಿಯಾಗೆ ಆರಂಭಿಕ ಆಘಾತ, ಪೂಜಾರ, ರಹಾನೆ ಮತ್ತೆ ಫೇಲ್..!
ಅನುಭವಿ ಬ್ಯಾಟರ್‌ಗಳು ಪದೇ ಪದೇ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವುದಕ್ಕೆ ಕ್ರಿಕೆಟ್ ಅಭಿಮಾನಿಗಳು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಪೈಕಿ ಓರ್ವ ಕ್ರಿಕೆಟ್ ಅಭಿಮಾನಿ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆಗೆ ಇನ್ನೆಷ್ಟು ಅವಕಾಶ ನೀಡಬೇಕೆಂದುಕೊಂಡಿದ್ದೀರಿ ಎಂದು ಪ್ರಶ್ನಿಸಿದ್ದಾನೆ. ಇನ್ನೊಬ್ಬ ಅಭಿಮಾನಿ, ಭಾರತ ಕ್ರಿಕೆಟ್ ತಂಡದ ಮ್ಯಾನೇಜ್‌ಮೆಂಟ್ ಈ ಇಬ್ಬರು ಆಟಗಾರರನ್ನು ತಂಡದಿಂದ ಹೊರದಬ್ಬಿ ಮುಂಬರುವ ಟೆಸ್ಟ್ ಪಂದ್ಯಗಳಲ್ಲಿ ಯುವ ಆಟಗಾರರಿಗೆ ಮಣೆ ಹಾಕುವ ಕಾಲ ಬಂದಿದೆ ಎಂದು ಟ್ವೀಟ್ ಮಾಡಿದ್ದಾನೆ.
Two in two for Olivier ☝️
Ajinkya Rahane is gone for a duck.
Watch live on https://t.co/CPDKNx77KV (in select regions) 📺 | https://t.co/BCpTa2JF2P https://t.co/vSuxpcDKwF
I think Pujara & Rahane have become Purane.
— Ramesh Srivats (@rameshsrivats)Time is running out for Pujara and Rahane. With Gill, Vihari, Iyer waiting, the pressure will be there and it's high time for the team management to take some tough decisions.
— Bhawana (@bhawnakohli5)First and now , how many more failures before Iyyer, SKY or VIhari gets opportunity in starting XI. 🔵🟢 pic.twitter.com/FAuT5KmzHV
— संकल्प Dubey 🇮🇳 (@sdSankalp26)Thank You Pujara🙏
Thank You Rahane🙏 pic.twitter.com/x93oqYevMy
Ajinkya Rahane when he meets Cheteshwar Pujara playing in Ranji matches against him after the South Africa series! pic.twitter.com/suy5pEDeKu
— Vishal Verma (@VishalVerma_9)Cheteshwar Pujara and Ajinkya Rahane has failed to perform on a consistent basis since 2020. Failures after Failures. 😑
Whole India to Them: pic.twitter.com/wuZclzRPBU
Pujara and Rahane in test team pic.twitter.com/VJshhHqR89
— Raj Patel (@Rajpatel5291)ಇನ್ನು ಹಲವು ನೆಟ್ಟಿಗರು ಈ ಇಬ್ಬರು ಅನುಭವಿ ಆಟಗಾರರಿಗೆ ಅವಕಾಶ ನೀಡುವುದಕ್ಕಿಂತ ಶ್ರೇಯಸ್ ಅಯ್ಯರ್‌ಗೆ ತಂಡದೊಳಗೆ ಸ್ಥಾನ ನೀಡಲಿ ಎಂದು ಬಿಸಿಸಿಐಗೆ ಸಲಹೆ ನೀಡಿದ್ದಾರೆ. ಇನ್ನೊಬ್ಬ ನೆಟ್ಟಿಗ, ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಅವರಿಗೆ ನಿಜಕ್ಕೂ ನಾಚಿಕೆಯಾಗಬೇಕು. ಯಾವುದೋ ಒಂದು ಇನಿಂಗ್ಸ್‌ನಲ್ಲಿ 50 ರನ್ ಬಾರಿಸಿ ಮುಂದಿನ ನಾಲ್ಕೈದು ಪಂದ್ಯಗಳಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುತ್ತಿರುವುದಕ್ಕೆ. ಅವರನ್ನು ತಂಡದಿಂದ ಕೈಬಿಡಬೇಕು ಹಾಗೂ ರಣಜಿ ಟ್ರೋಫಿಯಲ್ಲಿ ಅವರು ಆಡಲಿ. ಸಮಸ್ಯೆ ಏನೆಂದರೆ ತಂಡ ಜಯ ಸಾಧಿಸುತ್ತಿರುವುದರಿಂದ ಈ ಇಬ್ಬರು ಆಟಗಾರರ ವೈಫಲ್ಯ ಗೌಣವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
Rahane got a chance after Shreyas Iyer did THIS on his debut. Cant make sense of anything anymore pic.twitter.com/fMODc6CYdR
— MGT ERA🇮🇳 🇿🇦 #PuraneOut (@awkdipti)