
ಕಿವೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಮೊಹಮ್ಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ಅವರನ್ನು ಕೈಬಿಡಲಾಯಿತು. ಈ ನಿರ್ಧಾರವು ಜಾಲತಾಣದಲ್ಲಿ ಕ್ರಿಕೆಟ್ ವಲಯದಲ್ಲಿ ಭಾರಿ ಕೋಲಾಹಲಕ್ಕೆ ಸೃಷ್ಟಿಸಿತ್ತು. ಅಷ್ಟೇ ಅಲ್ಲ ಗವಾಸ್ಕರ್ನಿಂದ ಹಿಡಿದು ಹರ್ಷನ್ ಭೋಗ್ಲೆವರೆಗೆ ಎಲ್ಲರೂ ಇದನ್ನು ಟೀಕಿಸಿದ್ದರು. ಈ ನಿಟ್ಟಿನಲ್ಲಿ, ಶುಭಮನ್ ಗಿಲ್ ಮೊಹಮ್ಮದ್ ಸಿರಾಜ್ ಅವರ ಪ್ರಸ್ತುತ ಫಾರ್ಮ್ನಿಂದಾಗಿ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದು ಹೇಳಿದ್ದಾರೆ.
ಶುಭಮನ್ ಗಿಲ್ ಪತ್ರಿಕಾಗೋಷ್ಠಿಯಲ್ಲಿ ಮೊಹಮ್ಮದ್ ಸಿರಾಜ್ ನನ್ನ ಒಳ್ಳೆಯ ಸ್ನೇಹಿತ. ಅವರನ್ನು ತಂಡದಿಂದ ಕೈಬಿಡುವುದು ತುಂಬಾ ಕಷ್ಟಕರ ನಿರ್ಧಾರವಾಗಿತ್ತು ಎಂದು ಹೇಳಿದ್ದಾರೆ. ನಾವು ಒಟ್ಟಿಗೆ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ, ಅಷ್ಟೇ ಅಲ್ಲದೇ ನಾನು ಅವರನ್ನು ಮೊದಲಿನಿಂದಲೂ ಅರ್ಥ ಮಾಡಿಕೊಂಡಿದ್ದೇನೆ. ಟೆಸ್ಟ್ ಪಂದ್ಯಕ್ಕೂ ಮೊದಲು ನಾನು ಅವರೊಂದಿಗೆ ಚರ್ಚಿಸಿದ್ದೇನೆ. ಅಲ್ಲದೇ ಈ ನಿರ್ಧಾರವನ್ನು ಏಕೆ ತೆಗೆದುಕೊಂಡೆ ಎಂದು ಅವರಿಗೆ ವಿವರಿಸಿದ್ದೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಾನು ಹೇಳುತ್ತಿರುವುದನ್ನು ಮೊಹಮ್ಮದ್ ಸಿರಾಜ್ ಕೂಡ ಅರ್ಥಮಾಡಿಕೊಂಡಿದ್ದಾರೆ. ನೋಡಿ, ಪ್ರತಿಯೊಬ್ಬ ಆಟಗಾರನ ವೃತ್ತಿಜೀವನದಲ್ಲಿ ಅತ್ಯುತ್ತಮ ಸ್ಥಿತಿಯಲ್ಲಿಲ್ಲದ ಸಮಯ ಬರುತ್ತದೆ. ನಾವು ಆಟಗಾರರನ್ನು ಅವರ ಪ್ರಸ್ತುತ ಫಾರ್ಮ್ ಆಧರಿಸಿ ಆಯ್ಕೆ ಮಾಡಿದ್ದೇವೆ. ಆದ್ದರಿಂದ ಪತ್ರಿಕಾಗೋಷ್ಠಿಯಲ್ಲಿ, ಶುಭ್ಮನ್ ಗಿಲ್, ಮೊಹಮ್ಮದ್ ಸಿರಾಜ್ ಅವರನ್ನು ಅವರ ಪ್ರಸ್ತುತ ಫಾರ್ಮ್ ಕಾರಣದಿಂದಾಗಿ ತಂಡದಿಂದ ಕೈಬಿಡಲಾಗಿದೆ ಎನ್ನುವ ಸಂದೇಶ ರವಾನಿಸಿದ್ದಾರೆ.
ಕಿವೀಸ್ ವಿರುದ್ಧದ ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತ ತಂಡದ ನಾಯಕ ಶುಭಮನ್ ಗಿಲ್ ಅವರು ಬಾಲ್ಗೆ ಸಲಿವಾ ಹಚ್ಚುವ ಮೇಲಿನ ನಿಷೇಧ ತೆಗೆದುಹಾಕುವಂತೆ ಐಸಿಸಿಗೆ ಒತ್ತಾಯಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗ ಕೊನೆಗೊಂಡು ಹಲವು ವರ್ಷಗಳೇ ಕಳೆದಿದ್ದರೂ ಈ ಹಳೆಯ ನಿಯಮವನ್ನು ಇನ್ನೂ ಏಕೆ ಮುಂದುವರಿಸಲಾಗಿದೆ ಎಂದು ಅವರು ನೇರವಾಗಿ ಪ್ರಶ್ನಿಸಿದ್ದಾರೆ.
ನಾವು ಬಯಸಿದ ಫಲಿತಾಂಶ ಸಿಗದ ಕಾರಣ ಪಂದ್ಯ ಗೆಲ್ಲದಿರುವುದು ನಿರಾಶಾದಾಯಕವಾಗಿದೆ. ಇತ್ತೀಚಿನ ದಿನಗಳಲ್ಲಿ, ಡ್ರಾಗಳು ವಿರಳವಾಗಿವೆ, ಆದ್ದರಿಂದ ನಾವು ಅಂತಹ ಫಲಿತಾಂಶಗಳಿಗೆ ಒಗ್ಗಿಕೊಂಡಿಲ್ಲ ಎಂದು ಶುಭಮನ್ ಗಿಲ್ ಆ ಸಮಯದಲ್ಲಿ ಹೇಳಿದರು ಮತ್ತು ತಮ್ಮ ಕೋಪವನ್ನು ವ್ಯಕ್ತಪಡಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.