
ನ್ಯೂಜಿಲೆಂಡ್ ವಿರುದ್ಧದ ಹೀನಾಯ ಸೋಲಿಗೆ ಕೋಚ್ ಗೌತಮ್ ಗಂಭೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಕ್ಯಾಪ್ಟನ್ ಅಯ್ಯರ್ ಮೇಲೆ ಗಂಭೀರ್ ಮುನಿಸಿಕೊಂಡಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಲು ಅಸಾಧ್ಯವಾಗದ ಬಾಲ್‌ಗಳು ಅಂತಾ ಯಾವುದೂ ಇಲ್ಲ, ನಾವು ಕನಿಷ್ಠ 10 ಓವರ್‍ಗಳನ್ನಾದರೂ ದಾಟಬೇಕಿತ್ತು. ಆಗ ಪಿಚ್‌ನ ಅನುಭವ ಸಿಕ್ಕಿರೋದು. ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ ಚೆನ್ನಾಗಿ ಬೌಲಿಂಗ್ ಮಾಡಿದರು. ಆದರೆ ನಾವು ಅದನ್ನು ಚೆನ್ನಾಗಿ ನಿಭಾಯಿಸಬೇಕಾಗಿತ್ತು. ನೀವು ಸುಮಾರು 90 ರನ್‌ಗಳಿಗೆ ಆಲೌಟ್ ಆಗ್ತೀರಿ ಎಂದರೆ..ನಾವು ಯೋಚನೆ ಮಾಡಬೇಕಾಗಿರೋದು ಸಹಜ. ನಮ್ಮ ಮುಂದೆ ವಿಶ್ವಕಪ್ ಹತ್ತಿರದಲ್ಲಿದೆ. ಕಳೆದ ಪಂದ್ಯಗಳಲ್ಲಿ ನಾವು 7 ವಿಕೆಟ್‌ಗಳನ್ನ ಕಳೆದುಕೊಂಡಿದ್ದೇವೆ. ಇದೆಲ್ಲ ಕಳವಳಕಾರಿ ವಿಚಾರ.
ಕಳೆದ ಪಂದ್ಯಗಳಲ್ಲಿ ನಾವು 111 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡೆವು. ಇಂಥ ಸಂದರ್ಭದಲ್ಲಿ ನಾವು ಮಾನಸಿಕವಾಗಿ ಮತ್ತು ಕಾನ್ಪಿಡೆಂಟ್ ಆಗಿ ಇರಬೇಕು. ಇಂಥ ಪರಿಸ್ಥಿತಿ ಎದುರಾದಾಗ ನಾವು 30 ರಿಂ 40 ರನ್‌ಗಳವರೆಗೆ ವಿಕೆಟ್ ಕಳೆದುಕೊಳ್ಳದೇ ಹೋರಾಟ ನಡೆಸಬೇಕು. ಇವತ್ತು ನಮಗೆ ಅನುಭವ ಆಗಿದೆ. ಕೊನೆಯ ಪಂದ್ಯದಲ್ಲಿ ಇದೆಲ್ಲವನ್ನೂ ಸರಿಪಡಿಸಿಕೊಂಡು ಮುನ್ನುಗ್ಗುತ್ತೇವೆ ಎಂದಿದ್ದಾರೆ.
ನ್ಯೂಜಿಲೆಂಡ್ 333 ರನ್‌ಗಳಿಸಿದ್ದರೂ ಬೌಲರ್‍ಗಳನ್ನ ಅವರು ಸಮರ್ಥಿಸಿಕೊಂಡು ಬ್ಯಾಟರ್‍ಗಳ ಮೇಲೆ ಕಿಡಿಕಾರಿದರು. ಆದರೆ ಫೀಲ್ಡಿಂಗ್‌ನಲ್ಲಿ ಆದ ವ್ಯತ್ಯಾಸಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾವಿ ವಿಲ್ ಯಂಗ್ ಅವರ ಕ್ಯಾಚ್ ಪಡೆದುಕೊಂಡಿದ್ದರೆ ಮ್ಯಾಚ್ ತುಂಬಾ ಡಿಫರೆಂಟ್ ಆಗಿರುತ್ತಿತ್ತು. ಅಕಿಬ್ ನಬಿ ದರಾದೃಷ್ಟವಂತರಾದರು. ನಾವು ಕ್ಯಾಚ್‌ಗಳನ್ನ ಕೈಬಿಟ್ಟು ಬೆಲೆ ತೆತ್ತಿದ್ದೇವೆ. ನಮ್ಮ ಬೌಲಿಂಗ್ ಘಟಕದ ಬಗ್ಗೆ ಎಲ್ಲರೂ ಹೆಮ್ಮೆ ಪಡಬೇಕು ಎಂದಿದ್ದಾರೆ.
ಇದೇ ವೇಳೆ ನಾನು ತಾಂತ್ರಿಕ ದೋಷಗಳ ಬಗ್ಗೆ ಮಾತನ್ನಾಡೋದಿಲ್ಲ. ಚೆಂಡಿನಲ್ಲಿ ಹೆಚ್ಚಿನ ಚಲನೆ ಇರಲಿಲ್ಲ. ಬಾಲ್ ಎಷ್ಟೇ ವೇಗವಾಗಿ, ನಿಧಾನವಾಗಿ ಬಂದರೂ ಅದನ್ನು ಕಂಟ್ರೋಲ್‌ಗೆ ತೆಗೆದುಕೊಳ್ಳೋದು ಬ್ಯಾಟರ್‍ಗಳ ಕೆಲಸ ಎಂದು ಮತ್ತೆ ಬ್ಯಾಟರ್‍ಗಳನ್ನೇ ದೂಷಿಸಿದ್ದಾರೆ. ಹಿರಿಯ ಬ್ಯಾಟರ್‍ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಅವರ ಬೇಜಾವಾಬ್ದಾರಿ ಆಟಕ್ಕೆ ಕೋಚ್ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಗಂಭೀರ್ ಯಾರ ಹೆಸರನ್ನೂ ಉಲ್ಲೇಖ ಮಾಡಿಲ್ಲ.
ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ 333 ರನ್‌ಗಳಿಸಿತ್ತು. ಈ ಗುರಿಯನ್ನ ಬೆನ್ನು ಹತ್ತಿದ್ದ ಭಾರತ ತಂಡ 26.4 ಓವರ್‍ಗೆ ಎಲ್ಲಾ ವಿಕೆಟ್ ಕಳೆದುಕೊಂಡು 89 ರನ್‌ಗಳಿಸಿ ಸೋಲಿಗೆ ಶರಣಾಯ್ತು. ಮ್ಯಾಟ್ ಹೆನ್ರಿ ಭಾರತ ತಂಡಕ್ಕೆ ಆಘಾತ ನೀಡಿದರು. ಮೊದಲ ಓವರ್‍ನಲ್ಲೇ ಮೂರು ವಿಕೆಟ್ ಕಿತ್ತರು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಅವರ ವಿಕೆಟ್ ಬ್ಯಾಕ್ ಟು ಬ್ಯಾಕ್ ಉರುಳಿದವು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.