
ಮೊದಲ ಎರಡು ಟಿ-20 ಪಂದ್ಯಗಳನ್ನು ಗೆದ್ದುಕೊಂಡಿರುವ ಟೀಂ ಇಂಡಿಯಾ ಮೂರನೇ ಮ್ಯಾಚ್ಗಾಗಿ ಅತ್ಯುತ್ಸಾಹದಲ್ಲಿದೆ. ಅಕ್ಟೋಬರ್ 27 ರಂದು Wellington Regional Stadiumನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮತ್ತೆ ಮುಖಾಮುಖಿ ಆಗಲಿವೆ. ನ್ಯೂಜಿಲೆಂಡ್ಗೆ ಸರಣಿ ಉಳಿಸಿಕೊಳ್ಳಬೇಕು ಅಂದ್ರೆ ಮೂರನೇ ಪಂದ್ಯವನ್ನು ಗೆಲ್ಲೋದು ಅನಿವಾರ್ಯ ಆಗಿದೆ. ಇತ್ತ ಟೀಂ ಇಂಡಿಯಾ ಈ ಪಂದ್ಯವನ್ನೂ ಗೆದ್ದು ಟಿ20 ಸರಣಿಯನ್ನ ತನ್ನಾಗಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.
ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಭಾರತ ತಂಡವು ತನ್ನ ಪ್ಲೇಯಿಂಗ್-11ನಲ್ಲಿ ಪ್ರಮುಖ ಬದಲಾವಣೆಗಳನ್ನ ಮಾಡುವ ಸಾಧ್ಯತೆ ಇದೆ. ಭಾರೀ ನಿರೀಕ್ಷೆ ಇಟ್ಕೊಂಡಿದ್ದ ಅನುಭವಿ ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್ ಅವರಿಗೆ ಕೊಕ್ ಪಕ್ಕಾ ಎನ್ನಲಾಗ್ತಿದೆ. ಕಳೆದ ಎರಡು ಪಂದ್ಯಗಳಲ್ಲೂ ಭುವನೇಶ್ವರ್ ಕುಮಾರ್ ತುಂಬಾನೇ ದುಬಾರಿ ಆಗಿದ್ದಾರೆ. ಮೊದಲ ಪಂದ್ಯದಲ್ಲಿ 49 ರನ್ಗಳನ್ನ ಬಿಟ್ಟುಕೊಟ್ಟರೆ, ಎರಡನೇ ಟಿ20ಯಲ್ಲಿ 50 ರನ್ ಬಿಟ್ಟುಕೊಟ್ಟರು. ಮೊದಲ ಪಂದ್ಯದಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ಇನ್ನು ಎರಡನೇ ಪಂದ್ಯದಲ್ಲಿ ಕೇವಲ ಒಂದು ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ. ಒಟ್ಟು 90 ಟಿ20 ಪಂದ್ಯಗಳನ್ನ ಆಡಿರುವ ಭುವನೇಶ್ವರ್ ಕುಮಾರ್ ಅವರಿಗೆ ಕೊಕ್ ನೀಡಿ, ಮಯಾಂಕ್ ಯಾದವ್ಗೆ ತಂಡದಲ್ಲಿ ಸ್ಥಾನ ನೀಡುವ ಲೆಕ್ಕಾಚಾರ ಶ್ರೇಯಸ್ ಅಯ್ಯರ್ ಪಡೆ ಮಾಡ್ತಿದೆ.
ಮಯಾಂಕ್ ಯಾದವ್ ಅವರು ಎರಡನೇ ಟಿ20 ಪಂದ್ಯದಲ್ಲಿ ಆಡಿದರು. ಪ್ರಿನ್ಸ್ ಯಾದವ್ ಬದಲಿಗೆ ಫೀಲ್ಡಿಗೆ ಇಳಿದಿದ್ದ ಮಯಾಂಕ್ ಯಾದವ್.. ತಮ್ಮ ಕೋಟಾದ ನಾಲ್ಕು ಓವರ್ನಲ್ಲಿ 40 ರನ್ ನೀಡಿ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಹಾಗೆಯೇ ಇನ್ನೊಂದು ಬದಲಾವಣೆ ವೈಭವ್ ಸೂರ್ಯವಂಶಿ. ಎರಡನೇ ಪಂದ್ಯದಲ್ಲಿ ಸೂರ್ಯವಂಶಿಗೆ ಆಡುವ ಅವಕಾಶ ಸಿಕ್ಕಿತ್ತು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದಿದ್ದ ಸೂರ್ಯವಂಶಿ 8 ಬಾಲ್ಗಳನ್ನ ಎದುರಿಸಿ ಕೇವಲ 4 ರನ್ಗಳಿಸಿ ಔಟ್ ಆದರು.
ಗಾಯಗೊಂಡಿರುವ ಇಶಾನ್ ಕಿಶನ್ ತಂಡಕ್ಕೆ ಕಂಬ್ಯಾಕ್ ಮಾಡುವ ಸಾಧ್ಯತೆ ಇದ್ದು, ಹೀಗಾಗಿ ವೈಭವ್ ಸೂರ್ಯವಂಶಿಗೆ ಮತ್ತೆ ಬೆಂಚ್ನಲ್ಲಿ ಕೂರುವ ಸಾಧ್ಯತೆ ಇದೆ. ಕಳೆದ ಎರಡು ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ನಮನ್ ಧೀರ್, ನಿತೀಶ್ ರೆಡ್ಡಿ ಅವರು ತಮಗೆ ಸಿಕ್ಕಿರುವ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಹೀಗಾಗಿ ಇವರಲ್ಲಿ ಯಾವುದೇ ಬದಲಾವಣೆ ಸಾಧ್ಯತೆ ಕಡಿಮೆ ಇದೆ. ಹಾಗಾಗಿ ಈ ಬ್ಯಾಟರ್ಗಳು ಪ್ಲೇಯಿಂಗ್ ಇಲೆವೆನ್ನಲ್ಲಿ ಇರೋದು ಪಕ್ಕಾ ಆಗಿದೆ. ಇನ್ನು, ಅಕ್ಷರ್ ಪಟೇಲ್ ಅವರಿಗೆ ವಿಶ್ರಾಂತಿ ನೀಡುವ ಬಗ್ಗೆ ಚರ್ಚೆ ಇದೆ. ಅಕ್ಷರ್ ಬದಲಿಗೆ ಸ್ಪಿನ್ನರ್fಗಳಾದ ಕುಲ್ದೀಪ್ ಯಾದವ್ ಅಥವಾ ವರುಣ್ ಚಕ್ರವರ್ತಿಗೆ ಆಡುವ ಅವಕಾಶ ಸಿಕ್ಕರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.
ಸಂಭಾವ್ಯ ಪ್ಲೇಯಿಂಗ್-11: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ನಮನ್ ಧೀರ್, ಅಕ್ಷರ್ ಪಟೇಲ್, ಪ್ರಿನ್ಸ್ ಯಾದವ್, ಅರ್ಷದೀಪ್ ಸಿಂಗ್, ಮಯಾಂಕ್ ಯಾದವ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.