Vaibhav: ಅವನ ಕೈಲಿ ಅದು ಸಾಧ್ಯವೇ ಇಲ್ಲ; ವೈಭವ್ ಆಟ ನೋಡಿ ಮ್ಯಾನೇಜ್‌ಮೆಂಟ್ ವಿರುದ್ಧ ಕೆಂಡಕಾರಿದ ಮಾಜಿ ಪ್ಲೇಯರ್

Published : Oct 25, 2026, 03:15 PM IST
Vaibhav Sooryavanshi

ಸಾರಾಂಶ

ನ್ಯೂಜಿಲೆಂಡ್ ವಿರುದ್ಧದ 2ನೇ T20Iನಲ್ಲಿ ವೈಭವ್ ಸೂರ್ಯವಂಶಿ ಬ್ಯಾಟಿಂಗ್‌ ನೋಡಿ ಮಾಜಿ ಆಟಗಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮ್ಯಾನೇಜ್‌ಮೆಂಟ್‌ ತೀಕ್ಷ್ನ ತಿರುಗೇಟನ್ನು ಸಹ ನೀಡಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ನ್ಯೂಜಿಲೆಂಡ್ ವಿರುದ್ಧದ ಎರಡನೇ T20 ಪಂದ್ಯದಲ್ಲಿ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಅವರ ದೀರ್ಘ ಕಾಯುವಿಕೆ ಅಂತ್ಯಗೊಂಡು ಆಡುವ ಪ್ಲೇಯಿಂಗ್‌ ಇಲೆವೆನ್‌ ಅಲ್ಲಿ ಸ್ಥಾನ ಸಿಕ್ಕಿತಾದರೂ, ಅವರ ಬ್ಯಾಟಿಂಗ್ ಕ್ರಮಾಂಕದ ಪ್ರಯೋಗದ ಬಗ್ಗೆ ಈಗ ಭಾರಿ ಚರ್ಚೆ ಹಾಗೂ ಆಕ್ರೋಶ ಶುರುವಾಗಿದೆ. ಗಾಯಗೊಂಡ ಇಶಾನ್‌ ಕಿಶನ್‌ ಬದಲಿಗೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವೈಭವ್, ಕೇವಲ 4 ರನ್‌ಗಳಿಗೆ ನಿರ್ಗಮಿಸಿ ತೀವ್ರ ನಿರಾಶೆ ಮೂಡಿಸಿದರು. ಈ ಪ್ರದರ್ಶನದ ಬೆನ್ನಲ್ಲೇ ಭಾರತದ ಮಾಜಿ ಸ್ಟಾರ್ ಆಟಗಾರ ರವಿಚಂದ್ರನ್ ಅಶ್ವಿನ್, ಗೌತಮ್ ಗಂಭೀರ್ ನೇತೃತ್ವದ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ನಿರ್ಧಾರ ಕಟುವಾಗಿ ಪ್ರಶ್ನಿಸಿ ಕೆಂಡಕಾರಿದ್ದಾರೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ನೀರಿನಿಂದ ಹೊರತೆಗೆದ ಮೀನಿನಂತೆ ಒದ್ದಾಡಿದರು!

ಪಂದ್ಯದ ನಂತರ ಆರ್‍‌.ಅಶ್ವಿನ್‌, ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವುದು ವೈಭವ್ ಸಾಮರ್ಥ್ಯಕ್ಕೆ ಮೀರಿದ ವಿಷಯ. ಈ ಕ್ರಮಾಂಕದಲ್ಲಿ ತಮ್ಮ ಸಹಜ ಆಟವಾಡಲು ಹೆಣಗಾಡುತ್ತಿದ್ದ ವೈಭವ್ ಅವರನ್ನು ನೋಡಿದರೆ ನೀರಿನಿಂದ ಹೊರತೆಗೆದ ಮೀನಿನಂತೆ ಕಾಣುತ್ತಿದ್ದರು ಎಂದು ಮಾರ್ಮಿಕವಾಗಿ ಹೇಳಿದರು. ಈ ಪಂದ್ಯದ ಅತಿ ದೊಡ್ಡ ವೈಫಲ್ಯವೆಂದರೆ ಅದು ಸೂರ್ಯವಂಶಿ ಅವರ ಕ್ರಮಾಂಕದ ನಿರ್ಧಾರ ಎಂದು ಕರೆದ ಅಶ್ವಿನ್, ಯುವ ಆಟಗಾರನನ್ನು ಅವರ ಸಹಜ ಸ್ಥಾನವಲ್ಲದ ಜಾಗದಲ್ಲಿ ಆಡಿಸಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಗಂಭೀರ್ ಮ್ಯಾನೇಜ್‌ಮೆಂಟ್‌ಗೆ ಅಶ್ವಿನ್ ಮಹತ್ವದ ಸಲಹೆ!

ತಂಡದ ಆಡಳಿತ ಮಂಡಳಿಗೆ ನೇರ ಸಲಹೆ ನೀಡಿರುವ ಅಶ್ವಿನ್, ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಇನ್ನಿಂಗ್ಸ್ ಆರಂಭಿಸುತ್ತಿರುವಾಗ, ವೈಭವ್, ಅಭಿಷೇಕ್ ಮತ್ತು ಸ್ಯಾಮ್ಸನ್ ಮೂವರನ್ನೂ ಒಂದೇ XI ನಲ್ಲಿ ಆಡಿಸಲೇಬೇಕಾದರೆ, ಸ್ಯಾಮ್ಸನ್ ಅವರನ್ನು 3 ನೇ ಸ್ಥಾನಕ್ಕೆ ಇಳಿಸಬೇಕು. ಹಿಂದೆ ಏಷ್ಯನ್ ಕ್ರೀಡಾಕೂಟದಲ್ಲೂ ಮೂವರೂ ಒಟ್ಟಿಗೆ ಆಡಿದಾಗ ಸ್ಯಾಮ್ಸನ್ 3ನೇ ಸ್ಥಾನದಲ್ಲೇ ಆಡಿದ್ದರು. ಅದನ್ನು ಗಂಭೀರ್ ಮತ್ತು ಮ್ಯಾನೇಜ್‌ಮೆಂಟ್ ನೆನಪಿನಲ್ಲಿಡಬೇಕು ಎಂದಿದ್ದಾರೆ.

ಮ್ಯಾನೇಜ್‌ಮೆಂಟ್‌ಗೆ ಬೃಹತ್ ಸವಾಲಾದ ವೈಭವ್ ಸ್ಥಾನ!

ಪ್ರಸ್ತುತ ಟೀಮ್ ಇಂಡಿಯಾ ಪರ ತಿಲಕ್ ವರ್ಮಾ ಮತ್ತು ಅಭಿಷೇಕ್ ಶರ್ಮಾ ನಿರಂತರವಾಗಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಪ್ಲೇಯಿಂಗ್ XIನಲ್ಲಿ ಹೇಗೆ ಸೇರಿಸುವುದು ಎಂಬುದೇ ಮ್ಯಾನೇಜ್‌ಮೆಂಟ್‌ಗೆ ದೊಡ್ಡ ಗೊಂದಲವಾಗಿ ಪರಿಣಮಿಸಿದೆ. ಇದೇ ಗೊಂದಲದ ಕಾರಣದಿಂದಾಗಿಯೇ ವೈಭವ್ ವೆಸ್ಟ್ ಇಂಡೀಸ್ ವಿರುದ್ಧದ T20 ಸರಣಿಯಲ್ಲೂ ಆಡಲು ಸಾಧ್ಯವಾಗಿರಲಿಲ್ಲ. ಈಗ ಸಿಕ್ಕ ಅವಕಾಶದಲ್ಲೂ ತಪ್ಪು ಕ್ರಮಾಂಕದಲ್ಲಿ ಆಡಿಸಿ ಅವರ ವೈಫಲ್ಯಕ್ಕೆ ಹಾದಿ ಮಾಡಿಕೊಟ್ಟಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಕ್ರಿಕೆಟ್ ವಲಯದಲ್ಲಿ ಉದ್ಭವಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IND vs NZ 3rd T20 ಮ್ಯಾಚ್: ಅನುಭವಿ ಬ್ಯಾಟರ್ ಎಂಟ್ರಿ, ಇಬ್ಬರು ಸ್ಟಾರ್ ಔಟ್; ಸಂಭಾವ್ಯ ಪ್ಲೇಯಿಂಗ್ ಇಲೆವೆನ್
Sachin Tendulkar: ತಾಯಿಯ ಕೈ ಅಡುಗೆಗೆ ಮನಸೋತ ಸಚಿನ್; ಮುದ್ದಾದ ವಿಡಿಯೋ ಹಂಚಿಕೊಂಡ ತೆಂಡೂಲ್ಕರ್ ಹೇಳಿದ್ದೇನು?