Ind vs NZ ಸಂಜು ಸ್ಯಾಮ್ಸನ್ ಕಡೆಗಣನೆ, ವಿವಿಎಸ್ ಲಕ್ಷ್ಮಣ್‌ ಮೇಲೆ ಕಿಡಿಕಾರಿದ ಸಂಸದ ಶಶಿ ತರೂರ್..!

By Naveen KodaseFirst Published Nov 30, 2022, 2:27 PM IST
Highlights

ಸಂಜು ಸ್ಯಾಮ್ಸನ್ ಪರ ಬ್ಯಾಟ್ ಬೀಸಿದ ಕಾಂಗ್ರೆಸ್ ಸಂಸದ ಶಶಿ ತರೂರ್
ಪಂತ್ ಸಮರ್ಥಿಸಿಕೊಂಡ ಲಕ್ಷ್ಮಣ್‌ಗೆ ಕ್ಲಾಸ್ ತೆಗೆದುಕೊಂಡ ಶಶಿ ತರೂರ್
ಪಂತ್‌ ಹಾಗೂ ಸಂಜು ಆಟವನ್ನು ತುಲನೆ ಮಾಡಿದ ಕಾಂಗ್ರೆಸ್ ಸಂಸದ

ನವದೆಹಲಿ(ನ.30): ಕೇರಳ ಮೂಲದ ಟೀಂ ಇಂಡಿಯಾ ಪ್ರತಿಭಾನ್ವಿತ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್‌, ಭಾರತ ತಂಡದಲ್ಲಿ ಸ್ಥಿರವಾದ ಸ್ಥಾನಗಿಟ್ಟಿಸಿಕೊಳ್ಳಲು ಪದೇ ಪದೇ ವಿಫಲವಾಗುತ್ತಿದ್ದಾರೆ. ಹಲವಾರು ಬಾರಿ ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್ ಸ್ಥಾನ ಪಡೆದರೂ, ಆಡಿದ್ದಕ್ಕಿಂತ ಬೆಂಚ್ ಕಾಯಿಸಿದ್ದೇ ಹೆಚ್ಚು  ಎನ್ನುವಂತಾಗಿದೆ. ನ್ಯೂಜಿಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ 36 ರನ್ ಗಳಿಸಿದರೂ ಸಹಾ, ಎರಡೂ ಹಾಗೂ ಮೂರನೇ ಏಕದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಆಡುವ ಹನ್ನೊಂದರ ಬಳಗದಿಂದ ಹೊರಗಿಡಲಾಯಿತು. ಸಂಜು ಸ್ಯಾಮ್ಸನ್‌ ಅವರನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ಕಾಂಗ್ರೆಸ್‌ ಸಂಸದ ಶಶಿ ತರೂರ್ ಅಸಮಾಧಾನ ಹೊರಹಾಕಿದ್ದಾರೆ. 

ಮೂರನೇ ಏಕದಿನ ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಹಂಗಾಮಿ ಹೆಡ್ ಕೋಚ್ ವಿವಿಎಸ್ ಲಕ್ಷ್ಮಣ್, ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು. ಇದಕ್ಕೆ ಶಶಿ ತರೂರು ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ತಿರುಗೇಟು ನೀಡಿದ್ದರು. "ರಿಷಭ್ ಪಂತ್ 4ನೇ ಕ್ರಮಾಂಕದಲ್ಲಿ ಈ ಹಿಂದೆ ಚೆನ್ನಾಗಿ ಆಡಿದ್ದಾರೆ. ಹಾಗಾಗಿ ಅವರಿಗೆ ನಾವು ಬೆಂಬಲವಾಗಿ ನಿಲ್ಲಬೇಕು ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ. ಅವರೊಬ್ಬ ಒಳ್ಳೆಯ ಆಟಗಾರ ಎನ್ನುವುದು ಹೌದು, ಆದರೆ ಅವರು ಕಳೆದ 11 ಇನಿಂಗ್ಸ್‌ಗಳ ಪೈಕಿ 10 ಇನಿಂಗ್ಸ್‌ಗಳಲ್ಲಿ ಫೇಲ್ ಆಗಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಸರಾಸರಿ 66 ಇದೆ. ಅವರು ಕಳೆದ 5 ಏಕದಿನ ಇನಿಂಗ್ಸ್‌ಗಳಲ್ಲಿ ಅತ್ಯುತ್ತಮವಾಗಿಯೇ ರನ್ ಗಳಿಸಿದ್ದಾರೆ ಹೀಗಿದ್ದೂ ಅವರನ್ನು ಬೆಂಚ್ ಕಾಯಿಸುವಂತೆ ಮಾಡಿದ್ದೀರ. ಬೇಕಿದ್ದರೇ ನೀವೇ ಅಂಕಿ-ಅಂಶ ನೋಡಿ" ಎಂದು ಟ್ವೀಟ್ ಮಾಡಿದ್ದಾರೆ.

"Pant has done well at No. 4, so it is important to back him," says . He's a good player out of form who's failed in ten of his last 11 innings; Samson averages 66 in ODIs, has made runs in all his last five matches & is on the bench. Go figure.

— Shashi Tharoor (@ShashiTharoor)

ರಿಷಭ್ ಪಂತ್ ಮತ್ತೊಂದು ವೈಫಲ್ಯ ಅನುಭವಿಸಿದರೆ ಸೀಮಿತ ಓವರ್‌ಗಳ ಕ್ರಿಕೆಟ್‌ನಿಂದ ಅವರಿಗೆ ವಿಶ್ರಾಂತಿ ನೀಡುವುದು ಒಳಿತು. ಸಂಜು ಸ್ಯಾಮ್ಸನ್‌ಗೆ ಮತ್ತೊಂದು ಅವಕಾಶವನ್ನು ವಂಚಿಸಲಾಯಿತು. ಅವರೀಗ ಐಪಿಎಲ್‌ವರೆಗೂ ಕಾಯಬೇಕು. ಅಲ್ಲಿ ಅವರು ತಾವು ಭಾರತ ತಂಡದ ಪರ ಯಾವುದೇ ಕ್ರಮಾಂಕದಲ್ಲಿ ಆಡಬಲ್ಲೇ ಎಂದು ತೋರಿಸಲು ಐಪಿಎಲ್‌ಗಾಗಿ ಕಾಯಬೇಕು ಎಂದು ಮತ್ತೊಂದು ಟ್ವೀಟ್‌ನಲ್ಲಿ ಶಶಿ ತರೂರು ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಕಾಲೆಳೆದಿದ್ದಾರೆ.

One more failure for Pant, who clearly needs a break from white-ball cricket. One more opportunity denied to who now has to wait for the to show that he’s one of the best too-order bats in India. https://t.co/RpJKkDdp5n

— Shashi Tharoor (@ShashiTharoor)

ಸಂಜು ಸ್ಯಾಮ್ಸನ್ ಇದುವರೆಗೂ ಭಾರತ ಪರ 11 ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಿದ್ದು, 66ರ ಬ್ಯಾಟಿಂಗ್ ಸರಾಸರಿಯಲ್ಲಿ 330 ರನ್ ಬಾರಿಸಿದ್ದಾರೆ. ಇನ್ನೊಂದೆಡೆ ರಿಷಭ್ ಪಂತ್ ಕಳೆದ ಮೂರು ಏಕದಿನ ಪಂದ್ಯಗಳಿಂದ ಕೇವಲ 31 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಮೂರನೇ ಏಕದಿನ ಪಂದ್ಯದಲ್ಲಾದರೂ ರಿಷಭ್ ಪಂತ್ ದೊಡ್ಡ ಇನಿಂಗ್ಸ್‌ ಕಟ್ಟಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಮೂರನೇ ಏಕದಿನ ಪಂದ್ಯದಲ್ಲಿ ಪಂತ್ ಕೇವಲ 10 ರನ್ ಬಾರಿಸಿ ಲಾಕಿ ಫರ್ಗ್ಯೂಸನ್‌ಗೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ್ದರು.

#JusticeForSamson: ರಿಷಭ್ ಪಂತ್ ಫೇಲ್ ಬೆನ್ನಲ್ಲೇ ಸಂಜು ಸ್ಯಾಮ್ಸನ್‌ ಪರ ನೆಟ್ಟಿಗರ ಅಭಿಯಾನ..!

ಸಂಜು ಸ್ಯಾಮ್ಸನ್‌, ನ್ಯೂಜಿಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಗೂ ಭಾರತ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಆದರೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದರು. ಇನ್ನು ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಸ್ಥಾನ ನೀಡಲಾಗಿತ್ತು. ಆದರೆ ಉಳಿದೆರಡು ಪಂದ್ಯಗಳಿಗೆ ಹೆಚ್ಚುವರೆ ಬೌಲರ್ ಅಗತ್ಯವಿದೆ ಎನ್ನುವ ನೆಪವೊಡ್ಡಿ ಸಂಜು ಸ್ಯಾಮ್ಸನ್‌ಗೆ ಬೆಂಚ್ ಕಾಯಿಸುವಂತೆ ಮಾಡಲಾಗಿತ್ತು.

click me!