
ಅಹಮ್ಮದಾಬಾದ್(ಫೆ.24): ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಕಾರಣ ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ತಂಡಕ್ಕೆ ಸ್ಪಿನ್ ಶಾಕ್ ನೀಡಿದ ಟೀಂ ಇಂಡಿಯಾ ಕೇವಲ 112 ರನ್‌ಗಳಿಗೆ ಕಟ್ಟಿ ಹಾಕಿತು. ಇತ್ತ ಬ್ಯಾಟಿಂಗ್‌ನಲ್ಲಿ ಭಾರತ ದಿಟ್ಟ ಹೋರಾಟ ಪ್ರದರ್ಶಿಸಿದೆ. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಕೇವಲ 13 ರನ್ ಹಿನ್ನಡೆಯಲ್ಲಿದೆ.
ಮೊಟೆರಾ ಕ್ರೀಡಾಂಗಣಕ್ಕೆ ಮೋದಿ ಹೆಸರು; ಭುಗಿಲೆದ್ದ ವಿವಾದಕ್ಕೆ ಕೇಂದ್ರ ಸ್ಪಷ್ಟನೆ!...
ಮೊದಲ ದಿನ ಇಂಗ್ಲೆಂಡ್ ತಂಡಕ್ಕೆ ಸಿಕ್ಕಿದ್ದು ಟಾಸ್ ಗೆದ್ದ ಸಂಭ್ರಮ ಹಾಗೂ ಶುಭಮನ್ ಗಿಲ್, ಚೇತೇಶ್ವರ್ ಪೂಜಾರ ಹಾಗೂ ವಿರಾಟ್ ಕೊಹ್ಲಿ ವಿಕೆಟ್ ಕಬಳಿಸಿದ ಸಂಭ್ರಮ ಹೊರತು ಪಡಿಸಿದರೆ ಇನ್ಯಾವುದೇ ಸಂಭ್ರಮ ಇಂಗ್ಲೆಂಡ್ ಪಾಳಯಕ್ಕೆ ದಕ್ಕಲಿಲ್ಲ. ಇಂಗ್ಲೆಂಡ್ ತಂಡವನ್ನ 112 ರನ್‌ಗೆ ಆಲೌಟ್ ಮಾಡಿದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ನೀಡಿದೆ.
ಶುಭಮನ್ ಗಿಲ್, ಚೇತೇಶ್ವರ್ ಪೂಜಾರ ಹಾಗೂ ನಾಯಕ ವಿರಾಟ್ ಕೊಹ್ಲಿ ಬಹುಬೇಗನೆ ವಿಕೆಟ್ ಕೈ ಚೆಲ್ಲಿದರು. ಗಿಲ್ 11, ಪೂಜಾರಾ ಶೂನ್ಯ ಹಾಗೂ ಕೊಹ್ಲಿ 27 ರನ್ ಸಿಡಿಸಿ ಔಟಾದರು. ಆದರೆ ಆಸರೆಯಾದ ರೋಹಿತ್ ಶರ್ಮಾ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು.
ಇಂಗ್ಲೆಂಡ್‌ನ್ನು ಅಲ್ಪಮೊತ್ತಕ್ಕೆ ಆಲೌಟ್ ಮಾಡಿ ಭಾರತ ಬರೆದ ದಾಖಲೆ ಒಂದೆರಡಲ್ಲ!.
ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ 99 ರನ್ ಸಿಡಿಸಿದೆ. ರೋಹಿತ್ ಶರ್ಮಾ ಅಜೇಯ 57 ಹಾಗೂ ಅಜಿಂಕ್ಯ ರಹಾನೆ ಅಜೇಯ 1 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಕೇವಲ 13 ರನ್ ಹಿನ್ನಡೆಯಲ್ಲಿದೆ.
ಟೀಂ ಇಂಡಿಯಾ ಸ್ಪಿನ್ ಮೋಡಿ:
ಮೊದಲ ಟೆಸ್ಟ್ ಪಂದ್ಯದ ರೀತಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಬೃಹತ್ ಮೊತ್ತದ ಕನಸು ಕಂಡಿತ್ತು. ಆದರೆ ಅಕ್ಸರ್ ಪಟೇಲ್ ಹಾಗೂ ಆರ್ ಅಶ್ವಿನ್ ಸ್ಪಿನ್ ಮೋಡಿಗೆ ಎಲ್ಲವೂ ತಲೆಕೆಳಗಾಯಿತು. ಅಕ್ಸರ್ ಪಟೇಲ್ 6 ವಿಕೆಟ್ ಕಬಳಿಸಿದರೆ, ಆರ್ ಅಶ್ವಿನ್ 3 ಹಾಗೂ ಇಶಾಂತ್ ಶರ್ಮಾ 1 ವಿಕೆಟ್ ಕಬಳಿಸಿದರು.
ಝಾಕ್ ಕ್ರಾವ್ಲಿ ಸಿಡಿಸಿದ 53 ರನ್ ಹೊರತು ಪಡಿಸಿದರೆ ಇಂಗ್ಲೆಂಡ್ ತಂಡದ ಇತರ ಬ್ಯಾಟ್ಸ್‌ಮನ್ ಅಬ್ಬರಿಸಲಿಲ್ಲ. ಹೀಗಾಗಿ 112 ರನ್‌ಗಳಿಗೆ ಆಲೌಟ್ ಆಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.