
ಅಮಹ್ಮದಾಬಾದ್(ಫೆ.24): ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉದ್ಘಾಟಿಸಿದ ಮೊಟೆರಾ ಕ್ರೀಡಾಂಗಣಕ್ಕೆ ಇದೀಗ ನರೇಂದ್ರ ಮೋದಿ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಲಾಗಿದೆ. ವಿಶ್ವದ ಅತೀ ದೊಡ್ಡ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದೆ. ಮೊದಲ ದಿನವೇ ಇಂಗ್ಲೆಂಡ್ ತಂಡವನ್ನು 112 ರನ್‌ಗಳಿಗೆ ಆಲೌಟ್ ಮಾಡಿ ಹಲವು ದಾಖಲೆ ಬರೆದಿದೆ.
ಪಿಂಕ್ ಬಾಲ್ ಟೆಸ್ಟ್; ಅಕ್ಸರ್ ಮಾರಕ ದಾಳಿ, ಇಂಗ್ಲೆಂಡ್ ಅಲ್ಪ ಮೊತ್ತಕ್ಕೆ ಆಲೌಟ್
ನವೀಕರಣಗೊಂಡ ಮೊಟೆರಾ ಕ್ರೀಡಾಂಗಣದಲ್ಲಿ ಮೊದಲ ವಿಕೆಟ್ ಕಬಳಿಸಿದ ಹೆಗ್ಗಳಿಕೆಗೆ ಇಶಾಂತ್ ಶರ್ಮಾ ಪಾತ್ರರಾಗಿದ್ದಾರೆ. ವಿಶೇಷ ಅಂದರೆ ಇಶಾಂತ್ ಶರ್ಮಾಗೆ ಇದು 100ನೇ ಟೆಸ್ಟ್ ಪಂದ್ಯ. ಪಂದ್ಯಕ್ಕೂ ಮೊದಲು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಗೃಹ ಸಚಿವ ಅಮಿತ್ ಶಾ, ಇಶಾಂತ್ ಶರ್ಮಾರನ್ನ ಸನ್ಮಾನಿಸಿದರು.
ಇಂಗ್ಲೆಂಡ್ ಆರಂಭಿಕ ಸಿಬ್ಲಿ ವಿಕೆಟ್ ಕಬಳಿಸೋ ಮೂಲಕ 100ನೇ ಟೆಸ್ಟ್ ಪಂದ್ಯದಲ್ಲಿ ಇಶಾಂತ್ ಆರಂಭದಲ್ಲೇ ಭಾರತಕ್ಕೆ ಮೇಲುಗೈ ತಂದುಕೊಟ್ಟರು. ಕಪಿಲ್ ದೇವ್ ಬಳಿಕ 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ಭಾರತದ ವೇಗಿ ಅನ್ನೋ ಹಿರಿಮೆಯೂ ಇಶಾಂತ್ ಪಾಲಿಗೆದೆ.
ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನಕ್ಕೆ ನರೇಂದ್ರ ಮೋದಿ ಹೆಸರು ಮರುನಾಮಕರಣ
ಇಶಾಂತ್ ಬಳಿಕ ಅಕ್ಸರ್ ಪಟೇಲ್ ಆರ್ಭಟ ಆರಂಭಗೊಂಡಿತು ಆರ್ ಅಶ್ವಿನ್ ಜೊತೆಗೆ ಅಕ್ಸರ್ ಕರಿಯರ್ ಬೆಸ್ಟ್ ಬೌಲಿಂಗ್ ದಾಳಿ ಸಂಘಟಿಸಿದರು. ಇಷ್ಟೇ ಅಲ್ಲ ಹಗಲು ರಾತ್ರಿ ಪಂದ್ಯದಲ್ಲಿ ವಿಶ್ವದ ಸ್ಪನ್ನರ್ ನೀಡಿದ 2ನೇ ಅತ್ಯತ್ತಮ ಪ್ರದರ್ಶನ ಎಂಬ ದಾಖಲೆ ಬರೆದರು.
D/N ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್ ಬೆಸ್ಟ್ ಪ್ರದರ್ಶನ:
8/49 ದೇವಂದ್ರ ಬಿಶು v ಪಾಕಿಸ್ತಾನ(ದುಬೈ) 2016/17
6/38 ಅಕ್ಸರ್ ಪಟೇಲ್ v ಇಂಗ್ಲೆಂಜ್(ಅಹಮ್ಮದಾಬಾದ್)2020/21 *
6/184 ಯಾಸಿರ್ ಶಾ v ಶ್ರೀಲಂಕ(ದುಬೈ)2017/18
ಅಕ್ಸರ್ ಪಟೇಲ್ ಹಾಗೂ ಆರ್ ಅಶ್ವಿನ್ ಮೋಡಿಗೆ ಇಂಗ್ಲೆಂಡ್ ತಂಡ ಅಲ್ಪಮೊತ್ತಕ್ಕೆ ಆಲೌಟ್ ಆಗಿದೆ. ಈ ಮೂಲಕ ಭಾರತ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ದಾಖಲಿಸಿದ 4ನೇ ಅತ್ಯಲ್ಪ ಮೊತ್ತ ಅನ್ನೋ ಕುಖ್ಯಾತಿಗೆ ಗುರಿಯಾಗಿದೆ.
ಭಾರತ ವಿರುದ್ಧ ಇಂಗ್ಲೆಂಡ್ ತಂಡದ ಕನಿಷ್ಠ ಮೊತ್ತ:
101 ರನ್, ಓವಲ್ 1971
102 ರನ್, ಮುಂಬೈ 1979/80
102ರನ್, ಲೀಡ್ಸ್ 1986
112 ರನ್, ಅಹಮ್ಮದಾಬಾದ್ 2020/21 *
128 ರನ್, ಲೀಡ್ಸ್ 1986
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.