
ಚೆನ್ನೈ(ಫೆ.15): ತವರಿನ ಅಭಿಮಾನಿಗಳ ಎದುರು ಬೌಲಿಂಗ್ ಕಮಾಲ್ ಮಾಡಿದ್ದ ರವಿಚಂದ್ರನ್ ಅಶ್ವಿನ್, ಇದೀಗ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ನಲ್ಲೂ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಇದರ ಜತೆಗೆ ಮಾಲ್ಕಮ್ ಮಾರ್ಷಲ್ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
ಇಲ್ಲಿನ ಚೆಪಾಕ್ ಮೈದಾನದಲ್ಲಿ ರವಿಚಂದ್ರನ್ ಅಶ್ವಿನ್ ಮೊದಲ ಇನಿಂಗ್ಸ್‌ನಲ್ಲಿ ಬೌಲಿಂಗ್‌ನಲ್ಲಿ 23.5 ಓವರ್ ಬೌಲಿಂಗ್ ಮಾಡಿ 4 ಮೇಡನ್ ಸಹಿತ ಕೇವಲ 43 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದ್ದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 29ನೇ ಬಾರಿಗೆ 5+ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದರು. ಇದೀಗ ಎರಡನೇ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ 106 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗಿಳಿದ ಲೋಕಲ್ ಹೀರೋ ಅಶ್ವಿನ್ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಆಸರೆಯಾಗಿದ್ದಾರೆ. 64 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದರು. ಇದರೊಂದಿಗೆ ಮಾಲ್ಕಮ್ ಮಾರ್ಷಲ್ ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕಿದ್ದಾರೆ.
Ind vs Eng 2ನೇ ಟೆಸ್ಟ್‌ನಲ್ಲಿ 2 ಅಪರೂಪದ ದಾಖಲೆ ಅಶ್ವಿನ್ ಪಾಲು..!
ಹೌದು, ಅತಿ ಹೆಚ್ಚು ಬಾರಿ ಒಂದು ಪಂದ್ಯದಲ್ಲಿ 5+ ವಿಕೆಟ್ ಹಾಗೂ 50+ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್ ಇದೀಗ ರಿಚರ್ಡ್ ಹ್ಯಾಡ್ಲಿ ಜತೆ ಜಂಟಿ ಮೂರನೇ ಸ್ಥಾನಕ್ಕೇರಿದ್ದಾರೆ. 6 ಬಾರಿ ಅಶ್ವಿನ್ ಹಾಗೂ ಹ್ಯಾಡ್ಲಿ 5+ ವಿಕೆಟ್ ಹಾಗೂ 50+ ರನ್ ಬಾರಿಸಿದ ಸಾಧನೆ ಮಾಡಿದ್ದಾರೆ. ಇನ್ನು ಅತಿಹೆಚ್ಚು ಬಾರಿ 5+ ವಿಕೆಟ್ ಹಾಗೂ 50+ ರನ್ ಬಾರಿಸಿದ ದಾಖಲೆ ಇಂಗ್ಲೆಂಡ್ ಮಾಜಿ ಆಲ್ರೌಂಡರ್ ಇಯಾನ್ ಬಾಥಮ್ ಹೆಸರಿನಲ್ಲಿದೆ. ಇಯಾನ್ ಬಾಥಮ್ 11 ಬಾರಿ ಈ ಸಾಧನೆ ಮಾಡಿದ್ದಾರೆ.
ಟೆಸ್ಟ್ ಪಂದ್ಯವೊಂದರಲ್ಲಿ 5+ ವಿಕೆಟ್ ಹಾಗೂ 50+ ರನ್ ಬಾರಿಸಿದ ಟಾಪ್ ಆಟಗಾರರ ವಿವರ ಇಲ್ಲಿದೆ ನೋಡಿ:
1. ಇಯಾನ್ ಬಾಥಮ್: 11 ಬಾರಿ
2. ಶಕೀಬ್ ಅಲ್ ಹಸನ್: 9 ಬಾರಿ
3. ರಿಚರ್ಡ್ ಹ್ಯಾಡ್ಲಿ& ಆರ್. ಅಶ್ವಿನ್: 6 ಬಾರಿ
4. ಮಾಲ್ಕಂ ಮಾರ್ಷಲ್: 5 ಬಾರಿ
5. ಕಪಿಲ್ ದೇವ್, ಕ್ರಿಸ್ ಕ್ರೇನ್ಸ್& ರವಿಂದ್ರ ಜಡೇಜಾ: 4 ಬಾರಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.