
ನವದೆಹಲಿ(ಸೆ.07): ಫಾರ್ಮ್ ಸಮಸ್ಯೆ ಹಾಗೂ ಆತ್ಮವಿಶ್ವಾಸದ ಕೊರತೆಯಿಂದ ಕಂಗಾಲಾಗಿರುವ ಅಜಿಂಕ್ಯ ರಹಾನೆಯವರಿಗೆ ವಿಶ್ರಾಂತಿ ನೀಡಿ ಅವಕಾಶಕ್ಕಾಗಿ ಎದುರು ನೋಡುತ್ತಿರುವ ಹನುಮ ವಿಹಾರಿ ಅಥವಾ ಸೂರ್ಯಕುಮಾರ್ ಯಾದವ್‌ಗೆ ಟೀಂ ಇಂಡಿಯಾದಲ್ಲಿ ಅವಕಾಶ ನೀಡಬೇಕು ಎಂದು ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಸಂಜಯರ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.
ಒಂದು ವೇಳೆ ನನ್ನನ್ನು ತಂಡದಿಂದ ಕೈಬಿಡದಿದ್ದರೆ ದಿಗ್ಗಜ ಕ್ರಿಕೆಟಿಗನಾಗಿ ಬೆಳೆದು ನಿಂತ ರಾಹುಲ್ ದ್ರಾವಿಡ್‌ಗೆ ಅವಕಾಶವೇ ಸಿಗುತ್ತಿರಲಿಲ್ಲ. ಹೀಗಾಗಿ ಯುವ ಆಟಗಾರರಿಗೆ ತಮ್ಮ ಪ್ರತಿಭೆ ಅನಾವರಣ ಮಾಡಲು ಅವಕಾಶ ಒದಗಿಸಬೇಕು ಎಂದು ಮಂಜ್ರೇಕರ್ ಹೇಳಿದ್ದಾರೆ. ಅವಕಾಶಕ್ಕಾಗಿ ತುದಿಗಾಲಿನಲ್ಲಿ ನಿಂತಿರುವ ಪ್ರತಿಭೆಗಳನ್ನು ಇನ್ನೆಷ್ಟು ದಿನ ಅವಕಾಶ ವಂಚಿತರನ್ನಾಗಿಸುತ್ತೀರಾ. ಒಂದುವೇಳೆ ನನ್ನನ್ನು ತಂಡದಿಂದ ಕೈಬಿಡದಿದ್ದರೆ, ರಾಹುಲ್ ದ್ರಾವಿಡ್ ಅವರಂತಹ ಆಟಗಾರರು ತಂಡದಲ್ಲಿರುತ್ತಿರಲಿಲ್ಲ. ಆತ್ಮವಿಶ್ವಾಸದ ಕೊರತೆ ಅನುಭವಿಸುತ್ತಿರುವ ರಹಾನೆ ಬದಲಿಗೆ ಈ ಸೂರ್ಯಕುಮಾರ್ ಅಥವಾ ವಿಹಾರಿಗೆ ಅವಕಾಶ ನೀಡುವುದು ಒಳಿತು ಎಂದು ಮಂಜ್ರೇಕರ್ ಹೇಳಿದ್ದಾರೆ.
ರಾಷ್ಟ್ರಧ್ವಜಕ್ಕೆ ಅಗೌರವ; ಭಾರತೀಯ ಫ್ಯಾನ್ಸ್ ಮೇಲೆ ಕಿಡಿಕಾರಿದ ಗವಾಸ್ಕರ್
ಒಂದು ವೇಳೆ ರಹಾನೆಗೆ ಟೀಂ ಇಂಡಿಯಾ ಪರ ಆಡಲು ಮತ್ತೊಂದು ಅವಕಾಶ ಸಿಕ್ಕಿದರೆ, ಆತ ನಿಜಕ್ಕೂ ಅದೃಷ್ಟವಂತ ಬ್ಯಾಟ್ಸ್‌ಮನ್. ರಹಾನೆಗೆ ಈಗಾಗಲೇ ಸಾಕಷ್ಟು ಬಾರಿ ಅವಕಾಶ ನೀಡಲಾಗಿದೆ. ಇದೆಲ್ಲದರ ಹೊರತಾಗಿ ಮತ್ತೊಂದು ಅವಕಾಶ ಸಿಕ್ಕರೆ ರಹಾನೆ ಪಾಲಿಗೆ ಅದು ಸುವರ್ಣಾವಕಾಶವಾಗಲಿದೆ ಎಂದು ಮಂಜ್ರೇಕರ್ ಆಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.