Ind vs Aus: ಇಂದಿನಿಂದ ಭಾರತ vs ಆಸೀಸ್‌ ಏಕದಿನ ಕದನ

Published : Mar 17, 2023, 10:17 AM IST
Ind vs Aus: ಇಂದಿನಿಂದ ಭಾರತ vs ಆಸೀಸ್‌ ಏಕದಿನ ಕದನ

ಸಾರಾಂಶ

ಮುಂಬೈನ ವಾಂಖೇಡೆ ಮೈದಾನದಲ್ಲಿಂದು ಮೊದಲ ಏಕದಿನ ಫೈಟ್ ಮೊದಲ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ಅಲಭ್ಯ, ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಟೀಂ ಇಂಡಿಯಾಗೆ ಆಯ್ಕೆ ಗೊಂದಲ ಎದುರಾಗುವ ಸಾಧ್ಯತೆ

ಮುಂಬೈ(ಮಾ.17): ಮಹ​ತ್ವದ ಬಾರ್ಡರ್‌-ಗವಾ​ಸ್ಕರ್‌ ಟೆಸ್ಟ್‌ ಸರ​ಣಿ​ಯಲ್ಲಿ ಗೆಲುವು ಸಾಧಿ​ಸಿದ ಹುಮ್ಮ​ಸ್ಸಿ​ನ​ಲ್ಲಿ​ರುವ ಟೀಂ ಇಂಡಿ​ಯಾಕ್ಕೆ ಶುಕ್ರ​ವಾರದಿಂದ ಆಸ್ಪ್ರೇ​ಲಿಯಾ ವಿರುದ್ಧ ಏಕ​ದಿನ ಚಾಲೆಂಜ್‌ ಎದು​ರಾ​ಗ​ಲಿದೆ. ಅಕ್ಟೋ​ಬ​ರ್‌​-ನವೆಂಬ​ರ್‌​ನಲ್ಲಿ ತವ​ರಿ​ನಲ್ಲಿ ನಡೆ​ಯ​ಲಿ​ರುವ ಐಸಿಸಿ ಏಕ​ದಿನ ವಿಶ್ವ​ಕ​ಪ್‌ಗೆ ಸಿದ್ಧತೆ ನಡೆ​ಸು​ತ್ತಿ​ರುವ ಭಾರ​ತಕ್ಕೆ ಈ ಸರಣಿ ಮಹ​ತ್ವ​ದ್ದೆ​ನಿ​ಸಿದ್ದು, ಬಲಿಷ್ಠ ತಂಡ ಸಿದ್ಧಪಡಿಸುವುದರ ಜೊತೆಗೆ ಹಲವು ಸಮ​ಸ್ಯೆ​ಗ​ಳಿಗೆ ಪರಿ​ಹಾರ ಕಂಡು​ಕೊ​ಳ್ಳಲು ಎದುರು ನೋಡು​ತ್ತಿ​ದೆ.

3 ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೆ ಮುಂಬೈನ ವಾಂಖೇಡೆ ಕ್ರೀಡಾಂಗಣ ಆತಿಥ್ಯ ವಹಿ​ಸ​ಲಿ​ದ್ದು, ವಿಶ್ವಕಪ್‌ ದೃಷ್ಟಿಯಿಂದ ತಂಡ ಸಂಯೋಜನೆಯಲ್ಲಿ ಸಮತೋಲನ ಕಂಡುಕೊಳ್ಳಲು ಎರಡೂ ತಂಡಗಳಿಗೆ ಅವಕಾಶವಿದೆ. ಈ ವರ್ಷ ಈಗಾ​ಗಲೇ ಶ್ರೀಲಂಕಾ ಹಾಗೂ ನ್ಯೂಜಿ​ಲೆಂಡ್‌ ವಿರುದ್ಧ ಏಕ​ದಿನ ಸರಣಿ ಗೆದ್ದಿ​ರುವ ಭಾರತ ಮತ್ತೊಂದು ಸರಣಿ ಮೇಲೆ ಕಣ್ಣಿ​ಟ್ಟಿದ್ದು, ಆಸೀಸ್‌ ಕಳೆದ ನವೆಂಬರ್‌ ಬಳಿಕ ಮೊದಲ ಬಾರಿ ಏಕದಿನ ಸರಣಿಯೊಂದನ್ನು ಆಡಲಿದೆ.

ಮೊದಲ ಪಂದ್ಯಕ್ಕೆ ರೋಹಿತ್‌ ಅಲ​ಭ್ಯ​ರಾ​ಗ​ಲಿದ್ದು, ಭವಿ​ಷ್ಯದ ನಾಯಕ ಎಂದೇ ಕರೆ​ಸಿ​ಕೊ​ಳ್ಳುತ್ತಿರುವ ಹಾರ್ದಿಕ್‌ ಪಾಂಡ್ಯ ತಂಡ ಮುನ್ನ​ಡೆ​ಸ​ಲಿ​ದ್ದಾರೆ. ಅಭೂ​ತ​ಪೂರ್ವ ಲಯ​ದ​ಲ್ಲಿ​ರುವ ಶುಭ್‌​ಮನ್‌ ಗಿಲ್‌, ಇಶಾನ್‌ ಕಿಶನ್‌ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಶ್ರೇಯಸ್‌ ಅಯ್ಯರ್‌ ಗೈರಾ​ಗ​ಲಿ​ರುವ ಕಾರಣ ಸೂರ್ಯಕುಮಾರ್‌ ಅಥವಾ ರಜತ್‌ ಪಾಟೀದಾರ್‌ ಪೈಕಿ ಒಬ್ಬರಿಗೆ ಅವಕಾಶ ಸಿಗಬಹುದು. ವಿರಾಟ್‌ ಕೊಹ್ಲಿ ತಮ್ಮ ಲಯ ಮುಂದುವರಿಸಲು ಎದುರು ನೋಡುತ್ತಿದ್ದರೆ, ಟೆಸ್ಟ್‌ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ರಾಹುಲ್‌ ಏಕದಿನ ತಂಡದಲ್ಲಿ ಗಟ್ಟಿಯಾಗಿ ನೆಲೆಯೂರಲು ಕಾಯುತ್ತಿದ್ದಾರೆ. ರಿಷಭ್‌ ಪಂತ್‌ ಅನುಪಸ್ಥಿತಿಯಲ್ಲಿ ರಾಹುಲ್‌ ವಿಕೆಟ್‌ ಕೀಪರ್‌ ಜವಾಬ್ದಾರಿ ಸಹ ನಿರ್ವಹಿಸಲಿದ್ದಾರೆ.

ಹಾರ್ದಿಕ್‌, ವಾಷಿಂಗ್ಟನ್‌ ಸುಂದರ್‌ ಹಾಗೂ ದೀರ್ಘ ಕಾಲದ ಬಳಿಕ ಏಕ​ದಿನ ಪಂದ್ಯ​ವಾ​ಡ​ಲಿ​ರುವ ರವೀಂದ್ರ ಜಡೇಜಾ ಆಲ್ರೌಂಡರ್‌ ವಿಭಾ​ಗ​ದಲ್ಲಿ ತಂಡಕ್ಕೆ ಬಲ ಒದ​ಗಿ​ಸ​ಲಿದ್ದಾರೆ. ಆದರೆ ಸ್ಪಿನ್‌ ವಿಭಾ​ಗ​ದಲ್ಲಿ ತಂಡಕ್ಕೆ ಆಯ್ಕೆ ಗೊಂದಲ ಎದು​ರಾ​ಗ​ಲಿದ್ದು, ಅಕ್ಷರ್‌ ಪಟೇಲ್‌, ಕುಲ್ದೀಪ್‌ ಯಾದವ್‌ ಹಾಗೂ ಚಹಲ್‌ ನಡುವೆ ಪೈಪೋಟಿ ಇದೆ. ಮೊಹ​ಮದ್‌ ಸಿರಾಜ್‌ ಜೊತೆ ಅನು​ಭವಿ ಶಮಿ ಅಥವಾ ಉಮ್ರಾನ್‌ ಮಲಿ​ಕ್‌ಗೆ ಸ್ಥಾನ ಸಿಗ​ಬ​ಹುದು.

Ind vs Aus ಆಸೀಸ್ ಎದುರಿನ ಮೊದಲ ಏಕದಿನ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ..! ಯಾರಿಗೆಲ್ಲಾ ಸಿಗಲಿದೆ ಸ್ಥಾನ?

ಆಸೀ​ಸ್‌ಗೆ ಆಲ್ರೌಂಡ​ರ್‌ಗಳ ಬಲ: ಮತ್ತೊಂದೆ​ಡೆ 2019ರ ಬಳಿಕ ಭಾರತದಲ್ಲಿ ಏಕದಿನ ಸರಣಿ ಗೆಲ್ಲಲು ಕಾಯುತ್ತಿರುವ ಆಸೀಸ್‌, ಕೆಲ ತಾರಾ ಆಟ​ಗಾ​ರರ ಗೈರಿನ ಹೊರ​ತಾ​ಗಿಯೂ ಅತ್ಯು​ತ್ತಮ ಪ್ರದ​ರ್ಶನ ನೀಡಿ ಸರ​ಣಿ​ಯಲ್ಲಿ ಶುಭಾ​ರಂಭ ಮಾಡುವ ನಿರೀ​ಕ್ಷೆ​ಯ​ಲ್ಲಿದೆ. ಪ್ಯಾಟ್‌ ಕಮಿನ್ಸ್‌ ಬದಲು ಸ್ಟೀವ್‌ ಸ್ಮಿತ್‌ ನಾಯ​ಕತ್ವ ವಹಿ​ಸ​ಲಿದ್ದು, ಡೇವಿಡ್‌ ವಾರ್ನರ್‌ ತಂಡಕ್ಕೆ ಮರ​ಳಿ​ದ್ದಾರೆ. ಗ್ಲೆನ್‌ ಮ್ಯಾಕ್ಸ್‌​ವೆಲ್‌, ಕ್ಯಾಮ​ರೂನ್‌ ಗ್ರೀನ್‌, ಮಾರ್ಕಸ್‌ ಸ್ಟೋಯ್ನಿ​ಸ್‌ ಸೇರಿ​ದಂತೆ ವಿಶ್ವ​ಶ್ರೇಷ್ಠ ಆಲ್ರೌಂಡ​ರ್‌​ಗಳ ಬಲ ತಂಡ​ಕ್ಕಿದ್ದು, ಏಕಾಂಗಿ​ಯಾಗಿ ಪಂದ್ಯ ಗೆಲ್ಲಿ​ಸ​ಬಲ್ಲ ಸಾಮರ್ಥ್ಯ ಹೊಂದಿ​ದ್ದಾ​ರೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಇಶಾನ್‌ಕಿಶನ್, ಶುಭ್‌ಮನ್ ಗಿಲ್‌, ವಿರಾಟ್ ಕೊಹ್ಲಿ, ಸೂರ್ಯಕುಮಾರ್‌ ಯಾದವ್, ಕೆ ಎಲ್ ರಾಹುಲ್‌, ಹಾರ್ದಿ​ಕ್‌ ಪಾಂಡ್ಯ​(​ನಾ​ಯ​ಕ), ರವೀಂದ್ರ ಜಡೇಜಾ, ವಾಷಿಂಗ್ಟನ್‌ ಸುಂದರ್/ಅಕ್ಷರ್‌ ಪಟೇಲ್, ಶಾರ್ದೂಲ್‌ ಶಾರ್ದೂಲ್, ಮೊಹಮ್ಮದ್ ಸಿರಾಜ್‌, ಮೊಹಮ್ಮದ್ ಶಮಿ/ಉಮ್ರಾನ್‌ ಮಲಿಕ್.

ಆಸ್ಪ್ರೇ​ಲಿ​ಯಾ: ಡೇವಿಡ್ ವಾರ್ನರ್‌, ಟ್ರಾವಿಸ್ ಹೆಡ್‌, ಸ್ಟೀವ್‌ ಸ್ಮಿತ್‌​(​ನಾ​ಯ​ಕ), ಮಾರ್ನಸ್ ಲಬು​ಶೇನ್‌, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌​ವೆಲ್‌, ಕ್ಯಾಮರೋನ್ ಗ್ರೀನ್‌, ಅಲೆಕ್ಸ್ ಕೇರ್ರಿ, ಮಿಚೆಲ್ ಸ್ಟಾರ್ಕ್, ಆ್ಯಡಂ ಜಂಪಾ, ಎಲ್ಲೀಸ್‌

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಪಿಚ್‌ ರಿಪೋ​ರ್ಚ್‌

ವಾಂಖೇಡೆ ಕ್ರೀಡಾಂಗ​ಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿ ಎನಿ​ಸಿದ್ದು, ದೊಡ್ಡ ಮೊತ್ತ ದಾಖ​ಲಾ​ಗುವ ನಿರೀ​ಕ್ಷೆ​ಯಿದೆ. ಇಲ್ಲಿ ನಡೆದ ಕೊನೆ 5 ಪಂದ್ಯ​ಗ​ಳಲ್ಲಿ 4ರಲ್ಲಿ ಚೇಸಿಂಗ್‌ ಮಾಡಿದ ತಂಡ ಗೆದ್ದಿ​ದೆ. 2020ರಲ್ಲಿ ಇಲ್ಲಿ ನಡೆದ ಕೊನೆ ಪಂದ್ಯ​ದಲ್ಲಿ ಭಾರತ ವಿರುದ್ಧ ಆಸೀಸ್‌ 10 ವಿಕೆಟ್‌ ಜಯ​ಗ​ಳಿ​ಸಿತ್ತು. ಸಂಜೆ ಬಳಿ ಇಬ್ಬನಿ ಬೀಳಲಿದ್ದು, ಬ್ಯಾಟಿಂಗ್‌ ಸುಲಭವಾಗಲಿದೆ. ಹೀಗಾಗಿ ಟಾಸ್‌ ಗೆಲ್ಲುವ ತಂಡ ಫೀಲ್ಡಿಂಗ್‌ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು.

10 ವರ್ಷ​ದಲ್ಲಿ ಬರೀ 2 ಸರಣಿ ಸೋಲು!

ಭಾರತ ತವ​ರಿ​ನಲ್ಲಿ ಕಳೆದ 10 ವರ್ಷ​ದಲ್ಲಿ ಆಡಿ​ರುವ 20 ಏಕ​ದಿನ ಸರ​ಣಿ​ಗ​ಳಲ್ಲಿ 18ರಲ್ಲಿ ಗೆಲುವು ಸಾಧಿ​ಸಿದೆ. ಈ ಪೈಕಿ 2015-16ರಲ್ಲಿ ದ.ಆ​ಫ್ರಿಕಾ ವಿರುದ್ಧ, 2019ರಲ್ಲಿ ಆಸೀಸ್‌ ವಿರುದ್ಧ ಸರಣಿ ಸೋಲ​ನು​ಭ​ವಿ​ಸಿದೆ. 2019ರ ಆಸೀಸ್‌ ಸರಣಿ ಬಳಿಕ ತವ​ರಿ​ನಲ್ಲಿ ಆಡಿದ ಎಲ್ಲಾ 7 ಸರ​ಣಿ​ಗ​ಳ​ಲ್ಲಿಯೂ ಭಾರತ ಗೆಲುವು ಸಾಧಿ​ಸಿದೆ.

ನಂ.1 ಸ್ಥಾನಕ್ಕೆ ಫೈಟ್‌

ಏಕ​ದಿನ ಶ್ರೇಯಾಂಕದಲ್ಲಿ ಭಾರತ 114 ರೇಟಿಂಗ್‌ ಅಂಕಗಳೊಂದಿಗೆ ಅಗ್ರ​ಸ್ಥಾ​ನ​ದ​ಲ್ಲಿದ್ದು, ಆಸೀ​ಸ್‌​(112 ಅಂಕ) 2ನೇ ಸ್ಥಾನ ಪಡೆದಿದೆ. ಭಾರತ ಅಗ್ರಸ್ಥಾನ ಉಳಿಸಿಕೊಳ್ಳಬೇಕಿದ್ದರೆ ಸರಣಿ ಗೆಲ್ಲಲೇಬೇಕು. ಆಸ್ಪ್ರೇಲಿಯಾ ಸರಣಿ ಜಯಿಸಿದರೆ ಭಾರತವನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಲಿದೆ. ಭಾರತ 0-3ರಲ್ಲಿ ಸೋತರೆ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿಯಲಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವರುಣ್ ಗೂಗ್ಲಿಗೆ ಸೌತ್ ಆಫ್ರಿಕಾ ಪಂಚರ್, ಟಿ20 ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ
ಕೇವಲ 16 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಹಾರ್ದಿಕ್ ದಾಖಲೆ, ಸೌತ್ ಆಫ್ರಿಕಾಗೆ 232 ರನ್ ಟಾರ್ಗೆಟ್