ಮಹಿಳಾ ಟಿ20 ವಿಶ್ವಕಪ್ ಫೈನಲ್: ಭಾರತೀಯ ವನಿತೆಯರಿಗೆ ಶುಭಕೋರಿದ ಮೋದಿ!

By Suvarna NewsFirst Published Mar 7, 2020, 7:23 PM IST
Highlights

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡ ಪ್ರಶಸ್ತಿಗಾಗಿ ಮುಖಾಮುಖಿಯಾಗುತ್ತಿದೆ. ಇದೀಗ ಫೈನಲ್ ಹೋರಾಟಕ್ಕೂ ಮುನ್ನ ಪ್ರಧಾನಿ ಮೋದಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಕ್ಕೆ ಶುಭಕೋರಿದ್ದಾರೆ. 

ನವದೆಹಲಿ(ಮಾ.07): ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರು ಭಾರತ ಮಹಿಳಾ ತಂಡ ಫೈನಲ್ ಪಂದ್ಯಕ್ಕೆ ರೆಡಿಯಾಗಿದೆ. ಮೆಲ್ಬೊರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಮಹತ್ವದ ಪಂದ್ಯ ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಈ ವಿಶೇಷ ಸಂದರ್ಭದಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಸಂದೇಶಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ಉಭಯ ತಂಡಗಳಿಗೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: ಐಪಿಎಲ್‌ಗೂ ಮುನ್ನ ಕುಕ್ಕೆ ಸುಬ್ರಹ್ಮಣ್ಯ ಮೊರೆ ಹೋದ ಮನೀಶ್ ಪಾಂಡೆ ದಂಪತಿ

ನಾಳೆ(ಮಾ.08) ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮಹಿಳಾ ಟಿ20 ಫೈನಲ್ ಪಂದ್ಯ, ಮೆಲ್ಬೊರ್ನ್ ಮೈದಾನದಲ್ಲಿ ನಡೆಯಲಿದೆ. ಎರಡು ಬಲಿಷ್ಠ ತಂಡಗಳು ಅತೀ ಹೆಚ್ಚು ಅಭಿಮಾನಿಗಳ ಸಮ್ಮುಖದಲ್ಲಿ ಮುಖಾಮುಖಿಯಾಗುತ್ತಿದೆ. ಇದು  ಅತ್ಯುತ್ತಮ ಪಂದ್ಯವಾಗಲಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ಸ್ಯಾರಿ ಉಟ್ಟು ಕ್ರಿಕೆಟ್ ಆಡಿದ ಮಿಥಾಲಿ, ಮಹಿಳಾ ದಿನಾಚರಣೆಗೆ ವಿಶೇಷ ಸಂದೇಶ!

ಇದಕ್ಕೆ ಪ್ರತಿಯಾಗಿ ಮೋದಿ ಕೂಡ ಟ್ವೀಟ್ ಮೂಲಕ ಶುಭಹಾರೈಸಿದ್ದಾರೆ. ಆಸೀಸ್ ಪ್ರಧಾನಿಗೆ ಟ್ಯಾಗ್ ಮಾಡಿದ ಮೋದಿ, ಗುಡ್ ಡೇ ಸ್ಕಾಟ್ ಮಾರಿಸನ್, ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮಹಿಳಾ ಟಿ20 ವಿಶ್ವಕಪ್ ಫೈನಲ್‌ಗಿಂತ ದೊಡ್ಡ ದಿನ ಮತ್ತೊಂದಿಲ್ಲ. ಭಾರತ ಹಾಗೂ ಆಸ್ಟ್ರೇಲಿಯಾ ಎರಡೂ ತಂಡಕ್ಕೂ ಶುಭ ಹಾರೈಸುತ್ತೇನೆ. ಜೊತೆಗೆ ಮಹಿಳಾ ದಿನಾಚರಣೆಯ ಶುಭಾಶಯಗಳು. ಉತ್ತಮ ತಂಡ ಗೆಲುವು ಸಾಧಿಸಲಿದೆ. ನಾಳೆ ಮೆಲ್ಪೊರ್ನ್ ಮೈದಾನ ನೀಲಿಯಾಗಿ ಪರಿವರ್ತನೆಯಾಗಲಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. 

click me!