T20 World Cup: Bangladesh vs Sri Lanka ಬಾಂಗ್ಲಾ ಎದುರು ಟಾಸ್ ಗೆದ್ದ ಲಂಕಾ ಬೌಲಿಂಗ್ ಆಯ್ಕೆ

By Suvarna NewsFirst Published Oct 24, 2021, 3:07 PM IST
Highlights

* ಶಾರ್ಜಾ ಮೈದಾನದಲ್ಲಿಂದು ಬಾಂಗ್ಲಾ-ಲಂಕಾ ಮುಖಾಮುಖಿ

* ಅರ್ಹತಾ ಪಂದ್ಯದಲ್ಲಿ ಜಯಿಸಿದ ತಂಡಗಳಿಂದು ಮುಖಾಮುಖಿ

* ಶಕೀಬ್ ಅಲ್ ಹಸನ್‌ರನ್ನು ನೆಚ್ಚಿಕೊಂಡಿದೆ ಬಾಂಗ್ಲಾದೇಶ

ಶಾರ್ಜಾ(ಅ.24): ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯ ಸೂಪರ್ ಸಂಡೇಯ ಮೊದಲ ಪಂದ್ಯದಲ್ಲಿಂದು ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಕ್ರಿಕೆಟ್ (Sri Lanka Cricket) ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ಶನಕ ಬೌಲಿಂಗ್‌ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. 

ಬಾಂಗ್ಲಾ ಹಾಗೂ ಲಂಕಾ ತಂಡಗಳ ನಡುವಿನ ಕಾದಾಟದ ಪಂದ್ಯಕ್ಕೆ ಶಾರ್ಜಾ ಕ್ರಿಕೆಟ್ ಮೈದಾನ (Sharjah Cricket Stadium) ಸಾಕ್ಷಿಯಾಗಲಿದೆ. ಮೊಹಮದುಲ್ಲಾ ನೇತೃತ್ವದ ಬಾಂಗ್ಲಾದೇಶ (Bangladesh cricket) ಹಾಗೂ ದಶುನ್ ಶನಕಾ ನೇತೃತ್ವದ ಶ್ರೀಲಂಕಾ ತಂಡಗಳು ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆಗಿಟ್ಟಿಸಿಕೊಳ್ಳಲು ವಿಫಲವಾಗಿದ್ದು. ಐಸಿಸಿ ಟಿ20 ಶ್ರೇಯಾಂಕದಲ್ಲಿ ಅಗ್ರ 8 ಸ್ಥಾನ ಪಡೆದ ತಂಡಗಳು 2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆ ಪಡೆದಿದ್ದವು. ಹೀಗಾಗಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಕ್ರಿಕೆಟ್ ತಂಡಗಳು ಅರ್ಹತಾ ಸುತ್ತಿನ ಪಂದ್ಯಗಳನ್ನಾಡಿ ಸೂಪರ್ 12 ಹಂತಕ್ಕೆ ಲಗ್ಗೆಯಿಟ್ಟಿವೆ.

Sri Lanka have won the toss and elected to field in Sharjah 🏏

Who is winning this one? | | https://t.co/msiJ66VBxr pic.twitter.com/cuxlv4oXjK

— T20 World Cup (@T20WorldCup)

ಬಾಂಗ್ಲಾದೇಶ ತಂಡವು ಅನುಭವಿ ಆಲ್ರೌಂಡರ್ ಶಕೀಬ್ ಅಲ್‌ ಹಸನ್‌ (Shakib Al Hasan), ಮುಷ್ಫಿಕುರ್ ರಹೀಮ್‌, ಮುಷ್ತಾಫಿಜುರ್ ರೆಹಮಾನ್ ಅವರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಇನ್ನೊಂದು ಕಡೆ ಶ್ರೀಲಂಕಾ ಕ್ರಿಕೆಟ್ ತಂಡವು ವನಿಂದು ಹಸರಂಗ, ಕುಸಾಲ್ ಪೆರೆರಾ ಮೇಲೆ ಹೆಚ್ಚು ಅವಲಂಬಿತವಾಗಿದೆ.

T20 World Cup Bangladesh vs Sri Lanka ಶ್ರೀಲಂಕಾ ತಂಡಕ್ಕಿಂದು ಬಾಂಗ್ಲಾದೇಶ ಸವಾಲು

ಶ್ರೀಲಂಕಾ ಕ್ರಿಕೆಟ್‌ ತಂಡವು ಟಿ20 ಕ್ರಿಕೆಟ್‌ನಲ್ಲಿ ಕಳೆದ ಎರಡು-ಮೂರು ವರ್ಷಗಳಲ್ಲಿ ಅಂತಹ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ವಿಶ್ವಕಪ್ ಟೂರ್ನಿಗೂ ಮುನ್ನ ನಡೆದ ಕಳೆದ 20 ಟಿ20 ಪಂದ್ಯಗಳ ಪೈಕಿ ಶ್ರೀಲಂಕಾ ಕ್ರಿಕೆಟ್ ತಂಡವು ಕೇವಲ 3 ಪಂದ್ಯಗಳಲ್ಲಿ ಮಾತ್ರ ಗೆಲುವಿನ ನಗೆ ಬೀರಿದೆ. ಇನ್ನೊಂದೆಡೆ ಬಾಂಗ್ಲಾದೇಶ ತಂಡವು ಈ ವರ್ಷದಲ್ಲೇ 19 ಟಿ20 ಪಂದ್ಯಗಳನ್ನಾಡಿ 11ರಲ್ಲಿ ಗೆಲುವು ದಾಖಲಿಸುವ ಮೂಲಕ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಬಾಂಗ್ಲಾದೇಶ ತಂಡವು 2017ರಿಂದ 2020ರ ಅವಧಿಯಲ್ಲಿ 12 ಗೆಲುವು ದಾಖಲಿಸಿತ್ತು. ಆದರೆ ಇದೀಗ ಒಂದೇ ವರ್ಷದಲ್ಲಿ 11 ಗೆಲುವುಗಳನ್ನು ದಾಖಲಿಸಿದೆ. 

ಟಿ20 ಕ್ರಿಕೆಟ್‌ನಲ್ಲಿ ಇದುವರೆಗೂ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳು ಒಟ್ಟು 11 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ದ್ವೀಪ ರಾಷ್ಟ್ರ ಲಂಕಾ ಕೊಂಚ ಮೇಲುಗೈ ಸಾಧಿಸಿದೆ. 11 ಪಂದ್ಯಗಳ ಪೈಕಿ ಲಂಕಾ 7 ಪಂದ್ಯಗಳಲ್ಲಿ ಗೆಲುವನ್ನು ದಾಖಲಿಸಿದ್ದರೆ, ಬಾಂಗ್ಲಾದೇಶ ತಂಡವು 4 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಇನ್ನು ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳು ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದು, ಆ ಪಂದ್ಯದಲ್ಲಿ ಶ್ರೀಲಂಕಾ ಗೆಲುವಿನ ಸಿಹಿಯುಂಡಿದೆ.

ತಂಡಗಳು ಹೀಗಿವೆ

A change each for both teams 👇 Taskin Ahmed is replaced by Nasum Ahmed Binura Fernando comes in for Maheesh Theekshanahttps://t.co/QqezGHSebf | | pic.twitter.com/nHH934TC4y

— ESPNcricinfo (@ESPNcricinfo)

 

click me!