
ಹೋಬರ್ಟ್(ಅ.24): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 17ನೇ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ನೆದರ್‌ಲೆಂಡ್ಸ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ನೆದರ್‌ಲೆಂಡ್ಸ್ ತಂಡವು ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ.
ಅರ್ಹತಾ ಸುತ್ತಿನ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಹಾಗೂ ಉತ್ತಮ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ನೆದರ್‌ಲೆಂಡ್ಸ್ ತಂಡವು ಇದೀಗ ಸೂಪರ್ 12 ಹಂತದಲ್ಲಿ ತಮ್ಮ ಪಾಲಿನ ಮೊದಲ ಪಂದ್ಯವನ್ನಾಡಲು ಸಜ್ಜಾಗಿದೆ. ಇನ್ನು ಬಾಂಗ್ಲಾದೇಶ ತಂಡ ನೇರವಾಗಿ ಸೂಪರ್ 12 ಹಂತಕ್ಕೆ ಲಗ್ಗೆಯಿಟ್ಟಿದೆ. ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ನ್ಯೂಜಿಲೆಂಡ್‌ನಲ್ಲಿ ಸಾಕಷ್ಟು ಅಭ್ಯಾಸ ನಡೆಸಿರುವ ಬಾಂಗ್ಲಾದೇಶ ತಂಡವು ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ.
T20 World Cup ಟೀಕೆಗೆ ಬೆಂಕಿ ಬೌಲಿಂಗ್‌ನಿಂದಲೇ ಉತ್ತರಿಸಿದ ಆರ್ಶದೀಪ್ ಸಿಂಗ್!
ಸೂಪರ್ 12 ಹಂತದ ಗ್ರೂಪ್ 2 ಹಂತದಲ್ಲಿ ಸಾಕಷ್ಟು ಬಲಿಷ್ಠ ತಂಡಗಳನ್ನು ಹೊಂದಿದ್ದು, ಆರಂಭದಿಂದಲೇ ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡಕ್ಕೆ ಉಭಯ ತಂಡಗಳು ಸಿಲುಕಿವೆ.
ಉಭಯ ತಂಡಗಳು ಹೀಗಿವೆ ನೋಡಿ
ಬಾಂಗ್ಲಾದೇಶ: ನಜಮುಲ್ ಹೊಸೈನ್ ಶಾಂಟೊ, ಸೌಮ್ಯ ಸರ್ಕಾರ್, ಲಿಟನ್ ದಾಸ್, ಶಕೀಬ್ ಅಲ್ ಹಸನ್, ಅಫಿಫ್ ಹೊಸೈನ್, ಯಾಸಿರ್ ಅಲಿ, ನೂರಲ್ ಹಸನ್(ವಿಕೆಟ್ ಕೀಪರ್), ಮೊಸದಕ್ ಹೊಸೈನ್, ಟಸ್ಕಿನ್ ಅಹಮ್ಮದ್, ಮುಷ್ಥಾಫಿಜುರ್ ರೆಹಮಾನ್, ಹಸನ್ ಮಹಮದ್.
ನೆದರ್‌ಲೆಂಡ್ಸ್: ಮಾಕ್ಸ್ ಒ ಡೌಡ್, ವಿಕ್ರಂಜಿತ್ ಸಿಂಗ್, ಬಾಸ್ ಡೆ ಲೀಡೆ, ಕಾಲಿನ್ ಅಕ್ರೆಮನ್, ಟಾಮ್ ಕೂಪರ್, ಸ್ಕಾಟ್ ಎಡ್ವರ್ಡ್, ಟಿಮ್ ಪ್ರಿಂಗಲ್, ಲೋಗನ್ ವ್ಯಾನ್ ಬೀಕ್, ಶಾರಿಜ್ ಅಹಮ್ಮದ್, ಫ್ರೆಡ್ ಕ್ಲಾಸೇನ್, ಪೌಲ್ ವ್ಯಾನ್ ಮೀಕ್ರೇನ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.