* ಐಸಿಸಿ ವರ್ಷದ ಟಿ20 ಆಟಗಾರರ ಪ್ರಶಸ್ತಿಗೆ ಭಾಜನರಾದ ಮೊಹಮ್ಮದ್ ರಿಜ್ವಾನ್
* ಮಹಿಳಾ ಆಟಗಾರ್ತಿ ವಿಭಾಗದಲ್ಲಿ ಇಂಗ್ಲೆಂಡ್‌ನ ಟ್ಯಾಮಿ ಬ್ಯುಮೊಂಟ್ ಆಯ್ಕೆ
* ದಕ್ಷಿಣ ಆಫ್ರಿಕಾದ ಯಾನೆಮಾನ್ ಮಲಾನ್ ವರ್ಷದ ಉದಯೋನ್ಮುಖ ಆಟಗಾರರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ
ದುಬೈ(ಜ.24): ಪಾಕಿಸ್ತಾನದ ತಾರಾ ಬ್ಯಾಟರ್ ಮೊಹಮದ್ ರಿಜ್ವಾನ್ (Mohammad Rizwan) ಹಾಗೂ ಇಂಗ್ಲೆಂಡ್‌ನ ಟ್ಯಾಮಿ ಬ್ಯುಮೊಂಟ್ ಕ್ರಮವಾಗಿ 2021ರ ಐಸಿಸಿ ಪುರುಷ ಹಾಗೂ ಮಹಿಳಾ ವರ್ಷದ ಟಿ20 ಆಟಗಾರರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 2021ರಲ್ಲಿ 29 ಟಿ20 ಪಂದ್ಯಗಳನ್ನಾಡಿರುವ ರಿಜ್ವಾನ್ 73.66 ಸರಾಸರಿಯಲ್ಲಿ 1,326 ರನ್ ಕಲೆ ಹಾಕಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಚೊಚ್ಚಲ ಶತಕ ಸಿಡಿಸಿರುವ ಅವರು, ಟಿ20 ವಿಶ್ವಕಪ್‌ನಲ್ಲಿ ಪಾಕ್ ಸೆಮೀಸ್ ತಲುಪಲು ಪ್ರಮುಖ ಪಾತ್ರ ವಹಿಸಿದ್ದರು. ಇನ್ನು, ಟ್ಯಾಮಿ ಬ್ಯುಮೊಂಟ್ 2021ರ ಮಹಿಳಾ ಟಿ20ಯಲ್ಲಿ 3ನೇ ಅತೀ ಹೆಚ್ಚು ಹಾಗೂ ಇಂಗ್ಲೆಂಡ್ ಪರ ಅತೀ ಹೆಚ್ಚು ರನ್ ಸಿಡಿಸಿದ್ದಾರೆ.
ಯಾನೆಮಾನ್ ಮಲಾನ್, ಸನಾ ಉದಯೋನ್ಮುಖ ಆಟಗಾರರು: ದಕ್ಷಿಣ ಆಫ್ರಿಕಾದ ಯಾನೆಮಾನ್ ಮಲಾನ್ ಹಾಗೂ ಪಾಕಿಸ್ತಾನದ ಫಾತಿಮಾ ಸನಾ ಕ್ರಮವಾಗಿ ಪುರುಷ ಹಾಗೂ ಮಹಿಳಾ ಐಸಿಸಿ ವರ್ಷದ ಉದಯೋನ್ಮುಖ ಆಟಗಾರರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಒಮಾನ್‌ನ ಜೀಶಾನ್ ಮಖ್ಸೂದ್ ಪುರುಷ ಅಸೋಸಿಯೇಟ್ ಕ್ರಿಕೆಟಿಗ, ಆಸ್ಪ್ರೇಲಿಯಾದ ಆ್ಯಂಡ್ರಿಯಾ ಮೇ ಜೆಪೆಡಾ ಮಹಿಳಾ ಅಸೋಸಿಯೇಟ್ ಕ್ರಿಕೆಟರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
PCB congratulates Mohammad Rizwan on winning ICC Men's T20I Cricketer of the Year 2021 pic.twitter.com/tu7x0peXkl
— Pakistan Cricket (@TheRealPCB)
undefined
2ನೇ ಏಕದಿನ: ಆಫ್ಘನ್‌ಗೆ ನೆದರ್ಲೆಂಡ್ಸ್ ವಿರುದ್ಧ ಜಯ
ದೋಹಾ: ನೆದರ್ಲೆಂಡ್ಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಆಫ್ಘಾನಿಸ್ತಾನ 48 ರನ್‌ಗಳ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಫ್ಘನ್ ರಹ್ಮತುಲ್ಲಾ ಗುರ್ಬಜ್ ಶತಕದ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 237 ರನ್ ಕಲೆ ಹಾಕಿತು.
SA vs India 3rd ODI : ದೀಪಕ್ ಚಹರ್ ಕ್ಲಾಸಿಕ್ ಇನ್ನಿಂಗ್ಸ್ ವ್ಯರ್ಥ, ಕೇಪ್ ಟೌನ್ ನಲ್ಲೂ ಭಾರತಕ್ಕೆ ಸೋಲು
ಗುರ್ಬಜ್ 127 ಎಸೆತಗಳಲ್ಲಿ 103 ರನ್ ಸಿಡಿಸಿದರೆ, ಹಶ್ಮತುಲ್ಲಾ ಶಾಹಿದಿ 54 ರನ್ ಬಾರಿಸಿದರು. ಫ್ರೆಡ್ ಕ್ಲಾಸೆನ್, ಫಿಲಿಪ್ಪೆ ತಲಾ 2 ವಿಕೆಟ್ ಕಿತ್ತರು. ಸಾಧಾರಣ ಗುರಿ ಬೆನ್ನತ್ತಿದ ನೆದರ್ಲೆಂಡ್ಸ್ 47.4 ಓವರ್‌ಗಳಲಿ 189 ರನ್‌ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಸ್ಕಾಟ್ ಎಡ್ವರ್ಡ್ಸ್(86) ಏಕಾಂಗಿ ಹೋರಾಟ ನಡೆಸಿದರು. ಮುಜೀಬ್ ಉರ್ ರಹ್‌ಮಾನ್ 4 ವಿಕೆಟ್ ಕಬಳಿಸಿದರು. ಮೊದಲ ಪಂದ್ಯದಲ್ಲಿ ಆಫ್ಘನ್ 36 ರನ್‌ಗಳಿಂದ ಗೆದ್ದಿತ್ತು. ಸರಣಿಯ ಕೊನೆ ಪಂದ್ಯ ಮಂಗಳವಾರ ನಡೆಯಲಿದೆ.
ಭಾರತದಲ್ಲೇ ಐಪಿಎಲ್ ನಡೆಸಿ: ತಂಡಗಳ ಮಾಲಿಕರ ಒತ್ತಾಯ
ನವದೆಹಲಿ: 2022ರ ಐಪಿಎಲ್ (IPL 2022) ಟೂರ್ನಿಯನ್ನು ವಿದೇಶಕ್ಕೆ ಸ್ಥಳಾಂತರಿಸುವುದು ಬೇಡ, ಭಾರತದಲ್ಲೇ ನಡೆಸಿ ಎಂದು ಎಲ್ಲಾ 10 ತಂಡಗಳ ಮಾಲಿಕರು ಬಿಸಿಸಿಐಗೆ (BCCI) ಒತ್ತಾಯಿಸಿದ್ದಾರೆ. ಶನಿವಾರ ನಡೆದ ಬಿಸಿಸಿಐ ಜೊತೆಗಿನ ಸಭೆಯಲ್ಲಿ ಮಾಲಿಕರು ಮುಂಬೈ, ಪುಣೆ ನಗರಗಳಲ್ಲಿ ಟೂರ್ನಿ ಆಯೋಜಿಸಿದರೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ತಿಳಿಸಿದರು ಎನ್ನಲಾಗಿದೆ.
ಇದೇ ವೇಳೆ ಐಪಿಎಲ್ ಟೂರ್ನಿಯನ್ನು ಮಾರ್ಚ್ 27 ಅಥವಾ ಏಪ್ರಿಲ್ 2ಕ್ಕೆ ಆರಂಭಿಸಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ. ಲಂಕಾ ವಿರುದ್ಧದ ಟಿ20 ಸರಣಿ ಮಾರ್ಚ್ 18ಕ್ಕೆ ಮುಕ್ತಾಯಗೊಳ್ಳಲಿದೆ. ನ್ಯಾಯಮೂರ್ತಿ ಲೋಧಾ ಸಮಿತಿಯ ಶಿಫಾರಸ್ಸಿನ ಪ್ರಕಾರ ಅಂತಾರಾಷ್ಟ್ರೀಯ ಟೂರ್ನಿ ಮುಗಿದ 14 ದಿನಗಳ ಬಳಿಕವಷ್ಟೇ ಐಪಿಎಲ್ ಆರಂಭಿಸಬಹುದು. ಹೀಗಾಗಿ ಏಪ್ರಿಲ್ 2ಕ್ಕೆ ಟೂರ್ನಿಗೆ ಚಾಲನೆ ಸಿಗುವ ಸಾಧ್ಯತೆ ಹೆಚ್ಚು.
ಮುಂಬೈನಲ್ಲಿ 3, ಪುಣೆಯಲ್ಲಿ 1 ಕ್ರೀಡಾಂಗಣವಿರುವ ಕಾರಣ ಮುಂಬೈನಲ್ಲಿ ಬಯೋಬಬಲ್ ವ್ಯವಸ್ಥೆ ಮಾಡಿ, ರಸ್ತೆ ಮಾರ್ಗವಾಗಿ ಕ್ರೀಡಾಂಗಣಗಳಿಗೆ ತೆರಳಬಹುದು. ವಿಮಾನ ಪ್ರಯಾಣ ಮಾಡುವ ಅವಶ್ಯಕತೆಯೇ ಬರುವುದಿಲ್ಲ. ದೇಶದಲ್ಲಿ ಕೋವಿಡ್ ಪ್ರಕರಣಗಳು ಕೈಮೀರಿದರಷ್ಟೇ ಯುಎಇಗೆ ಸ್ಥಳಾಂತರಿಸಬಹುದು. ದ.ಆಫ್ರಿಕಾದಲ್ಲಿ ಟೂರ್ನಿ ನಡೆಸುವುದನ್ನು ಕೊನೆಯ ಆಯ್ಕೆಯಾಗಿ ಇಟ್ಟುಕೊಳ್ಳಿ ಎಂದು ಮಾಲಿಕರು ಬಿಸಿಸಿಐಗೆ ಸಲಹೆ ನೀಡಿದರು ಎನ್ನಲಾಗಿದೆ.