ಐಸಿಸಿ ಚಾಂಪಿಯನ್ಸ್ ಟ್ರೋಪಿ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ. ರೋಚಕ ಹೋರಾಟದಲ್ಲಿ ಟೀಂ ಇಂಡಿಯಾ ದಿಟ್ಟ ಪ್ರದರ್ಶನ ನೀಡಿದೆ. ಈ ಮೂಲಕ ಟೀಂ ಇಂಡಯಾ 3ನೇ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿದೆ. ಇಷ್ಟೇ ಸತತ 2ನೇ ವರ್ಷ 2ನೇ ಐಸಿಸಿ ಟ್ರೋಫಿ ಗೆದ್ದ ಸಾಧನೆ ಮಾಡಿದೆ. 2024ರಲ್ಲಿ ಐಸಿಸಿ ಟಿ20 ಟ್ರೋಫಿ ಗೆದ್ದ ಭಾರತ ಇದೀಗ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿದೆ. ಚಾಂಪಿಯನ್ಸ್ ಟ್ರೋಫಿ ಪಂದ್ಯದ ಪ್ರತಿಕ್ಷಣದ ಸಂಕ್ಷಿಪ್ತ ವಿವರ ಇಲ್ಲಿದೆ.

09:50 PM (IST) Mar 09
ಹಾರ್ದಿಕ್ ಪಾಂಡ್ಯ ವಿಕೆಟ್ ಪತನದ ಬಳಿಕ ಕೆಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಟೀಂ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದ್ದಾರೆ.
09:43 PM (IST) Mar 09
ಇನ್ನೇನು ಗೆಲುವು ಖಚಿತ ಅನ್ನುವಷ್ಟರಲ್ಲೇ ಹಾರ್ದಿಕ್ ಪಾಂಡ್ಯ ವಿಕೆಟ್ ಕಳೆದುಕೊಂಡಿತು. ಭಾರತ ಗೆಲುವಿಗೆ 15 ಎಸೆತದಲ್ಲಿ 11 ರನ್ ಬೇಕಿದೆ.
09:15 PM (IST) Mar 09
ಚಾಂಪಿಯನ್ಸ್ ಟ್ರೋಫಿ ಪೈನಲ್ ಪಂದ್ಯ ರೋಚ ಘಟ್ಟ ತಲುಪಿದೆ. ಭಾರತದ ಗೆಲುವಿಗೆ ಅಂತಿಮ 50 ಎಸೆತದಲ್ಲಿ 49 ರನ್ ಅವಶ್ಯಕತೆ ಇದೆ.
08:18 PM (IST) Mar 09
ನಾಯಕ ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್ ನಡೆಸಿ ಔಟಾಗಿದ್ದಾರೆ. ರೋಹಿತ್ 76ರನ್ ಸಿಡಿಸಿ ಔಟಾಗಿದ್ದಾರೆ. ಭಾರತ 3 ವಿಕೆಟ್ ಕಳೆದುಕೊಂಡಿದೆ.
07:53 PM (IST) Mar 09
ಉತ್ತಮ ಆರಂಭ ಪಡೆದ ಟೀಂ ಇಂಡಿಯಾ ಇದೀಗ ದಿಢೀರ್ ಕುಸಿತ ಕಂಡಿದೆ. ಶುಭಮನ್ ಗಿಲ್ ವಿಕೆಟ್ ಬೆನ್ನಲ್ಲೇ ವಿರಾಟ್ ಕೊಹ್ಲಿ ಔಟಾಗಿದ್ದಾರೆ. ಕೊಹ್ಲಿ ಕೇವಲ 1 ರನ್ ಸಿಡಿಸಿ ನಿರ್ಗಮಿಸಿದ್ದಾರೆ. ಭಾರತ 2 ವಿಕೆಟ್ ನಷ್ಟಕ್ಕೆ 107 ರನ್ ಸಿಡಿಸಿದೆ.
07:50 PM (IST) Mar 09
ಚಾಂಪಿಯನ್ಸ್ ಟ್ರೋಫಿ ಪೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಆಘಾತ ಎದುರಿಸಿದ. ಶುಭಮನ್ ಗಿಲ್ 31 ರನ್ ಸಿಡಿಸಿ ಔಟಾಗಿದ್ದಾರೆ.
07:32 PM (IST) Mar 09
ನ್ಯೂಜಿಲೆಂಡ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಹಾಫ್ ಸೆಂಚುರಿ ಸಿಡಿಸಿದ್ದಾರೆ.
07:04 PM (IST) Mar 09
ನ್ಯೂಜಿಲೆಂಡ್ ನೀಡಿದ 252 ರನ್ ಟಾರ್ಗೆಟ್ ಚೇಸ್ ಮಾಡಲು ಟೀಂ ಇಂಡಿಯಾ ಅಖಾಡಕ್ಕಿಳಿದಿದೆ.ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದ್ದಾರೆ. 7 ಓವರ್ ಮುಕ್ತಾಯದ ವೇಳೆ ವಿಕೆಟ್ ನಷ್ಟವಿಲ್ಲದೆ 45 ರನ್ ಸಿಡಿಸಿದೆ.
06:04 PM (IST) Mar 09
ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ಭಾರತಕ್ಕೆ 252 ರನ್‌ಗಳ ಗುರಿ ನೀಡಿದೆ. ಮಿಚೆಲ್ ಹಾಗೂ ಬ್ರೇಸ್‌ವೆಲ್ ಅರ್ಧಶತಕಗಳ ನೆರವಿನಿಂದ ಕಿವೀಸ್ ಸವಾಲಿನ ಮೊತ್ತ ಕಲೆಹಾಕಿದೆ.
05:32 PM (IST) Mar 09
ಕಿವೀಸ್ ಮಧ್ಯಮ ಕ್ರಮಾಂಕದ ಬ್ಯಾಟರ್ ಡೇರಲ್ ಮಿಚೆಲ್ ಸಮಯೋಚಿತ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ನ್ಯೂಜಿಲೆಂಡ್ ತಂಡವು 45 ಓವರ್ ಅಂತ್ಯದ ವೇಳೆಗೆ 5 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿದೆ
03:42 PM (IST) Mar 09
ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್ ಯಾದವ್, ಕಿವೀಸ್‌ಗೆ ಡಬಲ್ ಶಾಕ್ ನೀಡಿದ್ದಾರೆ. ಮೊದಲ ಎಸೆತದಲ್ಲೇ ರಚಿನ್ ರವೀಂದ್ರ ಅವರನ್ನು ಬಲಿಪಡೆದ ಕುಲ್ದೀಪ್, ಇದಾದ ನಂತರ ಕೇನ್ ವಿಲಿಯಮ್ಸನ್ ಅವರನ್ನು ಬಲಿಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
03:28 PM (IST) Mar 09
ಚುರುಕಿನ ಬ್ಯಾಟಿಂಗ್ ಮೂಲಕ ಭಾರತದ ಪಾಲಿಗೆ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ರಚಿನ್ ರವೀಂದ್ರ ಅವರನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ರವೀಂದ್ರ 37 ರನ್ ಸಿಡಿಸಿ ವಿಕೆಟ್ ಒಪ್ಪಿಸಿದ್ದಾರೆ.
03:19 PM (IST) Mar 09
ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಉತ್ತಮ ಆರಂಭ ಪಡೆದಿದ್ದ ನ್ಯೂಜಿಲೆಂಡ್ ತಂಡಕ್ಕೆ ವರುಣ್ ಚಕ್ರವರ್ತಿ ಮೊದಲ ಶಾಕ್ ನೀಡಿದ್ದಾರೆ. 15 ರನ್ ಗಳಿಸಿದ್ದ ವಿಲ್ ಯಂಗ್ ಅವರನ್ನು ವರುಣ್ ಚಕ್ರವರ್ತಿ ಎಲ್‌ಬಿ ಬಲೆಗೆ ಕೆಡಹುವಲ್ಲಿ ಯಶಸ್ವಿಯಾಗಿದ್ದಾರೆ.
03:05 PM (IST) Mar 09
ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ಎದುರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ತಂಡವು ಉತ್ತಮ ಆರಂಭ ಪಡೆದಿದೆ. ಮೊದಲ 7 ಓವರ್ ಅಂತ್ಯದ ವೇಳೆಗೆ ಕಿವೀಸ್ ತಂಡವು ವಿಕೆಟ್ ನಷ್ಟವಿಲ್ಲದೇ 51 ರನ್ ಗಳಿಸಿದೆ.
02:23 PM (IST) Mar 09
ಭಾರತ: ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆ ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ.
ನ್ಯೂಜಿಲೆಂಡ್: ವಿಲ್ ಯಂಗ್, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್, ಡ್ಯಾರಿಲ್ ಮಿಚೆಲ್, ಟಾಮ್ ಲೇಥಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್(ನಾಯಕ), ಕೈಲ್ ಜೇಮಿಸನ್, ನೇಥನ್ ಸ್ಮಿತ್, ವಿಲಿಯಂ ಒರೌರ್ಕೆ
02:23 PM (IST) Mar 09
2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಿಂದ ಟೀಂ ಇಂಡಿಯಾ ಸತತ 15ನೇ ಬಾರಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಟಾಸ್ ಗೆಲ್ಲಲು ವಿಫಲವಾಗಿದೆ. ಈ ಪೈಕಿ ರೋಹಿತ್ ಶರ್ಮಾ ಸತತ 12 ಬಾರಿ ಟಾಸ್ ಸೋತರೇ, ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಕೆ ಎಲ್ ರಾಹುಲ್ ಮೂರು ಪಂದ್ಯಗಳಲ್ಲಿ ಟಾಸ್ ಸೋತಿದ್ದರು.
02:21 PM (IST) Mar 09
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಿದ್ದು, ನ್ಯೂಜಿಲೆಂಡ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಫೈನಲ್ ತಲುಪಿದೆ.
ಭಾರತ ತಂಡದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ನ್ಯೂಜಿಲೆಂಡ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಮ್ಯಾಟ್ ಹೆನ್ರಿ ಬದಲಿಗೆ ನೇಥನ್ ಸ್ಮಿತ್ ತಂಡಕೂಡಿಕೊಂಡಿದ್ದಾರೆ.
01:50 PM (IST) Mar 09
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತಿ ಬಗ್ಗೆ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್ ಮಾತಾಡಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ಭಾರತದ ತಯಾರಿ ಬಗ್ಗೆ ಹೇಳಿದ್ದಾರೆ.
01:41 PM (IST) Mar 09
ಭಾರತ ತಂಡವು ಭಾನುವಾರ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಮೂರನೇ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಕಾಯುತ್ತಿದೆ.
01:40 PM (IST) Mar 09
ದುಬೈನಲ್ಲಿ ಸದ್ಯ ಮಳೆ ಮುನ್ಸೂಚನೆ ಇಲ್ಲ. ಭಾನುವಾರದ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಕಡಿಮೆ. ಒಂದು ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ, ಮೀಸಲು ದಿನವಾದ ಸೋಮವಾರ ಪಂದ್ಯ ನಡೆಸಲಾಗುತ್ತದೆ. ಈ ಎರಡೂ ದಿನಗಳಲ್ಲಿ ಪಂದ್ಯ ನಡೆಯದಿದ್ದರೆ ಭಾರತ-ನ್ಯೂಜಿಲೆಂಡ್ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. 2002ರಲ್ಲಿ ಭಾರತ-ಶ್ರೀಲಂಕಾ ಜಂಟಿ ಚಾಂಪಿಯನ್ ಆಗಿದ್ದವು.
01:39 PM (IST) Mar 09
ಭಾರತೀಯ ಕಾಲಮಾನ ಇಂದು ಮಧ್ಯಾಹ್ನ 2 ಗಂಟೆಗೆ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಟಾಸ್ ನಡೆಯಲಿದೆ.
01:36 PM (IST) Mar 09
9ನೇ ಆವೃತ್ತಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಈಗ ನಿರ್ಘಾಯಕ ಘಟ್ಟ ತಲುಪಿದೆ. ಬಿಸಿಸಿಐ, ಪಿಸಿಬಿ ನಡುವೆ ಭಾರೀ ಸಂಘರ್ಷಕ್ಕೆ ಕಾರಣವಾಗಿ ಬಳಿಕ ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿರುವ ಟೂರ್ನಿಯ ಫೈನಲ್ ಪಂದ್ಯಕ್ಕೆ ದುಬೈನಲ್ಲಿ ವೇದಿಕೆ ಸಜ್ಜುಗೊಂಡಿದೆ.
01:33 PM (IST) Mar 09
IND vs NZ Fina match:ದುಬೈನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಭಾರತವು ಟೂರ್ನಿಯಲ್ಲಿ ಅಜೇಯವಾಗಿದ್ದು, ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ.