ಅನಿಲ್ ಕುಂಬ್ಳೆಗೆ ಹಾಲ್ ಫೇಮ್ ಗೌರವ; ವಿಡಿಯೋ ಪೋಸ್ಟ್ ಮಾಡಿ ಐಸಿಸಿ ಸಂಭ್ರಮ!

By Suvarna NewsFirst Published May 20, 2021, 10:29 PM IST
Highlights
  • ಟೀಂ ಇಂಡಿಯಾ ಮಾಜಿ ನಾಯಕನಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ
  • ಕನ್ನಡಿಗನ ಸಾಧನೆ ಪರಿಗಣಿಸಿ ಕುಂಬ್ಳೆಗೆ ವಿಶೇಷ ಗೌರವ

ದುಬೈ(ಮೇ.20):  ಟೀಂ ಇಂಡಿಯಾ ಮಾಜಿ ನಾಯಕ, ಕನ್ನಡಿಗ ಅನಿಲ್ ಕುಂಬ್ಳೆಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ ನೀಡಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅನಿಲ್ ಕುಂಬ್ಳೆ ಸಾಧನೆ ಪರಿಗಣಿಸಿ ಐಸಿಸಿ, ಈ ವಿಶೇಷ ಗೌರವ ನೀಡಿ ಸನ್ಮಾನಿಸಿದೆ. ಕುಂಬ್ಳೆ ಸಾಧನೆ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಐಸಿಸಿ ಕುಂಬ್ಳೆ ಐಸಿಸಿ ಹಾಲ್ ಆಫ್ ಫೇಮ್ ಗೌರವದ ಸಂಭ್ರಮಾಚರಣೆ ಮಾಡಿದೆ.

“If you were a batsman facing Anil Kumble, you knew that he had a plan for you."

One of India’s finest on 📽️ pic.twitter.com/55Et7OWpdV

— ICC (@ICC)

2004ರ ಸುನಾಮಿ ಅಲೆಯಿಂದ ಪಾರಾಗಿದ್ದ ಅನಿಲ್ ಕುಂಬ್ಳೆ!.

ಅನಿಲ್ ಕುಂಬ್ಳೆ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರು. ಟೆಸ್ಟ್‌ ಕ್ರಿಕೆಟ್‌ನಲ್ಲಿ 3ನೇ ಗರಿಷ್ಠ ವಿಕೆಟ್ ಪಡೆದ ಹೆಗ್ಗಳಿಕೆಗೆ ಕುಂಬ್ಳೆ ಪಾತ್ರರಾಗಿದ್ದಾರೆ.  ಇವರೆ ಮುಂದಿನ #ICCHallOfFame ಎಂದು ಪೋಸ್ಟ್ ಮಾಡಿದೆ.

 

 
 
 
 
 
 
 
 
 
 
 
 
 
 
 

A post shared by ICC (@icc)

ಅನಿಲ್ ಕುಂಬ್ಳೆ ಟೀಂ ಇಂಡಿಯಾ ಪರ 132 ಟೆಸ್ಟ್‌ ಆಡಿದ್ದಾರೆ. ಈ ಮೂಲಕ 619 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ 35 ಬಾರಿ 5 ವಿಕೆಟ್ ಸಾಧನೆ ಮಾಡಿದ್ದಾರೆ. 271 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಕುಂಬ್ಳೆ 30.89 ರ ಸರಾಸರಿಯಲ್ಲಿ 337 ವಿಕೆಟ್ ಗಳಿಸಿದ್ದಾರೆ

ಇತ್ತೀಚೆಗೆ ಐಸಿಸಿ  ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸಾಧನೆ ತೋರಿದ ಕ್ರಿಕೆಟಿಗರಿಗೆ ಐಸಿಸಿ ಹಾಲ್ ಆಫ್ ಫೇ್ ತಿಂಗಳ ಸಂಭ್ರಮ ಆಚರಿಸಲು ಇನ್‌ಸ್ಟಾಗ್ರಾಂನಲ್ಲಿ ವಿಶೇಷ ಅಭಿಯಾನ ಆರಂಭಿಸಿದೆ.

click me!