ಮದುವೆ ಆಗಲು ಒಂದು ಕಂಡೀಷನ್ ಹಾಕಿದ ಸ್ಪಿನ್ನರ್ ರಶೀದ್ ಖಾನ್

Published : Jul 12, 2020, 09:17 PM IST
ಮದುವೆ ಆಗಲು ಒಂದು ಕಂಡೀಷನ್ ಹಾಕಿದ ಸ್ಪಿನ್ನರ್ ರಶೀದ್ ಖಾನ್

ಸಾರಾಂಶ

ಆಫ್ಘಾನಿಸ್ತಾನ ಸ್ಟಾರ್ ಕ್ರಿಕೆಟಿಗ ರಶೀದ್ ಖಾನ್ ಇದೀಗ ತಮ್ಮ ಮದುವೆ ಕುರಿತು ಮಾತನಾಡಿದ್ದಾರೆ. ತಾವು ಮದುವೆಯಾಗಲು ರೆಡಿ ಇರುವುದಾಗಿ ಹೇಳಿದದ್ದಾರೆ. ಆದರೆ ತಮ್ಮ ಮದುವೆಗೆ ಒಂದು ಕಂಡೀಷನ್ ಕೂಡ ಹಾಕಿದ್ದಾರೆ.

ಕಾಬೂಲ್(ಜು.12): ಆಫ್ಘಾನಿಸ್ತಾನದ 21 ವರ್ಷದ ಕ್ರಿಕೆಟಿಗ ರಶೀದ್ ಖಾನ್ ಇದೀಗ ಮದುವೆ ಮಾತನಾಡಿದ್ದಾರೆ. ಕ್ರಿಕೆಟ್‌ ಕರಿಯರ್ ಕುರಿತು ಹೆಚ್ಚು ಗಮನ ಕೇಂದ್ರೀಕರಿಸಿರುವ ರಶೀದ್ ಖಾನ್ ಮದುವೆ ಕುರಿತು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಮದುವೆ ಕುರಿತು ಹಲವು ಪಶ್ನೆಗಳನ್ನು ಎದುರಿಸಿರುವ ರಶೀದ್ ಖಾನ್ ಇದೀಗ ತಾವು ಮದುವೆಯಾಗಲು ಒಂದು ಕಂಡೀಷನ್ ಹಾಕಿ ಎಲ್ಲರ ಬಾಯಿ ಮುಚ್ಚಿಸಿದ್ದಾರೆ.

ರಶೀದ್ ಖಾನ್ ದಾಳಿಗೆ ಐರ್ಲೆಂಡ್ ಧೂಳಿಪಟ: ಟಿ20 ಸರಣಿ ಕ್ಲೀನ್’ಸ್ವೀಪ್...

ಆಫ್ಘಾನಿಸ್ತಾನ ಐಸಿಸಿ ಏಕದಿನ ವಿಶ್ವಕಪ್ ಗೆಲ್ಲಬೇಕು ಬಳಿಕ ಮದುವೆಯಾಗುತ್ತೇನೆ ಎಂದು ರಶೀದ್ ಖಾನ್ ಅಜಾದಿ ರೇಡಿಯೋಗಿ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 

ಅಫ್ಘಾನಿಸ್ತಾನ ಇದುವರೆಗೆ 2 ಏಕದಿನ ವಿಶ್ವಕಪ್ ಹಾಗೂ 4 ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆಡಿದೆ. ಆದರೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ನಿಗದಿತ ಓವರ್ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನ ಬಲಿಷ್ಠ ತಂಡವಾಗಿ ಮಾರ್ಪಡುತ್ತಿದೆ. ಹೀಗಾಗಿ ಆಫ್ಘಾನಿಸ್ತಾನ ತಂಡ ವಿಶ್ವಕಪ್ ಗೆಲುವಿನ ಮೇಲೆ ಕಣ್ಣಿಟ್ಟಿದೆ. 

ರಶೀದ್ ಖಾನ್ ಜಗತ್ತಿನ ಶ್ರೇಷ್ಠ ಬೌಲರ್ ಎಂದ ಆಸೀಸ್ ಆಲ್ರೌಂಡರ್.

21 ವರ್ಷದಲ್ಲೇ ರಶೀದ್ ಖಾನ್ ಅಫ್ಘಾನಿಸ್ತಾನ ಸೇರಿದಂತೆ ಇತರ ದೇಶದಲ್ಲಿ ಸ್ಟಾರ್ ಪ್ಲೇಯರ್ ಆಗಿ ಮಿಂಚಿದ್ದಾರೆ. ಐಪಿಎಲ್ ಟೂರ್ನಿ, ಬಿಗ್‍ಬ್ಯಾಶ್ ಟೂರ್ನಿ ಸೇರಿದಂತೆ ಲೀಗ್ ಟೂರ್ನಿಗಳಲ್ಲಿ ರಶೀದ್ ಮಿಂಚಿನ ಪ್ರದರ್ಶನ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನೆ ಮಾತಾಗಿದ್ದಾರೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?