Cricket: 250 ರನ್ ಹೊಡೆದೂ ಸೋತಿದ್ದ ಭಾರತ, ಇಂದು 223 ರನ್‌ಗೆ ವಿಂಡೀಸ್‌ ಕಟ್ಟಿಹಾಕಿದ್ದು ಹೇಗೆ? ಪಂದ್ಯ ಉಲ್ಟಾ ಹೊಡೆದಿದ್ದು ಎಲ್ಲಿ?

Published : Oct 11, 2026, 11:17 PM IST
IND vs WI 3rd T20

ಸಾರಾಂಶ

ಇಂದೋರ್‌ನಲ್ಲಿ ನಡೆದ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 14 ರನ್‌ಗಳ ರೋಚಕ ಜಯ ಸಾಧಿಸಿದೆ. 223 ರನ್‌ಗಳ ಗುರಿ ಬೆನ್ನಟ್ಟಿದ ವಿಂಡೀಸ್ ತಂಡವನ್ನು ಭಾರತೀಯ ಬೌಲರ್‌ಗಳು 209 ರನ್‌ಗಳಿಗೆ ಕಟ್ಟಿಹಾಕಿದರು.

ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಇಂಡಿಯಾ ಹಾಗೂ ವಿಂಡೀಸ್‌ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಭಾರತ 20 ರನ್‌ಗಳಿಂದ ಸೋಲುಣಿಸಿತು. ಈ ಗೆಲುವಿನೊಂದಿಗೆ, ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 223 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್‌ನ್ನು ಕೇವಲ 209 ರನ್‌ ಭಾರತ ಕಟ್ಟಿ ಹಾಕಿತು. ಈ ನಿಟ್ಟಿನಲ್ಲಿ ಟೀಂ ಇಂಡಿಯಾ ಈ ಪಂದ್ಯವನ್ನು 14ರನ್‌ಗಳಿಂದ ಗೆಲುವಿನ ದಡ ಸೇರಿತು.

ಭಾರತ ಗೆದ್ದದ್ದು ಎಲ್ಲಿ?

ಟೀಂ ಇಂಡಿಯಾದ ಈ ಗೆಲುವಿನ ನಂತರ ಅಚ್ಚರಿ ಮಾತುಗಳು ವ್ಯಕ್ತವಾಗುತ್ತಿವೆ. ಕಳೆದ ಪಂದ್ಯದಲ್ಲಿ ಟೀಮ್ ಇಂಡಿಯಾ 250 ರನ್ ಗಳಿಸಿದ ನಂತರವೂ ಸೋತಿತ್ತು. ಆದರೆ ಇಂದು 223 ರನ್ ಗಳಿಸಿದ್ದರೂ ಗೆದ್ದದ್ದು ಹೇಗೆ? ಎನ್ನುವ ಪ್ರಶ್ನೆ ಹಲವರಲ್ಲಿದೆ. ಈ ಪ್ರಶ್ನೆಗೆ ಉತ್ತರವನ್ನು ಹುಡುಕೋಣ ಬನ್ನಿ.

ಹೋಪ್‌ ಔಟ್!

223 ರನ್‌ಗಳ ಗುರಿ ಬೆನ್ನಟ್ಟಿದ ವಿಂಡೀಸ್‌ಗೆ ಪ್ರಾರಂಭದಲ್ಲಿ ಆಘಾತ ಎದುರಾಯಿತು. ಅರ್ಶ್‌ದೀಪ್ ಸಿಂಗ್ ಎರಡನೇ ಓವರ್‌ನಲ್ಲಿ ಶೈ ಹೋಪ್ ಅವರನ್ನು 5 ರನ್‌ಗಳಿಗೆ ಕ್ಲೀನ್ ಬೌಲ್ಡ್ ಮಾಡಿದ್ದರು. ಈ ಆಟಗಾರ ಟೀಮ್ ಇಂಡಿಯಾಗೆ ಡೇಂಜರ್‍‌ ಎಂದು ಸಾಬೀತಾದ ಕಾರಣ ಟೀಮ್ ಇಂಡಿಯಾ ಅರ್ಧದಷ್ಟು ಪಂದ್ಯವನ್ನು ಗೆದ್ದಿದ್ದು ಇಲ್ಲಿಯೇ ಎನ್ನುವುದು ಸಾಭೀತಾಗಿದೆ.

ಕೈ ಹಿಡಿದ ನಮನ್‌ ಬೌಲಿಂಗ್!

ಹೋಪ್‌ ಔಟಾದಾಗ ಕಾಮಿಲ್ ಪೂರನ್ ಮತ್ತು ಶಿಮ್ರಾನ್ ಹೆಟ್ಮೈಯರ್ ಕ್ರೀಸ್‌ನಲ್ಲಿದ್ದರು. ಈ ಜೋಡಿ ಸುಮಾರು 60 ರನ್‌ಗಳ ಪಾಟ್ನರ್‍‌ಶಿಪ್‌ ಮಾಡಿತ್ತು. ಆದ್ದರಿಂದ ಈ ಇಬ್ಬರೂ ಪಂದ್ಯವನ್ನು ಗೆಲುವಿನ ದಡ ಸೇರಿಸುತ್ತಾರೆ ಎಂಬ ಭಯವಿತ್ತು. ಆದರೆ ನಮನ್ ಧೀರ್ 43 ರನ್‌ಗಳಿಗೆ ಶಿಮ್ರಾನ್ ಹೆಟ್ಮೈರ್ ಮತ್ತು 42 ರನ್‌ಗಳಿಗೆ ಕಾಮಿಲ್ ಪೂರನ್‌ರನ್ನ ಔಟ್ ಮಾಡಿದರು. ಈ ಎರಡು ವಿಕೆಟ್‌ಗಳ ನಂತರ, ಪಂದ್ಯವು ಸುಲಭವಾಗಿ ಭಾರತದ ಹಿಡಿತಕ್ಕೆ ಸಿಕ್ಕಿತು.

ಪೆವಿಲಿಯನ್‌ ಹಾದಿ ಹಿಡಿದ ಪೊವೆಲ್!

ರೋವ್‌ಮನ್ ಪೊವೆಲ್ ಮೈದಾನಕ್ಕೆ ಬಂದರು ಆದರೆ 5 ರನ್ ಗಳಿಸಿದಾಗ ಅಕ್ಷರ್ ಪಟೇಲ್ ಔಟ್ ಮಾಡಿದರು. ಅದಾದ ನಂತರ, ಶೆಫರ್ನ್ ರುದರ್‌ಫೋರ್ಡ್ ಮತ್ತು ಸ್ಯಾಂಪ್ಸನ್ ನಡುವೆ ಒಳ್ಳೆ ಪಾಟ್ನರ್‍‌ಶಿಪ್‌ ಕಂಡುಬಂದಿತು. ಆದರೆ ನಿತೀಶ್ ರೆಡ್ಡಿ ಸ್ಯಾಂಪ್ಸನ್ ವಿಕೆಟ್ ಪಡೆಯುವ ಮೂಲಕ ಈ ಪಾಟ್ನರ್‍‌ಶಿಪ್‌ ತೊಡೆದು ಹಾಕಿದರು. ಅವರ ನಂತರ, ಶಮರ್ ಸ್ಪ್ರಿಂಗರ್ 11 ಎಸೆತಗಳಲ್ಲಿ 35 ರನ್ ಗಳಿಸುವ ಮೂಲಕ ಪಂದ್ಯ ಗೆಲ್ಲಲು ಪ್ರಯತ್ನಿಸಿದರು. ಆದರೆ ಅಂತರ ತುಂಬಾ ದೂರವಿತ್ತು. ಈ ಕಾರಣದಿಂದಾಗಿ, ಟೀಮ್ ಇಂಡಿಯಾ ಈ ಪಂದ್ಯವನ್ನು 14 ರನ್‌ಗಳಿಂದ ಗೆದ್ದಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ತಿಲಕ್ ವರ್ಮಾ ರನೌಟ್ ಅಲ್ಲ, ಮೋಸ ಆಗಿದೆ' ಎಂದ ಫ್ಯಾನ್ಸ್, ಧೋನಿ ಘಟನೆ ಸ್ಮರಿಸಿ ವಿಂಡೀಸ್‌ಗೆ ಕ್ರೀಡಾ ಸ್ಫೂರ್ತಿಯ ಪಾಠ
Cricket: 300 ಗುರಿ ಹೊಂದಿದ ಟೀಂ ಇಂಡಿಯಾ 223ಕ್ಕೆ ಆಲೌಟ್‌; ಆ ಕುಸಿತಕ್ಕೆ ಇವರೇ ಕಾರಣ!