ಹಾರ್ದಿಕ್ ಪಾಂಡ್ಯಗೆ ಡಬಲ್ ಶಾಕ್; ಪಾಂಡ್ಯಗಿಂತ ಮೊದಲು ಈ 6 ಟೀಂ ಇಂಡಿಯಾ ಕ್ರಿಕೆಟಿಗರಿಗೆ ಆಗಿದೆ ಡಿವೋರ್ಸ್..!

By Naveen Kodase  |  First Published Jul 20, 2024, 5:36 PM IST

ಇತ್ತೀಚೆಗೆ ಹಾರ್ದಿಕ್ ಪಾಂಡ್ಯ-ನತಾಶಾ ಸ್ಟ್ಯಾಂಕೋವಿಚ್ ಡಿವೋರ್ಸ್ ಪಡೆದಿದ್ದಾರೆ. ಹಾಗಂತ ಡಿವೋರ್ಸ್ ಪಡೆದ ಮೊದಲ ಜೋಡಿ ಇದೇ ಏನಲ್ಲ, ಈ ಹಿಂದೆ ಭಾರತದ 6 ಕ್ರಿಕೆಟಿಗರು ವಿಚ್ಛೇದನ ಪಡೆದುಕೊಂಡಿದ್ದಾರೆ. 


ಬೆಂಗಳೂರು: ಒಬ್ಬ ಮನುಷ್ಯನಿಗೆ ಒಂದು ದೊಡ್ಡ ಶಾಕ್ ಅರಗಿಸಿಕೊಳ್ಳುವುದೇ ಕಷ್ಟ. ಅಂತದ್ರಲ್ಲಿ ಹಾರ್ದಿಕ್ ಪಾಂಡ್ಯಗೆ ಒಂದೇ ದಿನ ಡಬಲ್ ಶಾಕ್ ಆಯ್ತು. ಮುಂಬೈಕರ್‌ಗಳು ಶಾಕ್ ಕೊಟ್ಟ ದಿನವೇ ಹೆಂಡತಿಯೂ ಪಾಂಡ್ಯಗೆ ಶಾಕ್ ಕೊಟ್ಟಲು. ಪಾಂಡ್ಯ-ನತಾಶಾ ಡಿವೋರ್ಸ್ ಆಗಿದೆ. ಮತ್ಯಾವ್ಯಾವ ಕ್ರಿಕೆಟರ್ಸ್ ಡಿವೋರ್ಸ್ ಪಡೆದಿದ್ದಾರೆ ಗೊತ್ತಾ..?

ಹಾರ್ದಿಕ್ ಪಾಂಡ್ಯಗೆ ಡಬಲ್ ಶಾಕ್..!

Tap to resize

Latest Videos

ಹಾರ್ದಿಕ್ ಪಾಂಡ್ಯ ನಸೀಬು ಯಾಕೋ ಕೈಕೊಟ್ಟಿದೆ ಕಂಡ್ರಿ. ಈ ವರ್ಷ ಅವರಿಗೆ ನತದೃಷ್ಟ ಬೆನ್ನೇರಿದೆ. ವೈಯಕ್ತಿಕ ಬದುಕಿನಲ್ಲೂ ಅದೃಷ್ಟ ಕೈಕೊಟ್ರೆ, ಕ್ರಿಕೆಟ್ ವೃತ್ತಿ ಜೀವನದಲ್ಲೂ ಅದೃಷ್ಟ ಕೈ ಜಾರಿದೆ. ಹಾಗಾಗಿ ಶಾಕ್ ಮೇಲೆ ಶಾಕ್ ಎದುರಿಸುತ್ತಿದ್ದಾರೆ. ಈ ಆಘಾತದಿಂದ ಅವರು ಹೊರಬರಲು ಇನ್ನೆಷ್ಟು ದಿನಗಳು ಬೇಕಾಗಬಹುದೋ ಗೊತ್ತಿಲ್ಲ. ಟೀಂ ಇಂಡಿಯಾ ನಾಯಕತ್ವ ಕಳೆದುಕೊಂಡು ಕೆಲವೇ ಗಂಟೆಗಳಲ್ಲಿ ಪತ್ನಿ ನತಾಶಾ ಜೊತೆ ಡಿವೋರ್ಸ್ ಪಡೆದಿರುವುದಾಗಿ ಪಾಂಡ್ಯ ಘೋಷಿಸಿದ್ದಾರೆ. 

IPL 2025 ಹರಾಜಿಗೂ ಮುನ್ನ 4 ಅಲ್ಲ ಈ ಮೂವರನ್ನು ರೀಟೈನ್ ಮಾಡಲು ತೀರ್ಮಾನಿಸಿದ RCB.! ಈತನಿಗೆ RTM ಬಳಸಲು ನಿರ್ಧಾರ?

2020ರಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್ ವಿವಾಹವಾಗಿದ್ದರು. ಅದೇ ವರ್ಷ ಇವರಿಬ್ಬರಿಗೆ ಗಂಡು ಮಗು ಜನಿಸಿತ್ತು. ಈ ವರ್ಷ ಆರಂಭದಿಂದಲೂ ಇವರ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಅನ್ನೋ ಸುದ್ದಿ ಹರಿದಾಡುತ್ತಿತ್ತು. ಇದಕ್ಕೆ ಇಂಬು ನೀಡುವಂತೆ, ಐಪಿಎಲ್ನಲ್ಲಿ ಪಾಂಡ್ಯ ಆಡಿದ್ರೂ ನತಾಶಾ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿರಲಿಲ್ಲ. ಟಿ20 ವಿಶ್ವಕಪ್ ವೇಳೆಯೂ ನತಾಶಾ ಸುಳಿವಿರಲಿಲ್ಲ. ಅನಂತ್ ಅಂಬಾನಿ ಮದುವೆಗೆ ಪಾಂಡ್ಯ ಒಬ್ಬರೇ ಹೋಗಿದ್ದರು. ಈ ನಡುವೆ ಹೊಸ ಬಾಯ್ ಫ್ರೆಂಡ್ ಜೊತೆ ನತಾಶಾ ಕಾಣಿಸಿಕೊಂಡ್ರೆ, ಹೊಸ ಗರ್ಲ್ಸ್ ಫ್ರೆಂಡ್ ಜೊತೆ ಪಾಂಡ್ಯ ಕಾಣಿಸಿಕೊಂಡಿದ್ದರು. ಆದ್ರೂ ಇವರಿಬ್ಬರ ಡಿವೋರ್ಸ್ ವಿಷ್ಯ ಸಸ್ಪೆನ್ಸ್ ಆಗಿಯೇ ಇತ್ತು. ಆದ್ರೀಗ ಡಿವೋರ್ಸ್ ಪಡೆದುಕೊಂಡಿರುವುದನ್ನ ಸ್ವತಃ ಪಾಂಡ್ಯನೇ ಖಚಿತಪಡಿಸಿದ್ದಾರೆ. 

ಹಾರ್ದಿಕ್ ಪಾಂಡ್ಯ ಭಾವನಾತ್ಮಕ ಪೋಸ್ಟ್

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಡಿವೋರ್ಸ್ ಬಗ್ಗೆ ಬರೆದಿರುವ ಪಾಂಡ್ಯ, ನಾಲ್ಕು ವರ್ಷಗಳ ಪಯಣ ಅಂತ್ಯಗೊಂಡಿದೆ. ವೈವಾಹಿಕ ಬದುಕಿನಲ್ಲಿ ಯಾವುದೇ ಬಿರುಕು ಬರದಂತೆ ತಡೆಯಲು ಸಾಕಷ್ಟು ಪ್ರಯತ್ನಪಟ್ಟೆವು. ಆದರೆ ಅದು ಸಾಧ್ಯವಾಗದಿದ್ದಾಗ ಪರಸ್ಪರ ಒಪ್ಪಿಗೆಯೊಂದಿಗೆ ಬೇರ್ಪಡುತ್ತಿದ್ದೇವೆ. ಇದು ಕಠಿಣ ನಿರ್ಧಾರವಾಗಿದ್ದು, ನಮ್ಮ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಈ ದುಃಖದ ಸಮಯದಲ್ಲಿ ತಮ್ಮ ಖಾಸಗಿತನವನ್ನು ಗೌರವಿಸುವಂತೆ ಅಭಿಮಾನಿಗಳಿಗೆ ಮತ್ತು ಜನರಿಗೆ ಪಾಂಡ್ಯ ಮನವಿ ಮಾಡಿದ್ದಾರೆ.  ತಾನು ಮತ್ತು ನತಾಶಾ ಬೇರ್ಪಟ್ಟರೂ ಒಟ್ಟಿಗೆ ಮಗ ಅಗಸ್ತ್ಯನನ್ನು ಬೆಳೆಸುತ್ತೇವೆ ಎಂದು ಹೇಳಿದ್ದಾರೆ. ಆದ್ರೆ ನತಾಶಾ ತನ್ನ ದೇಶ ಸರ್ಬಿಯಾಗೆ ವಾಪಾಸ್ ಆಗಿದ್ದು, ಪುತ್ರ ಅಗಸ್ತ್ಯನನ್ನೂ ಕರೆದುಕೊಂಡು ಹೋಗಿದ್ದಾರೆ.

ನತಾಶಾ ಔಟ್, ಬಾಲಿವುಡ್ ಹಾಟ್ ಬೆಡಗಿ ಇನ್: ಹೊಸ ಸಂಬಂಧ ಬೆಳೆಸಲು ರೆಡಿಯಾದ್ರಾ ಹಾರ್ದಿಕ್ ಪಾಂಡ್ಯ..!

ಯಾವ್ಯಾವ ಕ್ರಿಕೆಟರ್ಸ್ ಡಿವೋರ್ಸ್ ಪಡೆದಿದ್ದಾರೆ ಗೊತ್ತಾ..?

4 ವರ್ಷಗಳ ಸಂಸಾರಿಕ ಜೀವನಕ್ಕೆ ಪಾಂಡ್ಯ-ನತಾಶಾ, ಈಗ ನಾನೊಂದು ತೀರ ನೀನೊಂದು ತೀರ ಅನ್ನುವಂತಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಭಾರತದಲ್ಲೂ ಸರ್ವೆ ಸಾಮಾನ್ಯವಾಗಿದೆ. ಭಾರತೀಯ ಕ್ರಿಕೆಟ್ನಲ್ಲಿ ಡಿವೋರ್ಸ್ ಪಡೆಯುತ್ತಿರುವ ಮೊದಲ ಕ್ರಿಕೆಟ್ ಆಟಗಾರ ಪಾಂಡ್ಯ ಅಲ್ಲ. ಹಾರ್ದಿಕ್ಗೂ ಮುನ್ನ ಆರು ಸ್ಟಾರ್ ಆಟಗಾರರು ಡಿವೋರ್ಸ್ ಪಡೆದು ಆಘಾತ ಎದುರಿಸಿದ್ದಾರೆ.

ಶಿಖರ್ ಧವನ್ ಮತ್ತು ಆಯೇಶಾ ಮುಖರ್ಜಿ 2023ರಲ್ಲಿ ವಿಚ್ಛೇದನ ಪಡೆದಿದ್ದರು. ದಿನೇಶ್ ಕಾರ್ತಿಕ್ ತನ್ನ ಬಾಲ್ಯದ ಗೆಳತಿ ನಿಕಿತಾ ಬಂಜಾರಾ ಅವರನ್ನು ಮದುವೆಯಾಗಿ ಐದು ವರ್ಷದ ಬಳಿಕ ಡಿವೋರ್ಸ್ ನೀಡಿದ್ದರು. ಮೊಹಮ್ಮದ್ ಶಮಿ-ಹಸಿನ್ ಜಹಾನ್ ಡಿವೋರ್ಸ್ ಆಗಿದೆ. ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಎರಡು ಬಾರಿ ವಿಚ್ಛೇದನ ಪಡೆದಿದ್ದಾರೆ. ಮೊದಲ ಪತ್ನಿ ನೌರೀನ್‌ಗೆ ವಿಚ್ಛೇದನ ನೀಡಿ, ಬಾಲಿವುಡ್ ನಟಿ ಸಂಗೀತಾ ಬಿಜಲಾನಿ ಅವರನ್ನು ವಿವಾಹವಾಗಿದ್ದರು. ಬಳಿಕ ಸಂಗೀತಾಗೆ ಡಿವೋರ್ಸ್ ನೀಡಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಅವರನ್ನು ವಿವಾಹವಾದರು. ವಿನೋದ್ ಕಾಂಬ್ಳಿ ತಮ್ಮ ಬಾಲ್ಯದ ಗೆಳತಿ ನೋಯೆಲ್ಲಾ ಲೂಯಿಸ್ ಅವರನ್ನು ಮದುವೆಯಾಗಿ ವಿಚ್ಛೇದನ ಪಡೆದಿದ್ದಾರೆ.  ಜಾವಗಲ್ ಶ್ರೀನಾಥ್-ಜ್ಯೋಸ್ನಾ ಡಿವೋರ್ಸ್ ಆಗಿದೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

click me!