ನಾಲ್ವರು ಆಟಗಾರರು ಇಂಜುರಿ, ಟೀಂ ಇಂಡಿಯಾಗೆ ಶಾಕ್..! IPL ವೇಳೆಗೆ ಫಿಟ್ ಆಗ್ತಾರಾ..?

By Suvarna News  |  First Published Dec 25, 2023, 5:18 PM IST

2023 ಭಾರತೀಯ ಕ್ರಿಕೆಟ್ ಪಾಲಿಗೆ ಕರಾಳ ವರ್ಷ. ಟೆಸ್ಟ್ ವಿಶ್ವಕಪ್ ಫೈನಲ್ ಮತ್ತು ಒನ್​ಡೇ ವರ್ಲ್ಡ್​ಕಪ್ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಎರಡು ಐಸಿಸಿ ಕಪ್​ಗಳನ್ನ ಕೈ ಚೆಲ್ಲಿತು. ಈಗ 2024ರ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಈಗಾಗಲೇ ಸಿದ್ದತೆ ಆರಂಭಿಸಿದೆ.


ಬೆಂಗಳೂರು(ಡಿ.25) ಏಕದಿನ ವಿಶ್ವಕಪ್ ಮಿಸ್ ಆಗಿದೆ. ಅಟ್ ಲಿಸ್ಟ್​ ಟಿ20 ವರ್ಲ್ಡ್‌ಕಪ್​ ಅನ್ನಾದ್ರೂ ಗೆಲ್ಲೋ ಟಾರ್ಗೆಟ್ ಇಟ್ಟುಕೊಂಡಿದೆ ಬಿಸಿಸಿಐ. ಆದ್ರೆ ಆಟಗಾರರ ಇಂಜುರಿ ಬಿಗ್ ಬಾಸ್‌ಗಳಿಗೆ ದೊಡ್ಡ ತಲೆ ನೋವಾಗಿದೆ. ಒಬ್ಬರ ಹಿಂದೆ ಒಬ್ಬರು ಇಂಜುರಿ ಲಿಸ್ಟ್‌ಗೆ ಸೇರುತ್ತಿದ್ದಾರೆ. ಇವರೆಲ್ಲಾ ಆದಷ್ಟು ಬೇಗ ಫಿಟ್ ಆಗ್ತಾರಾ ಅನ್ನೋ ಸ್ಪಷ್ಟ ಮಾಹಿತಿಯೇ ಇಲ್ಲ.

ನಾಲ್ವರು ಆಟಗಾರರು ಇಂಜುರಿ, ಟೀಂ ಇಂಡಿಯಾಗೆ ಶಾಕ್..!

Latest Videos

undefined

2023 ಭಾರತೀಯ ಕ್ರಿಕೆಟ್ ಪಾಲಿಗೆ ಕರಾಳ ವರ್ಷ. ಟೆಸ್ಟ್ ವಿಶ್ವಕಪ್ ಫೈನಲ್ ಮತ್ತು ಒನ್​ಡೇ ವರ್ಲ್ಡ್​ಕಪ್ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಎರಡು ಐಸಿಸಿ ಕಪ್​ಗಳನ್ನ ಕೈ ಚೆಲ್ಲಿತು. ಈಗ 2024ರ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಈಗಾಗಲೇ ಸಿದ್ದತೆ ಆರಂಭಿಸಿದೆ. ಆದ್ರೆ ತಂಡಕ್ಕೆ ಗಾಯಾಳು ಸಮಸ್ಯೆ ಕಾಡೋಕೆ ಶುರು ಮಾಡಿದೆ. ಹೌದು, ಆಸೀಸ್ ಮತ್ತು ಆಫ್ರಿಕಾ ವಿರುದ್ಧ ಟಿ20 ಸರಣಿ ಗೆದ್ದಿರುವ ಟೀಂ ಇಂಡಿಯಾ, ಅಫ್ಘಾನಿಸ್ತಾನ ವಿರುದ್ಧ ಟಿ20 ಸಿರಿಸ್ ಆಡಲು ರೆಡಿಯಾಗಿದೆ. ಬಳಿಕ ಐಪಿಎಲ್ ಆಡಿ, ನೇರ ಟಿ20 ವರ್ಲ್ಡ್‌ಕಪ್​ನಲ್ಲಿ ಕಣಕ್ಕಿಳಿಯಲಿದೆ. ಆದ್ರೆ ಅದಕ್ಕೂ ಮುಂಚೆ ನಾಲ್ವರು ಸ್ಟಾರ್ ಪ್ಲೇಯರ್ಸ್ ಇಂಜುರಿ ಟೀಂ ಇಂಡಿಯಾಗೆ ಚಿಂತೆಗೀಡು ಮಾಡಿದೆ.

ಇಂಜುರಿ ಲಿಸ್ಟ್‌ನಲ್ಲಿ ಟಿ20 ನಾಯಕ 

ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ,  ಏಕದಿನ ವಿಶ್ವಕಪ್ ವೇಳೆ ಗಾಯಗೊಂಡಿದ್ದರು. ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಹಾರ್ದಿಕ್, ಹಿಮ್ಮಡಿ ಗಾಯಕ್ಕೆ ಒಳಗಾಗಿದ್ದು, ಆ ಬಳಿಕ ಇದುವರೆಗೂ ಪುನರಾಗಮನ ಮಾಡಲು ಸಾಧ್ಯವಾಗಿಲ್ಲ. ಅಲ್ಲದೆ ಇವರ ಗಾಯದ ಬಗ್ಗೆ ಇನ್ನು ಯಾವುದೇ ಅಪ್‌ಡೇಟ್‌ ಹೊರ ಬಂದಿಲ್ಲ. ಐಪಿಎಲ್ ಆಡುವುದು ಅನುಮಾನ ಅಂತ ಹೇಳಲಾಗ್ತಿದೆ. ಐಪಿಎಲ್ ಬಳಿಕ ನಡೆಯೋ ವರ್ಲ್ಡ್‌ಕಪ್ ಆದ್ರೂ ಆಡ್ತಾರಾ ಅನ್ನೋದಕ್ಕೆ ಆನ್ಸರ್ ಮಾತ್ರ ಇನ್ನೂ ಸಿಕ್ಕಿಲ್ಲ. ಅವರ ಗಾಯದ ಪ್ರಮಾಣವೂ ತಿಳಿದಿಲ್ಲ. ಎಲ್ಲವೂ ನಿಗೂಢ.

ಪೊಲೀಸ್ ಠಾಣೆ ಮೆಟ್ಟಿಲೇರಿದ ಕ್ರಿಕೆಟಿಗ ಕೆ ಸಿ ಕಾರಿಯಪ್ಪ ಲವ್‌ಸ್ಟೋರಿ; ಮಾಜಿ ಪ್ರೇಯಸಿಯಿಂದ ಗಂಭೀರ ಆರೋಪ

ಮೊದಲ ಟೆಸ್ಟ್‌ನಿಂದ ಹೊರಬಿದ್ದ ಶಮಿ

ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್​​​ನಲ್ಲಿ ಮೊಹಮ್ಮದ್ ಶಮಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. 7 ಪಂದ್ಯಗಳಲ್ಲಿ 24 ವಿಕೆಟ್ ಪಡೆದು ಗರಿಷ್ಠ ವಿಕೆಟ್ ಟೇಕ್ ಆಗಿದ್ದರು. ಆದ್ರೆ ಸದ್ಯ ಶಮಿಗೆ ಪಾದದ ಗಾಯವಾಗಿದ್ದು, ಈ ಕಾರಣದಿಂದಾಗಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​​​ನಿಂದ ಹೊರಗುಳಿದಿದ್ದಾರೆ. 2ನೇ ಟೆಸ್ಟ್​ ಆಡ್ತಾರಾ ಅನ್ನೋದನ್ನ ಬಿಸಿಸಿಐ ಇನ್ನೂ ಕನ್ಫರ್ಮ್​ ಮಾಡಿಲ್ಲ. ಗಾಯದ ಪ್ರಮಾಣವೂ ತಿಳಿದಿಲ್ಲ.

ಅಫ್ಘನ್ ಸರಣಿಯಿಂದ ಸೂರ್ಯ ಕಿಕೌಟ್​

ಏಕದಿನ ವಿಶ್ವಕಪ್​​​ನಲ್ಲಿ ಕಳಪೆ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದ್ದ ಸೂರ್ಯಕುಮಾರ್ ಯಾದವ್, ಸದ್ಯ ಇಂಜುರಿ ಲಿಸ್ಟ್​​​​​​​​​​​​​ನಲ್ಲಿದ್ದಾರೆ. ಭಾರತಕ್ಕೆ ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ವಿರುದ್ಧ ಟಿ20 ಸರಣಿ ಗೆಲ್ಲಿಸಿಕೊಟ್ಟ ಸೂರ್ಯ, ಆಫ್ರಿಕಾದಲ್ಲಿ ಸೆಂಚುರಿ ಸಹ ಸಿಡಿಸಿದ್ದರು. ಆದ್ರೆ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಪಾದದ ಗಾಯಕ್ಕೆ ಒಳಗಾಗಿದ್ದರು. ಸೂರ್ಯನಿಗೆ ಗ್ರೇಡ್-2 ಗಾಯವಾಗಿದೆ. ಅವರು ಅಫ್ಘಾನಿಸ್ತಾನ ಟಿ20 ಸರಣಿ ಆಡಲ್ಲ ಅನ್ನೋ ಸುದ್ದಿ ಬಂದಿದೆ. ಆದರೆ, ಸೂರ್ಯ ಗಾಯದ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಇಲ್ಲ. ಹೀಗಿರುವಾಗ ಟಿ20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾಗೆ ದೊಡ್ಡ ಸಮಸ್ಯೆಯಾಗಲಿದೆ. ಸೂರ್ಯ ಭಾರತ ಟಿ20 ತಂಡದ ಮೇನ್ ಪ್ಲೇಯರ್​.

ಭಾರತದ ಗೆಲುವಿನ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದ ಆಸೀಸ್ ನಾಯಕಿ..! ವಿಡಿಯೋ Viral

ಆಫ್ರಿಕಾ ಟೆಸ್ಟ್ ಸರಣಿಯಿಂದ ಋತುರಾಜ್ ಔಟ್​

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿದ್ದ ಋತುರಾಜ್ ಗಾಯಕ್ವಾಡ್, 2ನೇ ಪಂದ್ಯದ ವೇಳೆ ಇಂಜುರಿಯಾಗಿದ್ದರು. ಫೀಲ್ಡಿಂಗ್ ಮಾಡುವಾಗ ತಮ್ಮ ಬಲಗೈಯ ಬೆರಳಿಗೆ ಗಾಯ ಮಾಡಿಕೊಂಡಿದ್ದ ಋತುರಾಜ್, ಆಫ್ರಿಕಾ ಟೆಸ್ಟ್​ ಸರಣಿಯಿಂದ ಹೊರಬಿದ್ದಿದ್ದಾರೆ. ಸದ್ಯ ಬೆಂಗಳೂರಿನಲ್ಲಿರುವ ಎನ್‌ಸಿಎನಲ್ಲಿ ಫಿಟ್ನೆಸ್ ಟೆಸ್ಟ್‌ಗೆ ಒಳಗಾಗಿದ್ದಾರೆ. ಆದ್ರೆ ಅವರ ಫಿಟ್ನೆಸ್ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ. ಯಾವಾಗ ಫಿಟ್ ಆಗ್ತಾರೆ ಅನ್ನೋದು ಗೊತ್ತಿಲ್ಲ. ಐಪಿಎಲ್ ಮತ್ತು ಟಿ20 ವಿಶ್ವಕಪ್ ಸನಿಹದಲ್ಲಿರುವ ಹೀಗೆ ಆಟಗಾರರು ಸಾಲು ಸಾಲಾಗಿ ಇಂಜುರಿಯಾಗಿರೋದು ಟೀಂ ಇಂಡಿಯಾಗೆ ಚಿಂತೆಗೀಡು ಮಾಡಿದೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!