
ಮುಂಬೈ[ಜ.05]: ನತಾಶಾ ಜತೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದೇನೆ ಎಂದು ಹಾರ್ದಿಕ್ ಪಾಂಡ್ಯ ನಮಗೇ ಹೇಳಿರಲಿಲ್ಲ. ಹೀಗಂತ, ಸತ್ವಃ ಪಾಂಡ್ಯ ತಂದೆ ಹಿಮಾಂಶು ಹೇಳಿದ್ದಾರೆ.
27ರ ಹರೆಯದ ನತಾಶಗೆ ಮನಸೋತ 26ರ ಪಾಂಡ್ಯ; ಇಲ್ಲಿದೆ ಕ್ರಿಕೆಟ್ ಬಾಲಿವುಡ್ ಲವ್ ಸ್ಟೋರಿ!
‘ನತಾಶಾ ಜತೆ ಡೇಟಿಂಗ್ ವಿಷಯ ತಿಳಿದಿತ್ತು. ಹಲವು ಬಾರಿ ಆಕೆಯನ್ನು ಭೇಟಿ ಮಾಡಿದ್ದೇವೆ. ಆದರೆ ಇಬ್ಬರು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಬಗ್ಗೆ ಸುಳಿವೇ ಇರಲಿಲ್ಲ’ ಎಂದು ಹಿಮಾಂಶು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಜನವರಿ 01ರಂದು ಹಾರ್ದಿಕ್ ಹಾಗೂ ಸರ್ಬಿಯಾ ನಟಿ ನತಾಶಾ ಸ್ಟ್ಯಾಂಕೋವಿಚ್ ದುಬೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಹಾರ್ದಿಕ್-ನತಾಶಾ ಎಂಗೇಜ್‌ಮೆಂಟ್: ಅಚ್ಚರಿ ವ್ಯಕ್ತಪಡಿಸಿದ ಕೊಹ್ಲಿ
ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದು, ಶ್ರೀಲಂಕಾ ವಿರುದ್ಧದ ಸರಣಿಗೂ ಆಯ್ಕೆಯಾಗಿಲ್ಲ. ಆದಾಗಿಯೂ ನ್ಯೂಜಿಲೆಂಡ್ ಪ್ರವಾಸಕ್ಕೆ ಪಾಂಡ್ಯ ಭಾರತ ’ಎ’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.