12 ದಿನ, 1800 ಕಿ.ಮೀ ಸೈಕಲ್‌ ಯಾತ್ರೆ; ಹಾರ್ದಿಕ್ ಪಾಂಡ್ಯನಿಂದ ಫ್ಯಾನ್‌ಗೆ ಮರೆಯಲಾಗದ ಸರ್ಪ್ರೈಸ್

Published : Jul 02, 2026, 11:53 AM IST
Hardik Pandya

ಸಾರಾಂಶ

ಒಡಿಶಾದಿಂದ 12 ದಿನ ಸೈಕಲ್ ತುಳಿದು ಬೆಂಗಳೂರಿಗೆ ಬಂದು Hardik Pandyaರನ್ನು ಭೇಟಿಯಾದ ಅಭಿಮಾನಿಯ ಪ್ರೀತಿಗೆ ಸ್ಟಾರ್ ಕ್ರಿಕೆಟರ್ ಹಣ ನೀಡಿ ಗೌರವ ಸಲ್ಲಿಸಿದ್ದು, ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಕ್ರಿಕೆಟ್ ಅಭಿಮಾನಿಗಳು ನೆಚ್ಚಿನ ಆಟಗಾರರನ್ನು ಭೇಟಿಯಾಗಲು ಪರದಾಡುತ್ತಾರೆ, ಎಷ್ಟೇ ದೂರವಾದರೂ ಹೋಗಲು ಸಿದ್ಧರಾಗಿರುತ್ತಾರೆ. ಈಗ ಒಡಿಶಾದ 18 ವರ್ಷದ ಯುವಕ ದೀಪಕ್ ಮಾಡಿದ ಕೆಲಸ ಈಗ ವೈರಲ್ ಆಗಿದೆ. ತನ್ನ ಫೆವರೆಟ್‌ ಕ್ರಿಕೆಟರ್ Hardik Pandya ಅವರನ್ನು ಒಮ್ಮೆ ಭೇಟಿ ಮಾಡಬೇಕು ಎಂಬ ಕನಸಿಗಾಗಿ ಆತ ಬರೋಬ್ಬರಿ 12 ದಿನಗಳ ಕಾಲ ಸುಮಾರು 1,800 ಕಿಲೋಮೀಟರ್‌ ಸೈಕಲ್‌ನಲ್ಲಿ ಪ್ರಯಾಣಿಸಿ ಬೆಂಗಳೂರಿಗೆ ತಲುಪಿದ್ದಾನೆ. ಈ ಅಪರೂಪದ ಅಭಿಮಾನವನ್ನು ಕಂಡ ಹಾರ್ದಿಕ್ ಕೂಡ ದೊಡ್ಡ ಮನಸ್ಸು ತೋರಿದ್ದಾರೆ.

ದೀಪಕ್‌ಗೆ ಹಾರ್ದಿಕ್ ಪಾಂಡ್ಯ ಎಂದರೆ ಅಪಾರ ಅಭಿಮಾನ. ಕೈಯಲ್ಲಿ ಸಾಕಷ್ಟು ಹಣವಿಲ್ಲದ ಕಾರಣ ಹಳೆಯ ಸೈಕಲ್‌ನ್ನೇ ನಂಬಿಕೊಂಡು ಒಡಿಶಾದಿಂದ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಕಡೆ ಪ್ರಯಾಣ ಆರಂಭಿಸಿದ್ದ. ಬಿಸಿಲು, ಮಳೆ, ಹಸಿವು, ಆಯಾಸ ಎಲ್ಲವನ್ನೂ ಲೆಕ್ಕಿಸದೇ 12 ದಿನಗಳ ನಿರಂತರ ಸೈಕಲ್ ಸವಾರಿ ಮಾಡಿ ಕೊನೆಗೂ ತನ್ನ ಕನಸಿನ ತಾಣ ತಲುಪಿದ್ದಾನೆ.

ಈ ವಿಚಾರ ಸಾಮಾಜಿಕ ಜಾಲತಾಣಗಳ ಮೂಲಕ ಹಾರ್ದಿಕ್ ಪಾಂಡ್ಯ ಅವರಿಗೆ ತಲುಪುತ್ತಿದ್ದಂತೆ, ಅವರು ತಕ್ಷಣವೇ ದೀಪಕ್ ಅವರನ್ನು ಭೇಟಿಯಾಗಲು ಆಹ್ವಾನಿಸಿದ್ದಾರೆ. ಭೇಟಿಯಾದ ಕ್ಷಣವೇ ಹಾರ್ದಿಕ್ ಆತ್ಮೀಯವಾಗಿ ಅಪ್ಪಿಕೊಂಡು ಮಾತನಾಡಿದ್ದು, ಅಭಿಮಾನಿ ದೀಪಕ್ ಕಣ್ಣಲ್ಲಿ ಸಂತೋಷದ ಕಣ್ಣೀರು ತರಿಸಿತು.

ಇದಷ್ಟೇ ಅಲ್ಲ, ದೀಪಕ್‌ನ ಪರಿಶ್ರಮ ಮತ್ತು ಅಭಿಮಾನವನ್ನು ಗೌರವಿಸಿದ ಹಾರ್ದಿಕ್ ಪಾಂಡ್ಯ ಅವರು ₹1.5 ಲಕ್ಷ ಆರ್ಥಿಕ ಸಹಾಯ, ತಮ್ಮ ಸಹಿಯಿರುವ ಟೀಮ್ ಇಂಡಿಯಾ ಜರ್ಸಿ ಹಾಗೂ Virat Kohli ಅವರಿಗೆ ಸಂಬಂಧಿಸಿದ ಬ್ರಾಂಡ್‌ನ ಹೊಸ ಶೂಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ. ಜೊತೆಗೆ ದೀಪಕ್ ಸುರಕ್ಷಿತವಾಗಿ ಮನೆಗೆ ಹಿಂತಿರುಗಲು ರೈಲು ಟಿಕೇಟ್‌ ಕೋಡಾ ಮಾಡಿಕೊಟ್ಟಿದ್ದಾರೆ.

ಈ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, "ಮೈದಾನದಲ್ಲಿ ಆಕ್ರಮಣಕಾರಿ ಆಟಗಾರ, ಆದರೆ ಅಭಿಮಾನಿಗಳ ವಿಷಯದಲ್ಲಿ ಚಿನ್ನದ ಹೃದಯದ ವ್ಯಕ್ತಿ" ಎಂದು ಹಾರ್ದಿಕ್ ಪಾಂಡ್ಯ ಅವರನ್ನು ನೆಟ್ಟಿಗರು ಹೊಗಳುತ್ತಿದ್ದಾರೆ. ದೀಪಕ್‌ನ ಕನಸು ನನಸಾದ ಈ ಘಟನೆ ಕ್ರಿಕೆಟ್ ಅಭಿಮಾನಿಗಳಿಗೆ ಸ್ಪೂರ್ತಿದಾಯಕ ಕಥೆಯಾಗಿ ಹೊರಹೊಮ್ಮಿದೆ.

ಹಾರ್ದಿಕ್ ಪಾಂಡ್ಯ 2015 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. 2016ರಲ್ಲಿ ಅವರು ಭಾರತೀಯ ತಂಡಕ್ಕಾಗಿ ಟಿ 20 ಮತ್ತು ಏಕದಿನ ಪಂದ್ಯಗಳನ್ನು ಆಡಲು ಸಾಧ್ಯವಾಯಿತು. ನಂತರ ಅವರು 2017 ರಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು. ಫಿಟ್ನೆಸ್ ಸಮಸ್ಯೆಗಳಿಂದಾಗಿ ಆಲ್‌ರೌಂಡರ್ ದೀರ್ಘಕಾಲದವರೆಗೆ ಟೆಸ್ಟ್‌ ಮ್ಯಾಚ್‌ ಆಡದಿದ್ದರೂ, ಒನ್‌ ಡೇ ಮತ್ತು ಟಿ20 ಯಲ್ಲಿ ಉತ್ತಮ ಪ್ರದರ್ಶನ ನೀಡುವುದನ್ನು ಮುಂದುವರೆಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Viabhav Sooryavanashi: ವೈಭವ್‌ಗಿಂತ ಜಾಸ್ತಿ‌ ಈ ಸ್ಟಾರ್ ಕ್ರಿಕೆಟರ್‌ಗೆ ಆಯ್ತಾ ಅನ್ಯಾಯ? ಉತ್ತರಿಸ್ತಾರಾ ಗಂಭೀರ್ ?
ಪೋರ್ಚುಗಲ್‌ ಕ್ರಿಕೆಟ್‌ ಟೀಮ್‌ ಸೇರಿದ RCB ಮಾಜಿ ಆಲ್ರೌಂಡರ್‌, ಹೊಸ ಇನ್ನಿಂಗ್ಸ್‌ಗೆ ರೆಡಿ