ಮೈದಾನದಲ್ಲೇ ಕೆನ್ನೆಗೆ ಬಾರಿಸಿದ ಭಜ್ಜಿ: ಶ್ರೀಶಾಂತ್ ಮಗಳ ಮಾತು ಕೇಳಿ ಹರ್ಭಜನ್ ಸಿಂಗ್ ತಬ್ಬಿಬ್ಬು!

Published : Jul 21, 2025, 02:30 PM IST
harbhajan singh

ಸಾರಾಂಶ

ಶ್ರೀಶಾಂತ್ ಜೊತೆಗಿನ ಘಟನೆಯ ಬಗ್ಗೆ ಹರ್ಭಜನ್ ಸಿಂಗ್ ತಮ್ಮ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿದ್ದಾರೆ. ಶ್ರೀಶಾಂತ್ ಮಗಳ ಮಾತುಗಳು ತಮ್ಮನ್ನು ತೀವ್ರವಾಗಿ ಕಾಡಿದೆ ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ. ಈ ಘಟನೆಯನ್ನು ಬದಲಾಯಿಸಲು ಸಾಧ್ಯವಾದರೆ ತಾವು ಅದನ್ನು ಮಾಡುತ್ತಿದ್ದೆ ಎಂದು ಹೇಳಿದ್ದಾರೆ.

ಬೆಂಗಳೂರು: ಹರ್ಭಜನ್ ಸಿಂಗ್ ಭಾರತ ಕಂಡ ಅತ್ಯುತ್ತಮ ಆಫ್‌ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಇನ್ನು ಕೇರಳ ಮೂಲದ ವೇಗಿ ಎಸ್ ಶ್ರೀಶಾಂತ್ ತಮ್ಮ ಆಕ್ರಮಣಕಾರಿ ಮನೋಭಾವದ ಮೂಲಕವೇ ಎದುರಾಳಿ ಬ್ಯಾಟರ್‌ಗಳಲ್ಲಿ ನಡುಕ ಹುಟ್ಟಿಸಿದ ಆಟಗಾರರಾಗಿದ್ದರು. ಈ ಇಬ್ಬರು 2008ರ ಐಪಿಎಲ್ ಟೂರ್ನಿಯ ವೇಳೆ ಒಂದು ಕಪಾಳಮೋಕ್ಷ ಪ್ರಕರಣದಲ್ಲಿ ಹೆಚ್ಚು ಸುದ್ದಿಯಾಗಿದ್ದರು. 

2008ರ ಐಪಿಎಲ್ ಟೂರ್ನಿಯ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್‌ ಇಲೆವನ್ ಪಂಜಾಬ್(ಈಗ ಪಂಜಾಬ್) ನಡುವಿನ ಪಂದ್ಯದ ವೇಳೆಯಲ್ಲಿ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್, ವೇಗಿ ಶ್ರೀಶಾಂತ್ ಕೆನ್ನೆಗೆ ಬಾರಿಸಿದ್ದರು. ಈ ಘಟನೆ ನಡೆದ ಬರೋಬ್ಬರಿ 18 ವರ್ಷಗಳೇ ಕಳೆದಿವೆ. ಈ ಘಟನೆಯ ಕುರಿತಂತೆ ಹರ್ಭಜನ್ ಸಿಂಗ್ 200ಕ್ಕೂ ಹೆಚ್ಚು ಬಾರಿ ಕೇರಳ ವೇಗಿಗೆ ಕ್ಷಮೆಯನ್ನೂ ಯಾಚಿಸಿದ್ದಾರೆ. ಇದರ ಹೊರತಾಗಿಯೂ ಇಂದಿಗೂ ತಮಗೆ ಈ ಘಟನೆಯ ಕುರಿತಂತೆ ಪಾಪ ಪ್ರಜ್ಞೆ ಕಾಡುತ್ತಿದೆ ಎಂದು ಹರ್ಭಜನ್ ಸಿಂಗ್, ರವಿಚಂದ್ರನ್ ಅಶ್ವಿನ್ ಜತೆಗಿನ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದಾರೆ. ಅದರಲ್ಲೂ ಶ್ರೀಶಾಂತ್ ಮಗಳ ಭೇಟಿಯಾದ ಬಳಿಕ ಆಕೆ ಆಡಿದ ಮಾತುಗಳನ್ನು ಕೇಳಿ ತಾವು ತಬ್ಬಿಬ್ಬಾಗಿರುವುದಾಗಿ ಹರ್ಭಜನ್ ಸಿಂಗ್ ಹೇಳಿದ್ದಾರೆ.

18 ವರ್ಷಗಳು ಕಳೆದರೂ ಪಾಪ ಪ್ರಜ್ಞೆಗೆ ಪರಿಹಾರ ಸಿಕ್ಕಿಲ್ಲ!

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಅವರು ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ರವಿಚಂದ್ರನ್ ಅಶ್ವಿನ್ ಜತೆ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಕುಟ್ಟಿ ಸ್ಟೋರಿಸ್ ಷೋನಲ್ಲಿ ಅಶ್ವಿನ್, ಭಜ್ಜಿಗೆ ನೀವು ನಿಮ್ಮ ಜೀವನದಲ್ಲಿ ಯಾವ ಒಂದು ಘಟನೆಯನ್ನು ಬದಲಾಯಿಸಲು ಬಯಸುತ್ತೀರಾ ಎಂದು ಕೇಳುತ್ತಾರೆ. ಆಗ ಹರ್ಭಜನ್ ಸಿಂಗ್, ನನ್ನ ಜೀವನದಲ್ಲಿ ನಡೆದ ಒಂದು ಘಟನೆಯನ್ನು ಬದಲಾಯಿಸಲು ಸಾಧ್ಯವಿದ್ದರೇ, ಅದು ಶ್ರೀಶಾಂತ್ ಜತೆಗಿನ ಜತೆಗೆ ನಡೆದ ಘಟನೆಯನ್ನು ಬದಲಾಯಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಈ ಘಟನೆಯಾದ ಬಳಿಕ ನಾನು ಆಲೋಚಿಸುವ ರೀತಿಯೇ ಬದಲಾಗಿ ಹೋಯಿತು. ನಾನು ಆಗ ಮಾಡಿದ್ದು ತಪ್ಪು, ನಾನು ಹಾಗೆ ಮಾಡಬಾರದಿತ್ತು. ನಾನು 200 ಸಲ ಕ್ಷಮೆ ಕೇಳಿದ್ದೇನೆ. ಈ ಘಟನೆ ನಡೆದು ಎಷ್ಟೋ ವರ್ಷಗಳು ಕಳೆದಿವೆ. ಈಗಲೂ ಹಲವು ವೇದಿಕೆಗಳಲ್ಲಿ ಕ್ಷಮೆ ಕೇಳುತ್ತಲೇ ಇದ್ದೇನೆ ಎಂದು ಭಜ್ಜಿ ಹೇಳಿದ್ದಾರೆ.

 

ಶ್ರೀಶಾಂತ್ ಮಗಳ ಜತೆಗಿನ ಮುಖಾಮುಖಿಯನ್ನು ಮೆಲುಕು ಹಾಕಿದ ಭಜ್ಜಿ:

ಈ ಘಟನೆ ನಡೆದ ಹಲವು ವರ್ಷಗಳ ಬಳಿಕ ಒಮ್ಮೆ ಹರ್ಭಜನ್ ಸಿಂಗ್, ವೇಗಿ ಎಸ್ ಶ್ರೀಶಾಂತ್ ಮಗಳನ್ನು ಭೇಟಿಯಾದಾಗ ಆದ ಅನುಭವವನ್ನು ಮೆಲುಕು ಹಾಕಿದ್ದಾರೆ. ಆ ಘಟನೆ ನಡೆದು ಸಾಕಷ್ಟು ವರ್ಷಗಳೇ ಕಳೆದರೂ ನನ್ನ ಕಿವಿಯಲ್ಲಿ ಗುನುಗುತ್ತಲೇ ಇದೆ. ನನಗೆ ಶ್ರೀಶಾಂತ್ ಮಗಳು ಸಿಕ್ಕಾಗ ಆಕೆಯ ಜತೆ ಅತ್ಯಂತ ಪ್ರೀತಿಯಿಂದ ಮಾತನಾಡಿದೆ. ಆಗ ಆಕೆ, 'ನನಗೆ ನಿಮ್ಮ ಜತೆ ಮಾತನಾಡೋಕೆ ಇಷ್ಟವಿಲ್ಲ. ನೀವು ನಮ್ಮ ಅಪ್ಪನಿಗೆ ಹೊಡೆದಿದ್ದೀರ ಎಂದು ಹೇಳಿದಳು ಎಂದಿದ್ದಾರೆ. ಆಕೆಯ ಮಾತು ಕೇಳುತ್ತಿದ್ದಂತೆಯೇ ನನ್ನ ಹೃದಯ ಒಡೆದು ಹೋಯಿತು. ಕಣ್ಣೀರು ಧಾರಾಕಾರವಾಗಿ ಹರಿಯಿತು. ಆಕೆಯ ಮೇಲೆ ಎಂತಹ ಬೀರಿದ್ದೇನೆ ಎಂದು ಮನಸು ಕಲುಕಿತು ಎಂದು ಆ ಘಟನೆಯನ್ನು ಭಜ್ಜಿ ಮೆಲುಕು ಹಾಕಿದ್ದಾರೆ.

ಈ ಘಟನೆಯನ್ನು ಮೆಲುಕುಹಾಕುತ್ತಿದ್ದಂತೆಯೇ ಹರ್ಭಜನ್ ಸಿಂಗ್ ಮತ್ತಷ್ಟು ಭಾವುಕರಾದರು. ಬಳಿಕ, ಆಕೆ ಯಾವತ್ತಿಗೂ ನನ್ನನ್ನೂ ಅದೇ ಕೆಟ್ಟ ಭಾವನೆಯಿಂದಲೇ ನೋಡುತ್ತಾಳೆ ಅಲ್ಲವೇ? ನಾನು ಆಕೆಗೆ ಯಾವತ್ತಿಗೂ ಅವರ ಅಪ್ಪನಿಗೆ ಹೊಡೆದವ ಎಂದೇ ನೆನಪಿಟ್ಟುಕೊಳ್ಳುತ್ತಾಳೆ. ನಾನು ಈಗಲೂ ಅವರ ಮಗಳ ಬಳಿಯೂ ಕ್ಷಮೆ ಕೇಳುತ್ತಿದ್ದೇನೆ. ಆಕೆ ದೊಡ್ಡವಳಾದ ಮೇಲೆ ನನ್ನ ಮೇಲಿನ ಅಭಿಪ್ರಾಯ ಬದಲಾಯಿಸಿಕೊಳ್ಳಬಹುದು. ಈ ಕಾರಣಕ್ಕಾಗಿಯೇ ಶ್ರೀಶಾಂತ್ ಜತೆಗಿನ ಆ ಒಂದು ಘಟನೆಯನ್ನು ನನ್ನ ಜೀವನದಲ್ಲಿ ಬದಲಿಸಲು ಬಯಸುವುದಾಗಿ ಹೇಳಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ