ಧೋನಿ ಫ್ಯಾನ್ಸ್‌ ಮಾತ್ರ ನಿಜವಾದವರು, ಉಳಿದವರು?: ಆರ್‌ಸಿಬಿ-ಸಿಎಸ್‌ಕೆ ಫ್ಯಾನ್ಸ್‌ ನಡುವೆ ಬೆಂಕಿ ಹಚ್ಚಿದ ಭಜ್ಜಿ!

Published : May 19, 2025, 11:59 AM IST
ಧೋನಿ ಫ್ಯಾನ್ಸ್‌ ಮಾತ್ರ ನಿಜವಾದವರು, ಉಳಿದವರು?: ಆರ್‌ಸಿಬಿ-ಸಿಎಸ್‌ಕೆ ಫ್ಯಾನ್ಸ್‌ ನಡುವೆ ಬೆಂಕಿ ಹಚ್ಚಿದ ಭಜ್ಜಿ!

ಸಾರಾಂಶ

ಹರ್ಭಜನ್ ಸಿಂಗ್, "ಧೋನಿ ಅಭಿಮಾನಿಗಳೇ ನಿಜವಾದವರು, ಉಳಿದವರು ಪೇಡ್ ಫ್ಯಾನ್ಸ್" ಎಂಬ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ವಿರಾಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರೆ, ಧೋನಿ ಅಭಿಮಾನಿಗಳು ಭಜ್ಜಿಗೆ ಬೆಂಬಲ ಸೂಚಿಸಿದ್ದಾರೆ. ಈ 'ಫ್ಯಾನ್ ಕ್ಲ್ಯಾಶ್' ಕ್ರಿಕೆಟ್ ಸಂಸ್ಕೃತಿಗೆ ಹಾನಿಕರ ಎಂಬ ಆತಂಕ ವ್ಯಕ್ತವಾಗಿದೆ.

ಬೆಂಗಳೂರು: ಕ್ರಿಕೆಟ್ ಲೋಕದಲ್ಲಿ ಸೆಲಿಬ್ರಿಟಿಗಳ ಆಟಗಾರರ ಫ್ಯಾನ್ಸ್‌ ನಡುವೆ ಗೊಂದಲಗಳು ಸಾಮಾನ್ಯ. ಆದರೆ, ಭಾರತ ತಂಡದ ಮಾಜಿ ಆಫ್‌ ಸ್ಪಿನ್ನರ್ ಹರ್ಭಜನ್‌ ಸಿಂಗ್ ಕೊಟ್ಟ ವಿವಾದಾತ್ಮಕ ಹೇಳಿಕೆ ಇದೀಗ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. "ಕ್ರಿಕೆಟ್‌ನಲ್ಲಿ ಧೋನಿ ಅಭಿಮಾನಿಗಳೇ ನಿಜವಾದ ಅಭಿಮಾನಿಗಳು, ಉಳಿದ ಎಲ್ಲಾ ಪೇಡ್ ಫ್ಯಾನ್ಸ್" ಎಂಬಂತಹ ಹೇಳಿಕೆಯಿಂದ ಭಜ್ಜಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಇನ್ನು ಇದು ಮಹೇಂದ್ರ ಸಿಂಗ್ ಧೋನಿ ಫ್ಯಾನ್ಸ್‌ ಹಾಗೂ ವಿರಾಟ್ ಕೊಹ್ಲಿ ಫ್ಯಾನ್ಸ್ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆ-ಟಿಪ್ಪಣಿಗಳಿಗೆ ಸಾಕ್ಷಿಯಾಗುತ್ತಿದೆ.‌

ಟೀಂ ಇಂಡಿಯಾ ಮಾಜಿ ಆಫ್‌ಸ್ಪಿನ್ನರ್ ಹರ್ಭಜನ್ ಸಿಂಗ್ ಸಂದರ್ಶನವೊಂದರಲ್ಲಿ ಹೇಳಿದ ಮಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಹೇಳಿಕೆಯು ವಿಶೇಷವಾಗಿ ವಿರಾಟ್ ಕೊಹ್ಲಿ ಅಭಿಮಾನಿಗಳ ಕಣ್ಣು ಕೆಂಪಾಗಿಸಿದೆ. ಹಲವರು ಈ ಮಾತು ನೇರವಾಗಿ ವಿರಾಟ್ ಕೊಹ್ಲಿಗೆ ಅಥವಾ ಅವರ ಫ್ಯಾನ್ಸ್‌ಗೆ ಅವಮಾನವಾಗಿದೆ ಎಂದು ಬಣ್ಣಿಸಿದ್ದಾರೆ.

ವಿರಾಟ್ ಅಭಿಮಾನಿಗಳ ಆಕ್ರೋಶ:
ಈ ಹೇಳಿಕೆಗೆ ವಿರಾಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. "ಹರ್ಭಜನ್‌ ಸಿಂಗ್ ಅವರಿಗೆ ಧೋನಿ ಮೇಲಿರುವ ಅಭಿಮಾನ ಅರ್ಥವಾಗುತ್ತೆ, ಆದರೆ ಅದಕ್ಕಾಗಿ ಇತರ ಆಟಗಾರರ ಅಭಿಮಾನಿಗಳನ್ನು ನಿಂದಿಸುವುದು ಸರಿಯಲ್ಲ," ಎಂದು ಹಲವರು ಟ್ವೀಟ್ ಮಾಡಿದ್ದಾರೆ.

ಕೆಲವರು ಹಳೆಯ ದಿನಗಳನ್ನು ನೆನೆಸಿಕೊಂಡು, ಭಾರತ ಕ್ರಿಕೆಟ್‌ಗೆ ಕೊಹ್ಲಿ ತಂದುಕೊಟ್ಟ ವೈಭವ, ಫಿಟ್ನೆಸ್ ಸಂಸ್ಕೃತಿ, ಮತ್ತಿತರ ಕೊಡುಗೆಗಳನ್ನು ಹರ್ಭಜನ್ ಸಿಂಗ್ ಅವರಿಗೆ ನೆನಪಿಸಿದ್ದಾರೆ. ಕೆಲವರು ಇಲ್ಲಿಯವರೆಗೆ ಕೊಹ್ಲಿ ಮಾಡಿದ ದಾಖಲೆಗಳನ್ನು ಪಟ್ಟಿ ಮಾಡಿಕೊಂಡು ಹರ್ಭಜನ್ ಸಿಂಗ್ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಭಜ್ಜಿ ಬೆನ್ನಿಗೆ ನಿಂತ ಧೋನಿ ಅಭಿಮಾನಿಗಳು:
ಇದೇ ವೇಳೆ ಧೋನಿ ಅಭಿಮಾನಿಗಳು ಹರ್ಭಜನ್ ಸಿಂಗ್ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. "ಧೋನಿಯ ಧೈರ್ಯ, ಕೂಲ್ ಸ್ವಭಾವ ಹಾಗೂ ನಾಯಕತ್ವವೇ ನಿಜವಾದ ಅಭಿಮಾನಿಗಳ ಪ್ರೇರಣೆ" ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಅವರ ಪ್ರಕಾರ, ಧೋನಿ ಮಾತ್ರವೇ ಎಲ್ಲಾ ಮಿತಿಗಳನ್ನು ಮೀರಿ, ನಿಸ್ವಾರ್ಥ ನಾಯಕತ್ವ ತೋರಿದ ಆಟಗಾರ.

ಹೆಚ್ಚುತ್ತಿರುವ 'ಫ್ಯಾನ್ಸ್‌ ಕ್ಲ್ಯಾಶ್':
ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ‘ಫ್ಯಾನ್ ಕ್ಲ್ಯಾಶ್’ ಅಂದರೆ ಅಭಿಮಾನಿಗಳ ನಡುವೆ ತೀವ್ರ ವಾಗ್ಯುದ್ಧ, ಭಾರತ ಕ್ರಿಕೆಟ್ ಸಂಸ್ಕೃತಿಗೆ ಹಾನಿಕರವಾಗಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಅಂತಹ ಹೇಳಿಕೆಗಳು ಆಟಗಾರರ ನಡುವಿನ ಗೌರವಕ್ಕೆ ಧಕ್ಕೆ ತರಬಹುದು ಎಂದು ಕೆಲವರು ಎಚ್ಚರಿಕೆ ನೀಡಿದ್ದಾರೆ.

ಕ್ರಿಕೆಟ್ ಎಂಬುದು ಕೇವಲ ಆಟವಲ್ಲ, ಅದು ಭಾವನೆಗಳ ಜಗತ್ತು. ಯಾವುದೇ ಆಟಗಾರನನ್ನು ಆರಾಧಿಸುವುದು ಅಭಿಮಾನಿಗಳ ಹಕ್ಕು. ಆದರೆ, ಉಳಿದವರನ್ನು ವ್ಯಕ್ತಿಗೌರವನ್ನು ತಗ್ಗಿಸುವ ರೀತಿಯ ಮಾತುಗಳು ಕ್ರಿಕೆಟ್‌ ಲೋಕದ ಸೌಹಾರ್ದತೆಗೆ ಆಪತ್ತಾಗಬಹುದು. ಹರ್ಭಜನ್ ಸಿಂಗ್ ನೀಡಿದ ಹೇಳಿಕೆಯ ಪರಿಣಾಮ ಏನು ಎಂಬುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆ.  

ಚೆನ್ನೈ ಸೂಪರ್ ಕಿಂಗ್ಸ್‌ ಲೀಗ್‌ನಲ್ಲೇ ಔಟ್, ಐಪಿಎಲ್‌ ಪ್ಲೇ ಆಫ್‌ಗೇರಿದ ಆರ್‌ಸಿಬಿ
ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ಬದ್ದ ಎದುರಾಳಿಗಳಾಗಿ ಗುರುತಿಸಿಕೊಂಡಿವೆ. ಮಹೇಂದ್ರ ಸಿಂಗ್ ಧೋನಿ ನೇತೃತ್ವದ 5 ಬಾರಿಯ ಐಪಿಎಲ್ ಚಾಂಪಿಯನ್‌ ಸಿಎಸ್‌ಕೆ ತಂಡವು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮೊದಲ ತಂಡವಾಗಿ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿದೆ. ಇನ್ನೊಂದೆಡೆ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲೀಗ್‌ನಲ್ಲಿ ಎರಡು ಮ್ಯಾಚ್ ಬಾಕಿ ಇರುವಂತೆಯೇ ಸತತ ಎರಡನೇ ಬಾರಿಗೆ ಪ್ಲೇ ಆಫ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ.  

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ