
ಮುಂಬೈ: ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ ಏಕದಿನ ಪಂದ್ಯಗಳಲ್ಲಿ ಮುಂದುವರಿಯುವ ವಿರಾಟ್ ಕೊಹ್ಲಿ ನಿರ್ಧಾರವನ್ನು ಪ್ರಶ್ನಿಸಿದ್ದ ಸಂಜಯ್ ಮಂಜ್ರೇಕರ್‌ಗೆ ಮಾಜಿ ಭಾರತೀಯ ಸ್ಪಿನ್ನರ್ ಹರ್ಭಜನ್ ಸಿಂಗ್ ತಿರುಗೇಟು ನೀಡಿದ್ದಾರೆ. ಟಾಪ್ ಆರ್ಡರ್ ಬ್ಯಾಟರ್‌ಗಳಿಗೆ ಏಕದಿನ ಅತ್ಯಂತ ಸುಲಭವಾದ ಫಾರ್ಮ್ಯಾಟ್ ಎಂದು ಕೊಹ್ಲಿ ಆಯ್ಕೆ ಮಾಡಿದ್ದಾರೆ ಎಂದು ಮಂಜ್ರೇಕರ್ ಇತ್ತೀಚೆಗೆ ಹೇಳಿದ್ದರು.
ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ಮಂಜ್ರೇಕರ್, 'ವಿರಾಟ್ ಕೊಹ್ಲಿ ಕ್ರಿಕೆಟ್‌ನಿಂದ ದೂರ ಸರಿದು ಎಲ್ಲಾ ಫಾರ್ಮ್ಯಾಟ್‌ಗಳಿಂದ ನಿವೃತ್ತಿಯಾಗಿದ್ದರೆ, ಪರವಾಗಿರಲಿಲ್ಲ. ಆದರೆ ಅವರು ಏಕದಿನ ಕ್ರಿಕೆಟ್ ಆಡಲು ಆಯ್ಕೆ ಮಾಡಿಕೊಂಡಿದ್ದು ನನಗೆ ಹೆಚ್ಚು ನಿರಾಸೆ ತಂದಿದೆ. ಯಾಕಂದ್ರೆ ಇದು ಟಾಪ್ ಆರ್ಡರ್ ಬ್ಯಾಟರ್‌ಗಳಿಗೆ ಅತ್ಯಂತ ಸುಲಭವಾದ ಫಾರ್ಮ್ಯಾಟ್ ಇದು ಎಂದು ನಾನು ಮೊದಲೇ ಹೇಳಿದ್ದೇನೆ. ನಿಮ್ಮನ್ನು ನಿಜವಾಗಿಯೂ ಪರೀಕ್ಷಿಸುವ ಫಾರ್ಮ್ಯಾಟ್ ಟೆಸ್ಟ್ ಕ್ರಿಕೆಟ್. ಟಿ20 ಕ್ರಿಕೆಟ್‌ಗೆ ತನ್ನದೇ ಆದ ಸವಾಲುಗಳಿವೆ,'' ಎಂದು ಮಂಜ್ರೇಕರ್ ಹೇಳಿದ್ದರು
ಆದರೆ ಹರ್ಭಜನ್ ಇದಕ್ಕೆ ಪ್ರತ್ಯುತ್ತರ ನೀಡಿದ್ದಾರೆ. ಫಾರ್ಮ್ಯಾಟ್ ಆಯ್ಕೆಗಳಿಗಿಂತ ಪ್ರದರ್ಶನದ ಮೇಲೆ ಗಮನಹರಿಸಬೇಕು ಎಂದು ಮಾಜಿ ಆಫ್ ಸ್ಪಿನ್ನರ್ ಸ್ಪಷ್ಟಪಡಿಸಿದ್ದಾರೆ. 'ಯಾವುದೇ ಫಾರ್ಮ್ಯಾಟ್‌ನಲ್ಲಿ ರನ್ ಗಳಿಸುವುದು ತುಂಬಾ ಸುಲಭವಾಗಿದ್ದರೆ, ಎಲ್ಲರೂ ಅದನ್ನು ಮಾಡುತ್ತಿದ್ದರು. ಆಟಗಾರರು ಏನು ಮಾಡುತ್ತಾರೋ ಅದನ್ನು ನಾವು ಆನಂದಿಸೋಣ. ಅವರು ಚೆನ್ನಾಗಿ ಆಡುತ್ತಾರೆ, ಪಂದ್ಯಗಳನ್ನು ಗೆಲ್ಲಿಸುತ್ತಾರೆ, ರನ್ ಗಳಿಸುತ್ತಾರೆ, ವಿಕೆಟ್ ಪಡೆಯುತ್ತಾರೆ. ಅಷ್ಟೇ ಮುಖ್ಯ. ಯಾರು ಯಾವ ಫಾರ್ಮ್ಯಾಟ್‌ನಲ್ಲಿ ಆಡುತ್ತಾರೆ ಎಂಬುದು ಮುಖ್ಯವಲ್ಲ. ವಿರಾಟ್, ಒಂದು ಫಾರ್ಮ್ಯಾಟ್‌ನಲ್ಲಿ ಆಡಲಿ ಅಥವಾ ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ಆಡಲಿ, ಅವರು ಭಾರತದ ಶ್ರೇಷ್ಠ ಆಟಗಾರ ಮತ್ತು ಮ್ಯಾಚ್ ವಿನ್ನರ್,'' ಎಂದು ಹರ್ಭಜನ್ ಸ್ಪಷ್ಟಪಡಿಸಿದ್ದಾರೆ.
ಕಳೆದ ವರ್ಷ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಅಂದಿನಿಂದ, ಅವರು ಏಕದಿನ ಪಂದ್ಯಗಳ ಮೇಲೆ ಮಾತ್ರ ಗಮನ ಹರಿಸಿದ್ದಾರೆ. 2027ರ ಏಕದಿನ ವಿಶ್ವಕಪ್‌ವರೆಗೆ ಭಾರತವನ್ನು ಪ್ರತಿನಿಧಿಸುವ ಬಯಕೆಯನ್ನು ಕೊಹ್ಲಿ ವ್ಯಕ್ತಪಡಿಸಿದ್ದರು. 'ವಿರಾಟ್ ಅದ್ಭುತ ಆಟಗಾರ. ಇಂದಿಗೂ ಅವರು ಟೆಸ್ಟ್ ಕ್ರಿಕೆಟ್ ಆಡಿದರೆ, ಅವರೇ ನಮ್ಮ ಪ್ರಮುಖ ಆಟಗಾರರಾಗಿರುತ್ತಾರೆ,' ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಸದ್ಯ ರೆಡ್ ಹಾಟ್ ಫಾರ್ಮ್‌ನಲ್ಲಿದ್ದಾರೆ. ಕಳೆದ ಆರು ಏಕದಿನ ಪಂದ್ಯಗಳ ಪೈಕಿ ವಿರಾಟ್ ಕೊಹ್ಲಿ ಎರಡು ಶತಕ ಹಾಗೂ ಮೂರು ಅರ್ಧಶತಕ ಸಿಡಿಸಿ ಮಿಂಚಿದ್ದರು. 2027ರ ಏಕದಿನ ವಿಶ್ವಕಪ್ ಟೂರ್ನಿ ಮೇಲೆ ಕಣ್ಣಿಟ್ಟಿರುವ ವಿರಾಟ್ ಕೊಹ್ಲಿ, ಕಿವೀಸ್ ಎದುರಿನ ಸರಣಿಯಲ್ಲೂ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.