Virat Kohli: ಆಸ್ಟ್ರೇಲಿಯಾ ಸರಣಿಗೆ ಸಜ್ಜಾದ ಟೀಂ ಇಂಡಿಯಾ; ಕೊಹ್ಲಿ ಬಗ್ಗೆ ಭಜ್ಜಿ ಅಚ್ಚರಿ ಭವಿಷ್ಯ!

Published : Oct 14, 2025, 01:30 PM IST
Harbhajan Singh

ಸಾರಾಂಶ

ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿಗೂ ಮುನ್ನ, ಮಾಜಿ ಆಟಗಾರ ಹರ್ಭಜನ್ ಸಿಂಗ್ ಅವರು ವಿರಾಟ್ ಕೊಹ್ಲಿ ಬಗ್ಗೆ ಭರ್ಜರಿ ಭವಿಷ್ಯ ನುಡಿದಿದ್ದಾರೆ. ಕೊಹ್ಲಿಯ ಫಿಟ್ನೆಸ್ ಅನ್ನು ಶ್ಲಾಘಿಸಿರುವ ಅವರು, ಆಸ್ಟ್ರೇಲಿಯಾ ನೆಲದಲ್ಲಿ ಕೊಹ್ಲಿ ಕನಿಷ್ಠ ಎರಡು ಶತಕಗಳನ್ನು ಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚಂಡೀಗಢ: ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ ಈ ತಿಂಗಳ 19ಕ್ಕೆ ಶುರುವಾಗಲಿದ್ದು, ಭಾರತದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಬಗ್ಗೆ ಮಾಜಿ ಆಟಗಾರ ಹರ್ಭಜನ್ ಸಿಂಗ್ ಭರ್ಜರಿ ಭವಿಷ್ಯ ನುಡಿದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕೊಹ್ಲಿ ಕನಿಷ್ಠ ಎರಡು ಶತಕ ಗಳಿಸುತ್ತಾರೆ ಎಂದು ಹರ್ಭಜನ್ ಹೇಳಿದ್ದಾರೆ.

ಫಿಟ್ನೆಸ್ ವಿಚಾರದಲ್ಲಿ ಕೊಹ್ಲಿ ಕಿಂಗ್

ದಯವಿಟ್ಟು ಯಾರೂ ವಿರಾಟ್ ಕೊಹ್ಲಿ ಫಿಟ್ನೆಸ್ ಬಗ್ಗೆ ಕೇಳಬೇಡಿ, ಯಾಕಂದ್ರೆ ಫಿಟ್ನೆಸ್ ವಿಚಾರದಲ್ಲಿ ಅವನೇ ಗುರು. ಅವನು ಮಾಡೋದನ್ನೇ ಬೇರೆಯವರೆಲ್ಲಾ ಫಾಲೋ ಮಾಡೋದು. ಹಾಗಾಗಿ ಕೊಹ್ಲಿ ಫಿಟ್ನೆಸ್ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಕಿಲ್ಲ. ಈಗ ತಂಡದಲ್ಲಿರುವ ಬೇರೆ ಆಟಗಾರರಿಗಿಂತ ಕೊಹ್ಲಿ ಹೆಚ್ಚು ಫಿಟ್ ಆಗಿದ್ದಾರೆ. ಸದ್ಯ ಅಂತರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವ ಆಟಗಾರರಲ್ಲಿ ಅತ್ಯಂತ ಫಿಟ್ ಆಟಗಾರ ಎನ್ನಬಹುದು. ಹಾಗಾಗಿ ವಿರಾಟ್ ಕೊಹ್ಲಿ ವಾಪಸಾತಿಗೆ ಕಾಯುತ್ತಿದ್ದೇನೆ ಎಂದು ಹರ್ಭಜನ್ ಜಿಯೋ ಹಾಟ್‌ಸ್ಟಾರ್‌ನಲ್ಲಿ ಹೇಳಿದ್ದಾರೆ.

ಫ್ಯಾನ್ಸ್ ಕೂಡ ಕೊಹ್ಲಿಯನ್ನು ಮತ್ತೆ ಇಂಡಿಯನ್ ಜೆರ್ಸಿಯಲ್ಲಿ ನೋಡೋಕೆ ಕಾಯ್ತಿದ್ದಾರೆ. ಅದರಲ್ಲೂ ಕೊಹ್ಲಿಯ ಫೇವರಿಟ್ ಏಕದಿನ ಫಾರ್ಮ್ಯಾಟ್‌ನಲ್ಲಿ. ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ಮಾಡಬೇಕಿರೋದು ಇನ್ನೂ ಸಾಕಷ್ಟಿದೆ. ಟೆಸ್ಟ್ ಕ್ರಿಕೆಟ್‌ನಿಂದ ಕೊಹ್ಲಿ ನಿವೃತ್ತಿ ಘೋಷಿಸಿದಾಗಲೂ, ಇನ್ನೂ ನಾಲ್ಕೈದು ವರ್ಷ ಆಡಬಹುದಿತ್ತು ಅಂತ ನನಗನಿಸಿತ್ತು. ಸುಮ್ನೆ ಆಡೋದಲ್ಲ, ಎದುರಾಳಿಗಳ ಮೇಲೆ ಪೂರ್ತಿ ಹಿಡಿತ ಸಾಧಿಸಿ ಆಡೋ ತಾಕತ್ತು ಅವನಿಗಿದೆ. ಈಗ ಅವನು ಹೋಗ್ತಿರೋದು ಅವನ ಫೇವರಿಟ್ ಜಾಗ ಆಸ್ಟ್ರೇಲಿಯಾಗೆ ಎಂದು ಭಜ್ಜಿ ಹೇಳಿದ್ದಾರೆ.

ಕಾಂಗರೂ ನಾಡಿನಲ್ಲಿ ಕೊಹ್ಲಿ ಮತ್ತೆ ಏನಾದ್ರೂ ಪ್ರೂವ್ ಮಾಡ್ತಾನೆ ಅನ್ಕೊಂಡಿದ್ದೀನಿ. ಆಸ್ಟ್ರೇಲಿಯಾದಲ್ಲಿ ಅವನು ಟನ್‌ಗಟ್ಟಲೆ ರನ್ ಹೊಡೆಯೋದನ್ನ ನಾವು ನೋಡಿದ್ದೀವಿ. ಆಸ್ಟ್ರೇಲಿಯಾದಲ್ಲಿ ಕೊಹ್ಲಿ ಕನಿಷ್ಠ ಎರಡು ಸೆಂಚುರಿ ಹೊಡೆಯೋದು ಗ್ಯಾರಂಟಿ. ಯಾಕಂದ್ರೆ, ಕಷ್ಟದ ಪರಿಸ್ಥಿತಿಯಲ್ಲೇ ಕೆಲವು ಆಟಗಾರರು ತಮ್ಮ ಬೆಸ್ಟ್ ಆಟ ಆಡೋದು. ಕೊಹ್ಲಿ ಆ ತರದ ಆಟಗಾರ, ದೊಡ್ಡ ಸ್ಟೇಜ್‌ಗಳಲ್ಲಿ, ಪ್ರೆಶರ್ ಟೈಮ್‌ನಲ್ಲಿ ಮಿಂಚೋಕೆ ಕೊಹ್ಲಿಗೆ ಸ್ಪೆಷಲ್ ಟ್ಯಾಲೆಂಟ್ ಇದೆ ಅಂತ ಹರ್ಭಜನ್ ಹೇಳಿದ್ದಾರೆ. ಜಗತ್ತಿನ ಬೆಸ್ಟ್ ಆಟಗಾರರ ವಿರುದ್ಧ ಚೆನ್ನಾಗಿ ಆಡಿದಾಗ ನಿಮಗೆ ಗೌರವ ಸಿಗುತ್ತೆ. ಹಾಗೇನೇ ಕೊಹ್ಲಿ ಗೌರವ ಗಳಿಸಿದ್ದು. ಆಸ್ಟ್ರೇಲಿಯಾ ಅವನ ಫೇವರಿಟ್ ಜಾಗ. ಮತ್ತೆ ಇಂಡಿಯನ್ ಜೆರ್ಸಿ ಹಾಕಿದಾಗ ಅವನು ಚೆನ್ನಾಗಿ ಆಡೋದ್ರಲ್ಲಿ ಡೌಟೇ ಇಲ್ಲ ಅಂತ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ತಂಡವು ಈ ತಿಂಗಳಾಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಆಸೀಸ್ ಎದುರು ಅಕ್ಟೋಬರ್ 19, 23 ಹಾಗೂ 25ರಂದು ಕ್ರಮವಾಗಿ ಪರ್ತ್, ಅಡಿಲೇಡ್ ಹಾಗೂ ಸಿಡ್ನಿಯಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಇದೀಗ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ಗೆ ಮರಳಿದ್ದಾರೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ಈ ಇಬ್ಬರು ದಿಗ್ಗಜ ಆಟಗಾರರು ಟೀಂ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ನಿರೀಕ್ಷೆಗಳು ಜೋರಾಗಿವೆ.

ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಗೆ ಭಾರತ ತಂಡ ಹೀಗಿದೆ:

ಶುಭ್‌ಮನ್ ಗಿಲ್(ನಾಯಕ), ಶ್ರೇಯಸ್ ಅಯ್ಯರ್(ಉಪನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್(ವಿಕೆಟ್ ಕೀಪರ್,), ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಶದೀಪ್ ಸಿಂಗ್, ಪ್ರಸಿದ್ದ್ ಕೃಷ್ಣ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ