ಹಿಟ್‌ಮ್ಯಾನ್ ರೋಹಿತ್‌ಗಿಂದು 33ನೇ ಹುಟ್ಟುಹಬ್ಬದ ಸಂಭ್ರಮ; ಹರಿದುಬಂತು ಶುಭಾಶಯಗಳ ಮಹಾಪೂರ

Suvarna News   | Asianet News
Published : Apr 30, 2020, 10:57 AM IST
ಹಿಟ್‌ಮ್ಯಾನ್ ರೋಹಿತ್‌ಗಿಂದು 33ನೇ ಹುಟ್ಟುಹಬ್ಬದ ಸಂಭ್ರಮ; ಹರಿದುಬಂತು ಶುಭಾಶಯಗಳ ಮಹಾಪೂರ

ಸಾರಾಂಶ

ಆಧುನಿಕ ಕ್ರಿಕೆಟ್‌ನ ವಿದ್ವಂಸಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಇಂದು(ಏ.30) ತಮ್ಮ 33ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಹಿಟ್‌ಮ್ಯಾನ್ ಖ್ಯಾತಿಯ ಮುಂಬೈಕರ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರಲಾರಂಭಿಸಿದೆ. ಈ ಕುರಿಯಾದ ರಿಪೋರ್ಟ್ ಇಲ್ಲಿದೆ ನೋಡಿ. 

ಬೆಂಗಳೂರು(ಏ.30): ಟೀಂ ಇಂಡಿಯಾ ಸೀಮಿತ ಓವರ್‌ಗಳ ತಂಡದ ಉಪನಾಯಕ ರೋಹಿತ್ ಶರ್ಮಾ 33ನೇ ವಸಂತ(ಏಪ್ರಿಲ್ 30)ಕ್ಕಿಂದು ಕಾಲಿರಿಸಿದ್ದಾರೆ. ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರಲಾರಂಭಿಸಿದೆ.

ಏಪ್ರಿಲ್ 30, 1987ರಲ್ಲಿ ಜನಿಸಿದ ರೋಹಿತ್ ಶರ್ಮಾ 2007ರಲ್ಲಿ ಐರ್ಲೆಂಡ್ ವಿರುದ್ದ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ ಹಿಂತಿರುಗಿ ನೋಡದ ರೋಹಿತ್ ಇದೀಗ ವಿಶ್ವದ ಸ್ಫೋಟಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿದ್ದಾರೆ. ಮುಂಬೈ ಮೂಲದ ಬಲಗೈ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಭಾರತ ಪರ 32 ಟೆಸ್ಟ್, 224 ಏಕದಿನ ಹಾಗೂ 108 ಟಿ20 ಪಂದ್ಯಗಳನ್ನಾಡಿದ್ದಾರೆ. ಇನ್ನು 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬರೋಬ್ಬರಿ 5 ಶತಕ ಸಿಡಿಸುವ ಮೂಲಕ ಅಪರೂಪದ ವಿಶ್ವದಾಖಲೆ ಬರೆದಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕ ಸಿಡಿಸಿದ ಏಕೈಕ ಬ್ಯಾಟ್ಸ್‌ಮನ್ ಎನ್ನುವ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಇನ್ನುಳಿದಂತೆ ಏಕದಿನ ಕ್ರಿಕೆಟ್‌ನಲ್ಲಿ ವೈಯುಕ್ತಿಕ ಗರಿಷ್ಠ ಸ್ಕೋರ್(264) ಬಾರಿಸಿದ ಕೀರ್ತಿಗೂ ಹಿಟ್‌ಮ್ಯಾನ್ ಪಾತ್ರರಾಗಿದ್ದಾರೆ. ಇನ್ನು ಐಪಿಎಲ್‌ನಲ್ಲಿ 4 ಕಪ್ ಜಯಿಸಿದ ಏಕೈಕ ನಾಯಕ ಸೇರಿದಂತೆ ಇನ್ನೂ ಹತ್ತು ಹಲವು ದಾಖಲೆಗಳಿಗೆ ರೋಹಿತ್ ಭಾಜನರಾಗಿದ್ದಾರೆ. 

ಮೊದಲಿಗೆ ರೋಹಿತ್ ಶರ್ಮಾ ನೋಡಿದಾಗ ಯುವಿಗೆ ಇಂಜಮಾಮ್‌ ಅವರಂತೆ ಕಂಡಿದ್ದರಂತೆ..!

ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ, ಬಿಸಿಸಿಐ, ಸಹ ಆಟಗಾರರಾದ ಸುರೇಶ್ ರೈನಾ, ಖಲೀಲ್ ಅಹಮ್ಮದ್ ಸೇರಿದಂತೆ ಹಲವು ಕ್ರಿಕೆಟಿಗರು ಟ್ವೀಟ್ ಮೂಲಕ ಜನ್ಮದಿನಕ್ಕೆ ಶುಭ ಕೋರಿದ್ದಾರೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026: ಮಿನಿ ಹರಾಜಿಗೆ ಒಂದು ದಿನ ಬಾಕಿ ಇರುವಾಗ ಕೊನೆ ಕ್ಷಣದಲ್ಲಿ ಭಾರತದ ಸ್ಟಾರ್ ಕ್ರಿಕೆಟಿಗ 'ವೈಲ್ಡ್ ಕಾರ್ಡ್' ಎಂಟ್ರಿ!
ಮುಂಬೈನಲ್ಲಿ ಮೆಸ್ಸಿ ಮೇನಿಯಾ! ಫುಟ್ಬಾಲ್‌ ಲೆಜೆಂಡ್‌ಗೆ 2011ರ ವಿಶ್ವಕಪ್ ಜೆರ್ಸಿ ಕೊಟ್ಟ ಸಚಿನ್