ಏಕಾಂಗಿ ಹೋರಾಟ ನೀಡಿದ ಗುರ್ಬಾಜ್ ಶತಕ, ಟೀಂ ಇಂಡಿಯಾಗೆ 195 ರನ್ ಟಾರ್ಗೆಟ್ ನೀಡಿದ ಆಫ್ಘಾನಿಸ್ತಾನ

Published : Jun 13, 2026, 08:05 PM IST
arshdeep singh celebrate wicket

ಸಾರಾಂಶ

ರಹೆಮಾನುಲ್ಲಾ ಗುರ್ಬಾಜ್ ಸಿಡಿಸಿದ ಶತಕದ ನೆರವಿನಿಂದ ಆಫ್ಘಾನಿಸ್ತಾನ 194 ರನ್ ಸಿಡಿಸಿದೆ. ಮಳೆಯಿಂದ 25 ಓವರ್‌ಗೆ ಸೀಮಿತಗೊಂಡ ಈ ಪಂದ್ಯದಲ್ಲಿ ಇದೀಗ ಭಾರತ 195 ರನ್ ಟಾರ್ಗೆಟ್ ಚೇಸ್ ಮಾಡಬೇಕಿದೆ.

ಧರ್ಮಶಾಲಾ (ಜೂ.13) ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಮೊದಲ ಏಕದಿನ ಪಂದ್ಯ ರೋಚಕ ಘಟ್ಟ ತಲುಪಿದೆ. ರೆಹಮಾನುಲ್ಲಾ ಗುರ್ಬಾಜ್ ಭರ್ಜರಿ ಶತಕ ಸಿಡಿಸಿ ಮಿಂಚಿದರೆ, ನಾಯಕರ ಹಶ್ಮತುಲ್ಹಾ ಶಾಹಿದಿ ಹಾಗೂ ಅಜ್ಮಾತುಸಲ್ಹಾ ಒಮರ್‌ಝೈ ಉಪಯುಕ್ತ ಕಾಣಿಕೆಯಿಂದ ಆಫ್ಘಾನಿಸ್ತಾನ 194 ರನ್ ಸಿಡಿಸಿ ಆಲೌಟ್ ಆಗಿದೆ. ಮಳೆಯಿಂದ ಪಂದ್ಯವನ್ನು 25 ಓವರ್‌ಗೆ ಸೀಮಿತಗೊಳಿಸಲಾಗಿದೆ. ಇದೀಗ ಭಾರತ 195 ರನ್ ಚೇಸ್ ಮಾಡುವ ವಿಶ್ವಾಸದಲ್ಲಿದೆ.

ವಿಕೆಟ್ ಪತನದ ನಡುವೆ ಗುರ್ಬಾಜ್ ದಿಟ್ಟ ಹೋರಾಟ

ಟಾಸ್ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ಉತ್ತಮ ಬೌಲಿಂಗ್ ಹೋರಾಟ ನೀಡಿದರೆ ಇತ್ತ ಗುರ್ಬಾಜ್ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆಪ್ಘಾನಿಸ್ತಾನ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದರೂ ಗುರ್ಬಾಜ್ ಮಾತ್ರ ಏಕಾಂಗಿ ಹೋರಾಟ ನೀಡಿದರು. ಇಬ್ರಾಹಿಂ ಜರ್ದಾನ್, ಸೆದಿಕುಲ್ಲಾ ಅತಲ್ ರಹಮತ್ ಶಾ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. ಆದರೆ ಗುರ್ಜಾಬ್ ಭಾರತಕ್ಕೆ ತಲೆನೋವಾಗಿ ಪರಿಣಿಮಿಸಿದ್ದರು.

ಶತಕ ಸಿಡಿಸಿದ ಗುರ್ಬಾಜ್

ಗುರ್ಜಾಬ್ ಹೋರಾಟದ ಮೂಲಕ ಭರ್ಜರಿ ಸೆಂಚುರಿ ಸಿಡಿಸಿದರು. ಗುರ್ಬಾಜ್ ಕೇವಲ 51 ಎಸೆತದಲ್ಲಿ 8 ಬೌಂಡರಿ 8 ಸಿಕ್ಸರ್ ಮೂಲಕ 102 ರನ್ ಸಿಡಿಸಿದರು. 200ರ ಸ್ಟ್ರೈಕ್‌ರೇಟ್‌ನಲ್ಲಿ ಗುರ್ಬಾಜ್ ಬ್ಯಾಟಿಂಗ್ ಮಾಡಿದ್ದರು. ಗುರ್ಬಾಜ್ ಹೊರತುಪಡಿಸಿದರೆ ಇತರರಿಂದ ರನ್ ಹರಿದು ಬರಲಿಲ್ಲ. ಹಶ್ಮತುಲ್ಹಾ ಶಾಹಿತಿ 27 ರನ್ ಸಿಡಿಸಿದರೆ, ಅಜ್ಮುತುಲ್ಹಾ ಓಮರ್‌ಜೈ 27 ರನ್ ಕಾಣಿಕೆ ನೀಡಿದರು.

ಟೀಂ ಇಂಡಿಯಾ ಅದ್ಭುತ ಬೌಲಿಂಗ್ ದಾಳಿಗೆ ಆಫ್ಘಾನಿಸ್ತಾನ 24.5 ಓವರ್‌ಗಳಲ್ಲಿ 194 ರನ್ ಸಿಡಿಸಿ ಆಲೌಟ್ ಆಗಿದೆ. ಹರ್ಷ ದುಬೆ 3, ಗುರ್ನೂರ್ ಬ್ರಾರ್ 3, ಅರ್ಶದೀಪ್ ಸಿಂಗ್ 2 ಹಾಗೂ ನಿತೀಶ್ ಕುಮಾರ್ ರೆಡ್ಡಿ 2 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವೈಭವ್ ಸೂರ್ಯವಂಶಿ ಟೀಂ ಇಂಡಿಯಾ ಡೆಬ್ಯೂಗೆ ಎದುರಾದ ಅಡ್ಡಿ, ಐರ್ಲೆಂಡ್‌ ಸರಣಿ ಅನುಮಾನ
10 ವರ್ಷದ ತಮ್ಮ ಆಶೀರ್ವಾದ್ ಶತಕ ಸಿಡಿಸುತ್ತಿದ್ದಂತೆಯೇ ಭಾವನಾತ್ಮಕ ಸ್ಟೋರಿ ಹಂಚಿಕೊಂಡ ವೈಭವ್ ಸೂರ್ಯವಂಶಿ!