
ನವದೆಹಲಿ(ಆ.10): ಭಾರತ ಕ್ರಿಕೆಟ್ ತಂಡದ ಕಿಟ್ ಪ್ರಾಯೋಜಕತ್ವವನ್ನು ಜರ್ಮನಿಯ ಪ್ರತಿಷ್ಠಿತ ಕ್ರೀಡಾ ಪರಿಕರಗಳ ಸಂಸ್ಥೆ ಪೂಮಾ ಖರೀದಿಸುವ ಸಾಧ್ಯತೆ ಇದೆ. ಪ್ರಾಯೋಜಕತ್ವಕ್ಕೆ ಬಿಸಿಸಿಐ ಟೆಂಡರ್ ಆಹ್ವಾನಿಸಿದ್ದು, ಪೂಮಾ ಅರ್ಜಿ ಪಡೆದುಕೊಂಡಿದೆ.
ಪೂಮಾ ಸಂಸ್ಥೆ ಬಿಡ್ ಸಲ್ಲಿಸಲು ಆಸಕ್ತಿ ವಹಿಸಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನೈಕಿ ಸಂಸ್ಥೆ 2016ರಿಂದ 2020ರ ವರೆಗಿನ ಅವಧಿಗೆ 370 ಕೋಟಿ ರುಪಾಯಿ ಮೌಲ್ಯದ ಒಪ್ಪಂದ ಮಾಡಿಕೊಂಡಿತ್ತು. ಇತ್ತೀಚೆಗಷ್ಟೇ, ಒಪ್ಪಂದ ಮುಕ್ತಾಯಗೊಂಡಿದ್ದು ನವೀಕರಿಸದೆ ಇರಲು ಸಂಸ್ಥೆ ನಿರ್ಧರಿಸಿತ್ತು.
ಕೊರೋನಾ ಆರ್ಥಿಕ ಸಂಕಷ್ಟದ ನೆಪ ಮುಂದಿಟ್ಟುಕೊಂಡು ನೈಕಿ ಸಂಸ್ಥೆ ಹೊಸದಾಗಿ ಬಿಡ್ ಸಲ್ಲಿಸಲು ಚಿಂತಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದೇ ವೇಳೆ, ಜರ್ಮನಿಯ ಮತ್ತೊಂದು ಕ್ರೀಡಾ ಬ್ರ್ಯಾಂಡ್ ಆ್ಯಡಿಡಾಸ್ ಸಹ ಪ್ರಾಯೋಜಕತ್ವ ಹಕ್ಕಿಗೆ ಪೈಪೋಟಿ ನಡೆಸಬಹುದು ಎನ್ನಲಾಗಿದೆ.
ಬಿಸಿಸಿಐಗೆ ಮತ್ತೊಂದು ಆರ್ಥಿಕ ಹೊಡೆತ..!
2016ರಲ್ಲಿ ನೈಕಿ ಕಂಪನಿಯು ಬಿಸಿಸಿಐ ಜತೆ 5 ವರ್ಷದ ಅವಧಿಗೆ 370 ಕೋಟಿ ರುಪಾಯಿಗಳ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದ ಇದೇ ಸೆಪ್ಟೆಂಬರ್ 30ಕ್ಕೆ ಅಂತ್ಯಗೊಳ್ಳಲಿದೆ. ಈ ಒಪ್ಪಂದದ್ವಯ ನೈಕಿ ಕಂಪನಿಯು ಟೀಂ ಇಂಡಿಯಾ ಆಡುವ ಪ್ರತಿಪಂದ್ಯಕ್ಕೆ 87,34,000 ರುಪಾಯಿಗಳನ್ನು ನೀಡುತಿತ್ತು ಎನ್ನಲಾಗಿದೆ.
ಆ್ಯಡಿಡಾಸ್ ಹಾಗೂ ಪೂಮಾ ಉತ್ಫನ್ನಕ್ಕೆ ಭಾರತದಲ್ಲಿ ಉತ್ತಮ ಬೇಡಿಕೆಯಿದೆ. ಈಗಾಗಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್ ರಾಹುಲ್ ಜತೆಗೆ ಪೂಮಾ ಕಂಪನಿ ಬ್ರ್ಯಾಂಡ್ ಅಂಬಾಸಿಡರ್ ಆಗಿ ಒಪ್ಪಂದ ಮಾಡಿಕೊಂಡಿದೆ. ಇನ್ನು ಸೀಮಿತ ಓವರ್‌ಗಳ ತಂಡದ ಉಪನಾಯಕ ರೋಹಿತ್ ಶರ್ಮಾ ಆ್ಯಡಿಡಾಸ್ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.