
ಗೌರಿ ಗಣೇಶ ಹಬ್ಬದ ಸಂಭ್ರಮ ಜೋರಾಗಿದೆ. ಹಬ್ಬ ಮುಗಿದರೂ ಸಾರ್ವಜನಿಕ ಗಣೇಶೋತ್ಸವಗಳು ನಡೆಯುತ್ತಲೇ ಇವೆ. ಜೊತೆಗೆ ಸ್ಟಾರ್‍ಗಳ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಭಾರತದ ಸಿನಿಮಾ ಸ್ಟಾರ್, ಕ್ರಿಕೆಟಿಗರು ಗಣೇಶ ಹಬ್ಬವನ್ನು ಭರ್ಜರಿಯಾಗಿ ಆಚರಿಸೋದು ಹೊಸದೇನೂ ಅಲ್ಲ. ಬಾಂಗ್ಲಾದೇಶದ ಖ್ಯಾತ ಕ್ರಿಕೆಟಿಗರೊಬ್ಬರು ಮನೆಯಲ್ಲಿ ಗಣೇಶನ ಕೂರಿಸಿ 'ಜೈ ಗಣೇಶ' ಎಂದು ಘೋಷಣೆ ಕೂಗಿದ್ದಾರೆ.
ಸ್ಟಾರ್ ಕ್ರಿಕೆಟಿಗ, ವಿಕೆಟ್ ಕೀಪರ್ ಲಿಟನ್ ದಾಸ್ ಗಣೇಶ ಚತುರ್ಥಿಯನ್ನ ಖುಷಿಯಿಂದ ಆಚರಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಮನೆಯ ಗೌರಿ ಗಣೇಶ ಪೂಜೆಯ ಫೋಟೋಗಳನ್ನ ಹಂಚಿಕೊಂಡು ಸಮಸ್ತ ಹಿಂದೂಗಳಿಗೆ ಹಬ್ಬದ ಶುಭಾಶಯ ಕೋರಿದ್ದಾರೆ. ದಾಸ್ ಶುಭಾಶಯಕ್ಕೆ ಫುಲ್ ಖುಷಿಯಾಗಿರುವ ಅಭಿಮಾನಿಗಳು ಕಾಮೆಂಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.
ಇನ್ನು ಲಿಟನ್ ದಾಸ್ ಏನು ಹೇಳಿದ್ದಾರೆ ಅಂತಾ ನೋಡೋದಾದರೆ, ಪ್ರೀತಿ, ಭಕ್ತಿ ಮತ್ತು ಕೃತಜ್ಞತೆಯಿಂದ.. ಆತ್ಮೀಯವಾಗಿ ಗಣೇಶನನ್ನು ಮನೆಗೆ ಸ್ವಾಗತಿಸುತ್ತೇನೆ. ಗಣಪತಿ ಬಪ್ಪಾ ಮನೆಯಲ್ಲಿ ಸಂತೋಷ, ಶಾಂತಿ, ಸಮೃದ್ಧಿ ಮತ್ತು ಒಳ್ಳೆಯದನ್ನ ತುಂಬಲಿ. ಆತನ ಉಪಸ್ಥಿತಿಯು ನಮ್ಮ ಜೀವನವನ್ನು ಬೆಳಗಲಿ. ನಮ್ಮ ಪ್ರತಿ ಹಾದಿಯಲ್ಲೂ ಮಾರ್ಗದರ್ಶನ ನೀಡಲಿ. ಗಣಪತಿ ಬಪ್ಪಾ ಮೋರೆಯಾ ಎಂದು ದಾಸ್ ಬರೆದಿದ್ದಾರೆ.
ಲಿಟನ್ ದಾಸ್ ಅವರು ಹಿಂಧೂ ಧರ್ಮಕ್ಕೆ ಸೇರಿದವರು. ಅವರು ಕಳೆದ ಎರಡು ತಿಂಗಳ ಹಿಂದಷ್ಟೇ ಬಾಂಗ್ಲಾದೇಶದ ಏಕದಿನ ತಂಡದ ನಾಯಕರಾಗಿ ಆಯ್ಕೆ ಆಗಿದ್ದಾರೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್ ತಂಡವನ್ನು ಅವರು ಮುನ್ನಡೆಸಲಿದ್ದಾರೆ. ಈ ಹಿಂದೆಯೂ ಅವರು ಎಲ್ಲಾ ಸ್ವರೂಪಗಳಲ್ಲೂ ತಂಡವನ್ನು ಮುನ್ನಡೆಸಿದ್ದರು. ಅವರ ನಾಯಕತ್ವದಲ್ಲಿ 2022 ರಲ್ಲಿ ಭಾರತದ ವಿರುದ್ಧದ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತ್ತು.
ಲಿಟನ್ ದಾಸ್ ಬಾಂಗ್ಲಾದೇಶದ ಪರ ಮೂರು ಸ್ವರೂಪಗಳನ್ನು ಆಡಲಿದ್ದಾರೆ. 56 ಟೆಸ್ಟ್, 104 ಏಕದಿನ ಮತ್ತು 122 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನ ಆಡಲಿದ್ದಾರೆ. 97 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿಆರು ಶತಕಗಳು ಮತ್ತು 20 ಅರ್ಧಶತಕಗಳು ಸೇರಿವೆ. 35.32 ರ ಸರಾಸರಿಯಲ್ಲಿ 3,356 ರನ್ ಗಳಿಸಿದ್ದಾರೆ. ಗರಿಷ್ಠ ಸ್ಕೋರ್ 141. ಏಕದಿನ ಪಂದ್ಯಗಳನ್ನ ನೋಡೋದಾದರೆ, 103 ಏಕದಿನ ಇನ್ನಿಂಗ್ಸ್‌ಗಳಲ್ಲಿ, ಲಿಟನ್ ದಾಸ್ 30.84 ಸರಾಸರಿಯಲ್ಲಿ 2,869 ರನ್ ಗಳಿಸಿದ್ದಾರೆ. ಐದು ಶತಕಗಳು ಮತ್ತು 14 ಅರ್ಧಶತಕಗಳನ್ನು ಗಳಿಸಿದ್ದಾರೆ. 120 ಟಿ20ಐ ಇನ್ನಿಂಗ್ಸ್‌ಗಳಲ್ಲಿ 23.49 ಸರಾಸರಿ ಮತ್ತು 126.79 ಸ್ಟ್ರೈಕ್ ರೇಟ್‌ನೊಂದಿಗೆ 2,702 ರನ್ ಗಳಿಸಿದ್ದಾರೆ.
Welcoming Lord Ganesha into our home with love, devotion, and a grateful heart. 🪷✨
May Bappa bless our home with happiness, peace, prosperity, and endless positivity.
May His divine presence always light our lives and guide us through every journey. 🙏❤️
Ganpati Bappa Morya!… pic.twitter.com/vNR0Nny6HK— Litton Das (@LittonOfficial) September 15, 2026
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.