
ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಭರ್ಜರಿಯಾಗಿ ಸಾಗುತ್ತಿದೆ. ಬಹುತೇಕ ಎಲ್ಲಾ ಪಂದ್ಯಗಳಲ್ಲೂ ಮ್ಯಾಚ್ ಟಿಕೆಟ್‌ಗಳು ಸೋಲ್ಡೌಟ್ ಆಗುತ್ತಿವೆ. ಎಲ್ಲಾ ವರ್ಗದ ಎಲ್ಲಾ ವಯೋಮಾನದ ಕ್ರಿಕೆಟ್ ಫ್ಯಾನ್ಸ್ ಸ್ಟೇಡಿಯಂಗೆ ಬಂದು ಐಪಿಎಲ್ ಎಂಜಾಯ್ ಮಾಡುತ್ತಿರುವುದನ್ನು ನಾವೆಲ್ಲಾ ನೋಡುತ್ತಿದ್ದೇವೆ. ಆದರೆ ಲಖನೌ ಸೂಪರ್ ಜೈಂಟ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಮ್ಯಾಚ್‌ನಲ್ಲಿ ಒಂದು ಮುದ್ದಾದ ಜೋಡಿ ಸ್ಟೇಡಿಯಂ ಪ್ರೇಕ್ಷಕರ ಗ್ಯಾಲರಿಯಲ್ಲೇ ಕಿತ್ತಾಡಿಕೊಂಡ ಅಪರೂಪದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೆ ಎನ್ನುವ ಗಾದೆ ಮಾತು ಎಲ್ಲರಿಗೂ ಗೊತ್ತಿರುವಂತದ್ದೆ. ಆದರೆ ಇಲ್ಲೊಂದು ಜೋಡಿ ಲಘು ಹಾಸ್ಯಭರಿತವಾಗಿ ಐಪಿಎಲ್ ಮ್ಯಾಚ್‌ನ ಪ್ರೇಕ್ಷಕರ ಗ್ಯಾಲರಿಯಲ್ಲೂ ಕಿತ್ತಾಡಿಕೊಂಡಿದ್ದಾರೆ. ಮೇಲ್ನೋಟಕ್ಕೆ ಗೆಳತಿ ತನ್ನ ಗೆಳೆಯನ ಮೇಲೆ ಕೊಂಚ ಬೇಸರ ಮಾಡಿಕೊಂಡಿರುವಂತೆ ಕಂಡುಬಂದಿದ್ದು, ಸಿಟ್ಟಿನಲ್ಲಿ ಗೆಳತಿ ಸ್ಟೇಡಿಯಂನಿಂದ ಹೊರಹೋಗುವಂತೆ ಕಂಡು ಬರುತ್ತದೆ. ಆದರೆ ಗೆಳೆಯ ಅಲ್ಲೇ ನಿಂತು ಮ್ಯಾಚ್ ವೀಕ್ಷಿಸಲು ಮುಂದಾಗುತ್ತಾನೆ. ಸ್ವಲ್ಪ ಸಮಯದ ಬಳಿಕ ಆ ಗೆಳತಿಯು ವಾಪಾಸ್ ಬಂದು ಗೆಳೆಯನಿಗೆ ಸಾಥ್ ಕೊಡುತ್ತಾಳೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಕೋಲ್ಕತಾ: ಯುವ ಬ್ಯಾಟರ್ ಮುಕುಲ್ ಚೌಧರಿ ಸಾಹಸದಿಂದಾಗಿ ಕೋಲ್ಕತಾ ವಿರುದ್ಧ ಲಖನೌ 3 ವಿಕೆಟ್ ರೋಚಕ ಗೆಲುವು ಸಾಧಿಸಿದೆ. ಲಖನೌ 3 ಪಂದ್ಯಗಳಲ್ಲಿ 2ನೇ ಜಯ ದಾಖಲಿಸಿದರೆ, ಕೋಲ್ಕತಾ ಸತತ 4ನೇ ಪಂದ್ಯದಲ್ಲೂ ಗೆಲುವಿನಿಂದ ವಂಚಿತವಾಯಿತು.
ಕೋಲ್ಕತಾ 4 ವಿಕೆಟ್‌ಗೆ 181 ರನ್ ಗಳಿಸಿತು. ರಘುವಂಶಿ 45, ನಾಯಕ ಅಜಿಂಕ್ಯ ರಹಾನೆ 41, ಪೊವೆಲ್ ಔಟಾಗದೆ 39, ಗ್ರೀನ್ ಔಟಾಗದೆ 32 ರನ್ ಸಿಡಿಸಿದರು. ದೊಡ್ಡ ಗುರಿ ಬೆನ್ನತ್ತಿದ ಕೊನೆ ಎಸೆತದಲ್ಲಿ 7 ವಿಕೆಟ್ ನಷ್ಟದಲ್ಲಿ ಜಯಗಳಿಸಿತು. ಆಯುಶ್ ಬದೋನಿ 54 ರನ್ ಬಾರಿಸಿದರು. ಕೊನೆ 24 ಎಸೆತಕ್ಕೆ ಲಖನೌಗೆ 54 ರನ್ ಬೇಕಿತ್ತು. ಆಗ 2 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ಮುಕುಲ್, ಬಳಿಕ 7 ಸಿಕ್ಸರ್ ಸಿಡಿಸಿದರು. ಕೊನೆ 2 ಓವರ್‌ಗೆ 30, ಕೊನೆ ಓವರ್‌ಗೆ 14, ಕೊನೆ ಎಸೆತಕ್ಕೆ 1 ರನ್ ಬೇಕಿದ್ದಾಗ ಮುಕುಲ್ ತಂಡವನ್ನು ಗೆಲ್ಲಿಸಿದರು. 21 ವರ್ಷದ ಮುಕುಲ್ 27 ಎಸೆತಕ್ಕೆ ಔಟಾಗದೆ 54 ರನ್ ಸಿಡಿಸಿದರು.
ಸ್ಕೋರ್: ಕೋಲ್ಕತಾ 181/4 (ರಘುವಂಶಿ 45, ರಹಾನೆ 41, ದಿಗ್ವೇಶ್ 1-25), ಲಖನೌ 182/7 (ಮುಕುಲ್ ಔಟಾಗದೆ 54, ಆಯುಶ್ 54, ಅನುಕುಲ್ 2-32)
ಪಂದ್ಯಶ್ರೇಷ್ಠ: ಮುಕುಲ್ ಚೌಧರಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.