Breaking News: ಟೀಂ ಇಂಡಿಯಾ ಅಂಡರ್ 19 ಮಾಜಿ ನಾಯಕ ಅವಿ ಬರೋಟ್ ನಿಧನ..!

By Suvarna NewsFirst Published Oct 16, 2021, 11:41 AM IST
Highlights

* ಟೀಂ ಇಂಡಿಯಾ ಅಂಡರ್ 19 ಮಾಜಿ ನಾಯಕ ಅವಿ ಬರೋಟ್

* ಹೃದಯಾಘಾತದಿಂದ ಕೊನೆಯುಸಿರೆಳೆದ ಪ್ರತಿಭಾನ್ವಿತ ಕ್ರಿಕೆಟಿಗ

* ಬಲಗೈ ಬ್ಯಾಟರ್ ಆಗಿದ್ದ ಅವಿ ಬರೋತ್, ಆಫ್‌ ಸ್ಪಿನ್ ಬೌಲಿಂಗ್ ಕೂಡಾ ಮಾಡುತ್ತಿದ್ದರು

ಸೌರಾಷ್ಟ್ರ(ಅ.16): ಭಾರತ ಅಂಡರ್ 19 ತಂಡದ (Team India U 19 Captain) ಮಾಜಿ ನಾಯಕ, 2019-20ನೇ ಸಾಲಿನ ರಣಜಿ ಟ್ರೋಫಿ (Ranji Trophy) ವಿಜೇತ ತಂಡದ ಸದಸ್ಯ ಸೌರಾಷ್ಟ್ರದ ಬ್ಯಾಟರ್ ಅವಿ ಬರೋಟ್(29) ಹೃದಯಾಘಾತ (Cardiac Arrest) ದಿಂದ ಶುಕ್ರವಾರ(ಅ.15) ಕೊನೆಯುಸಿರೆಳೆದಿದ್ದಾರೆ. ಪ್ರತಿಭಾನ್ವಿತ ಆಟಗಾರನ ನಿಧನಕ್ಕೆ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕಂಬನಿ ಮಿಡಿದಿದೆ. 

ತಮ್ಮ ಕ್ರಿಕೆಟ್‌ ವೃತ್ತಿಜೀವನದಲ್ಲಿ ಅವಿ ಬರೋಟ್ (Avi Barot) ಸೌರಾಷ್ಟ್ರ ಮಾತ್ರವಲ್ಲದೇ ಹರ್ಯಾಣ (haryana) ಹಾಗೂ ಗುಜರಾತ್ (Gujarat) ತಂಡಗಳನ್ನು ಪ್ರತಿನಿಧಿಸಿದ್ದರು. ಸೌರಾಷ್ಟ್ರ ಕ್ರಿಕೆಟ್‌ ತಂಡ (Saurashtra Cricket Team) ಅದ್ಭುತ ಕ್ರಿಕೆಟಿಗ ಅವಿ ಬರೋಟ್ ನಿಧನದ ಸುದ್ದಿ ಕೇಳಿ ಆಘಾತವಾಯಿತು. ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ (Saurashtra Cricket Association)ಯ ಪ್ರತಿಯೊಬ್ಬರಿಗೂ ಈ ಸುದ್ದಿ ನೋವುಂಟು ಮಾಡಿದೆ. ಅವರ ನಿಧನಕ್ಕೆ ಭಾವಪೂರ್ಣ ಶ್ರದ್ದಾಂಜಲಿಗಳು ಎಂದು ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Words are not sufficient to convey our feelings. Our thoughts and prayers are with the friends and family of Avi Barot, may his Soul Rest In Peace. https://t.co/dqv6JiWaTc

— Gujarat Cricket Association (Official) (@GCAMotera)

T20 World Cup ಆ್ಯಂಬ್ರೋಸ್‌ ಬಗ್ಗೆ ನನಗ್ಯಾವ ಗೌರವವೂ ಇಲ್ಲವೆಂದ ಕ್ರಿಸ್‌ ಗೇಲ್‌..!

ಅವಿ ಬರೋಟ್ ಹೃದಯಾಘಾತದಿಂದ 2021ರ ಅಕ್ಟೋಬರ್ 15ರ ಸಂಜೆ ಇಹಲೋಕ ತ್ಯಜಿಸಿದ್ದಾರೆ ಎಂದು ರಾಜ್‌ಕೋಟ್‌ನಲ್ಲಿರುವ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ತಿಳಿಸಿದೆ. ಬಲಗೈ ಬ್ಯಾಟರ್ ಆಗಿದ್ದ ಅವಿ ಬರೋಟ್, ಆಫ್‌ ಸ್ಪಿನ್ ಬೌಲಿಂಗ್ ಕೂಡಾ ಮಾಡುತ್ತಿದ್ದರು. ಅವಿ ಬರೋಟ್ 38 ಪ್ರಥಮ ದರ್ಜೆ ಪಂದ್ಯಗಳು (First Class Cricket), 38 ಲಿಸ್ಟ್‌ ಎ ಪಂದ್ಯಗಳು ಹಾಗೂ 20 ದೇಶಿ ಟಿ20 ಪಂದ್ಯಗಳನ್ನಾಡಿದ್ದರು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದ ಅವಿ ಬರೋಟ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1,547 ರನ್‌, ಲಿಸ್ಟ್ 'ಎ' ಕ್ರಿಕೆಟ್‌(List A Cricket) ನಲ್ಲಿ 1,030 ರನ್‌ ಹಾಗೂ ಟಿ20 ಕ್ರಿಕೆಟ್‌ (T20 Cricket) ನಲ್ಲಿ 717 ರನ್‌ ಬಾರಿಸಿದ್ದರು.

2012ರ ಐಪಿಎಲ್‌ ಫಲಿತಾಂಶ 2021ರಲ್ಲಿ ಸಂಪೂರ್ಣ ಉಲ್ಟಾ! ಅಚ್ಚರಿಯಾದ್ರೂ ಇದು ಸತ್ಯ..!

ಇನ್ನು 2019-20ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಬೆಂಗಾಲ್ ತಂಡವನ್ನು ಮಣಿಸಿ ಸೌರಾಷ್ಟ್ರ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಸೌರಾಷ್ಟ್ರ ಚಾಂಪಿಯನ್ ರಣಜಿ ತಂಡದ ಸದಸ್ಯರಲ್ಲಿ ಅವಿ ಬರೋಟ್ ಕೂಡಾ ಒಬ್ಬರಾಗಿದ್ದರು. ಸೌರಾಷ್ಟ್ರ ಪರ 21 ರಣಜಿ ಪಂದ್ಯಗಳನ್ನು, 17 ಲಿಸ್ಟ್‌ 'ಎ' ಪಂದ್ಯಗಳನ್ನು ಹಾಗೂ 11 ದೇಶಿ ಟಿ20 ಪಂದ್ಯಗಳನ್ನು ಆಡಿದ್ದಾರೆ.

ಅವಿ ಬರೋಟ್ 2011ರ ಅಂಡರ್ 19 ಭಾರತ ತಂಡದ ನಾಯಕರಾಗಿಯೂ ಸೈ ಎನಿಸಿಕೊಂಡಿದ್ದರು. ಇದಕ್ಕೂ ಮೊದಲು ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಗೋವಾ ವಿರುದ್ದ 53 ಎಸೆತಗಳಲ್ಲಿ ಸ್ಪೋಟಕ 122 ರನ್‌ ಚಚ್ಚಿದ್ದರು. ಅವಿ ಬರೋಟ್ ನಿಧನಕ್ಕೆ ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಜಯದೇವ್ ಶಾ (Jaydev Shah) ಕಂಬನಿ ಮಿಡಿದ್ದಾರೆ.

IPL 2021: KKR ತಂಡದ ಆಟಗಾರರ ಗ್ಲಾಮರ್ಸ್‌ ಪತ್ನಿಯರು ಮತ್ತು ಗರ್ಲ್‌ಫ್ರೆಂಡ್ಸ್‌!

ಅವಿ ಬರೋಟ್ ಕೊನೆಯುಸಿರೆಳೆದಿದ್ದು ನಿಜಕ್ಕೂ ಆಘಾತಕಾರಿ ಹಾಗೂ ನೋವಿನ ಸುದ್ದಿ. ಅವರೊಬ್ಬ ಒಳ್ಳೆಯ ಕ್ರಿಕೆಟ್ ಕೌಶಲ್ಯಗಳನ್ನು ಹೊಂದಿದ್ದರು. ಇತ್ತೀಚಿನ ದೇಶಿಯ ಟೂರ್ನಗಳಲ್ಲಿ ಅವಿ ಬರೋಟ್ ಗಮನಾರ್ಹ ಪ್ರದರ್ಶನ ತೋರಿದ್ದರು. ಅವರು ಸ್ನೇಹ ಜೀವಿಯಾಗಿದ್ದರು. ಅವರ ನಿಧನಕ್ಕೆ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಆಘಾತಕ್ಕೊಳಗಾಗಿದೆ ಎಂದು ಜಯದೇವ್ ಶಾ ತಿಳಿಸಿದ್ದಾರೆ.

click me!