
ಅಜಿತ್ ಅಗರ್ಕರ್ ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ. ಇವರ ಹೆಸರು ಹೇಳುತ್ತಿದ್ದಂತೆಯೇ ಟೀಂ ಇಂಡಿಯಾದ ಅನೇಕ ಕ್ರಿಕೆಟ್ ಅಭಿಮಾನಿಗಳು ಉರಿದು ಬೀಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ಯಾವಾಗಪ್ಪ ಬಿಸಿಸಿ ತೊರೆದು ಹೋಗ್ತಾರೆ ಎಂಬ ಪ್ರಶ್ನೆಯನ್ನು ಅನೇಕರು ಕೇಳ್ತಿದ್ದಾರೆ. ಇದೀಗ ಈ ಎಲ್ಲಾ ಪ್ರಶ್ನೆಗಳಿಗೆ ಬಿಸಿಸಿಐ ಉತ್ತರ ಕಂಡುಕೊಂಡಿದೆ.
ಅಜಿತ್ ಅಗರ್ಕರ್ ಬದಲಿಯಾಗಿ ಒಬ್ಬ ಆಯ್ಕೆಗಾರನನ್ನು ಹುಡುಕಿಕೊಂಡಿದೆ ಎಂದು ವರದಿಯಾಗಿದೆ. ಶೀಘ್ರದಲ್ಲೇ ಅವರನ್ನೇ ಹಂಗಾಮಿ ಆಯ್ಕೆಗಾರರನ್ನಾಗಿ ಬಿಸಿಸಿಐ ನೇಮಕ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಕೆಲವು ಮಾಹಿತಿಗಳ ಪ್ರಕಾರ.. ಬಿಸಿಸಿಐ ಪ್ರಸ್ತುತ ಪ್ರಜ್ಞಾನ್ ಓಜಾ ಮೇಲೆ ಕಣ್ಣಿಟ್ಟಿದೆ ಎಂದು ಹೇಳಲಾಗುತ್ತಿದೆ. ಪ್ರಜ್ಞಾನ್ ಅತಿ ಹೆಚ್ಚು ಟೆಸ್ಟ್ ಪಂದ್ಯಗಳ ಅನುಭವ ಹೊಂದಿದ್ದಾರೆ. ಇನ್ನು ಓಜಾ ಹೆಸರು ಬರಲು ಬಲವಾದ ಕಾರಣ ಕೂಡವೂ ಇದೆ.
ಹೌದು, ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಒಂದು ವೈರಲ್ ಆಗಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ನಾಲ್ವರು ಆಯ್ಕೆದಾರರೊಂದಿಗೆ ಚರ್ಚಿಸುತ್ತಿರುವ ಫೋಟೋ ವೈರಲ್ ಆಗಿದೆ. ಅದರಲ್ಲಿ ಅಗರ್ಕರ್ ಹಾಜರಿರಲಿಲ್ಲ. ಇದೇ ಫೋಟೋ ಇದೀಗ ಬಿಸಿಸಿಐನ ಪ್ಲಾನ್ ರಿವೀಲ್ ಮಾಡಿದೆ ಎಂದು ವರದಿ ಆಗಿದೆ.
ಕೆಲವು ವರದಿಗಳ ಪ್ರಕಾರ.. ಬಿಸಿಸಿಐ ಪ್ರಸ್ತುತ ಪ್ರಜ್ಞಾನ್ ಓಜಾ ಅವರನ್ನು ಮಧ್ಯಂತರ ಮುಖ್ಯ ಆಯ್ಕೆದಾರರನ್ನಾಗಿ ನೇಮಿಸುವ ಬಗ್ಗೆ ಯೋಚಿಸುತ್ತಿದೆ. ಮುಂದಿನ ದಿನಗಳಲ್ಲಿ ಪೂರ್ಣಾವಧಿ ಆಯ್ಕೆದಾರರನ್ನಾಗಿ ನೇಮಿಸುವ ಸಾಧ್ಯತೆ ಇದೆ. ಗೌತಮ್ ಗಂಭೀರ್ ಅವರು ಓಜಾ, ಆರ್‌ಪಿ ಸಿಂಗ್, ಅಜಯ್ ರಾತ್ರಾ ಮತ್ತು ಶಿವ ಸುಂದರ್ ದಾಸ್ ಜೊತೆ ನಡೆಸಿದ ಸಭೆ ಆಶ್ಚರ್ಯವೇನಿಲ್ಲ. ಏಕೆಂದರೆ ಬಿಸಿಸಿಐ ಶೀಘ್ರದಲ್ಲೇ ನ್ಯೂಜಿಲೆಂಡ್ ಪ್ರವಾಸಕ್ಕಾಗಿ ಟೆಸ್ಟ್, ಏಕದಿನ ಮತ್ತು ಟಿ20 ತಂಡಗಳನ್ನು ಘೋಷಿಸಬೇಕಿದೆ.
ಪ್ರಗ್ಯಾನ್ ಓಜಾ ಅವರು ಟೀಂ ಇಂಡಿಯಾ ಪರ 24 ಟೆಸ್ಟ್ ಮ್ಯಾಚ್ ಆಡಿದ್ದಾರೆ. ಆಯ್ಕೆ ಸಮಿತಿಯಲ್ಲಿರುವ ಆಯ್ಕೆದಾರರಲ್ಲಿ ಮುಖ್ಯ ಆಯ್ಕೆದಾರರು ಅತಿ ಹೆಚ್ಚು ಟೆಸ್ಟ್ ಪಂದ್ಯದ ಅನುಭವ ಹೊಂದಿರೋರು ಇವರೇ. ಅವರು 2008-2013 ರ ಅವಧಿಯಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕಾಗಿ ಟೆಸ್ಟ್, ಏಕದಿನ ಮತ್ತು ಟಿ20 ಸ್ವರೂಪಗಳಲ್ಲಿ ಆಡಿದ ಅನುಭವ ಇದೆ. ಎಡಗೈ ಸ್ಪಿನ್ನರ ಆಗಿರುವ ಇವರು, 24 ಟೆಸ್ಟ್ ಪಂದ್ಯಗಳಲ್ಲಿ 113 ವಿಕೆಟ್‌ಗಳನ್ನು ಪಡೆದಿದ್ದಾರೆ. 18 ಏಕದಿನ ಪಂದ್ಯಗಳಲ್ಲಿ 21 ವಿಕೆಟ್‌ಗಳು ಮತ್ತು 6 ಟಿ20 ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.
ಹಾಗೆ ನೋಡಿದ್ರೆ ಟೀಂ ಇಂಡಿಯಾಗೆ ಆದಷ್ಟು ಬೇಗೆ ಪೂರ್ಣಾವಧಿಯ ಆಯ್ಕೆಗಾರ ಬೇಕಾಗುತ್ತದೆ. 2027ರಲ್ಲಿ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಪಂದ್ಯವನ್ನ ಆಡಲಿದೆ. ವಿಶ್ವಕಪ್‌ಗಾಗಿ ತಂಡವು ಸತತವಾಗಿ ಪಂದ್ಯಗಳನ್ನ ಆಡುತ್ತಿದೆ. ಭಾರತವು ಏಕದಿನ ವಿಶ್ವಕಪ್ ಗೆಲ್ಲಬೇಕು ಪರಿಣಾಮಕಾರಿ ಆಯ್ಕೆ ಸಮಿತಿ ಕೂಡ ಮುಖ್ಯ ಆಗಿರಲಿದೆ. ಹೀಗಾಗಿ ಬಿಸಿಸಿಐ ಯಾರನ್ನು ಆಯ್ಕೆ ಸಮತಿಯ ಲೀಡರ್ ಆಗಿ ನೇಮಕ ಮಾಡಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.