RCB: ನನಗೆ ಆ ಆರ್‌ಸಿಬಿ ಪ್ಲೇಯರೇ ನಂ.1 ಎಂದು ಭಾವುಕರಾದ ಸಿಎಸ್‌ಕೆ ಮಾಜಿ ಆಟಗಾರ!

Published : Nov 17, 2026, 10:47 AM IST
rcb

ಸಾರಾಂಶ

ಆರ್‌ಸಿಬಿ ಸ್ಟಾರ್ ನನಗೆ ಯಾವಾಗಲೂ ನಂ.1 ಆಟಗಾರ ಎಂದು ಸಿಎಸ್‌ಕೆ ಮಾಜಿ ಪ್ಲೇಯರ್ ಅಶ್ವಿನ್ ಭಾವುಕರಾಗಿ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಹಾಗಾದರೆ ಆ ಆರ್‌ಸಿಬಿ ಆಟಗಾರ ಯಾರು? ಅದನ್ನು ಹೇಳಿದ ಸಿಎಸ್‌ಕೆ ಆಟಗಾರ ಯಾರು? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು: ಕ್ರಿಕೆಟ್‌ನಲ್ಲಿ ದಿನಗಳು ಉರುಳಬಹುದು, ಆದರೆ ಅಲ್ಲಿ ಸೃಷ್ಟಿಯಾದ ಸ್ನೇಹ, ಅಭಿಮಾನ ಮತ್ತು ವ್ಯಕ್ತಿತ್ವದ ಮೇಲಿನ ಗೌರವ ಹಾಗೆಯೇ ಉಳಿದುಬಿಡುತ್ತದೆ. ಅದಕ್ಕೆ ಸಾಕ್ಷಿ ಎಂಬಂತೆ, ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮಾಜಿ ಆಟಗಾರರೊಬ್ಬರು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ದಂತಕತೆಯ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ, "ಆ ಆರ್‌ಸಿಬಿ ಆಟಗಾರನೇ ನನಗೆ ಎಂದೆಂದಿಗೂ ನಂ.1 ಎನ್ನುವ ಭಾವುಕ ಮಾತನ್ನೂ ಆಡಿದ್ದಾರೆ. ಹಾಗಾದರೆ ಆ ಆರ್‌ಸಿಬಿ ಆಟಗಾರ ಯಾರು? ಅದನ್ನು ಹೇಳಿದ ಸಿಎಸ್‌ಕೆ ಆಟಗಾರ ಯಾರು? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಆ ಮಾತು ಹೇಳಿದ್ದು ಯಾರು?

ತಮ್ಮ ಇಡೀ ಕ್ರಿಕೆಟ್ ವೃತ್ತಿಜೀವನದಲ್ಲಿ ವಿರಾಟ್ ಕೊಹ್ಲಿ ಅವರೇ ಅತ್ಯಂತ ಪ್ರಭಾವಶಾಲಿ ಟೆಸ್ಟ್ ಆಟಗಾರ ಎಂದು ಅಶ್ವಿನ್ ಹೇಳಿದ್ದಾರೆ. ಇಂಗ್ಲೆಂಡ್ ಸರಣಿಯ ನೆನಪು. ಇಂಗ್ಲೆಂಡ್ ವಿರುದ್ಧದ ಸರಣಿಯ ವೇಳೆ ವಿರಾಟ್ ಪಿತೃತ್ವ ರಜೆಯ ಮೇಲೆ ತೆರಳಿದ್ದಾಗ ಮೈದಾನದಲ್ಲಿ ಅವರ ಕೊರತೆ ತೀವ್ರವಾಗಿ ಕಾಡಿತ್ತು ಎಂದು ಸ್ಮರಿಸಿದ್ದಾರೆ. ಕೆಲವೊಮ್ಮೆ ಒಬ್ಬ ವ್ಯಕ್ತಿಯ ನಿಜವಾದ ಬೆಲೆ ಮತ್ತು ಮಹತ್ವ ಎಷ್ಟಿರುತ್ತದೆ ಎಂಬುದು ಅವರು ದೂರವಿದ್ದಾಗಲೇ ಅರ್ಥವಾಗುತ್ತದೆ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲ ಮೈದಾನದಲ್ಲಿ ಕೊಹ್ಲಿ ತೋರುವ ಉತ್ಸಾಹ, ಆಟದ ಮೇಲಿನ ಉಮೇದುವಾರಿಕೆ ಮತ್ತು ಇಡೀ ತಂಡವನ್ನು ಮುನ್ನಡೆಸುವ ಅವರ ಸಾಮರ್ಥ್ಯವನ್ನು ಅಶ್ವಿನ್ ಮನಸಾರೆ ಶ್ಲಾಘಿಸಿದ್ದಾರೆ. ಸಿಎಸ್‌ಕೆ ತಂಡದ ಆಟಗಾರನಾಗಿದ್ದ ಅಶ್ವಿನ್, ಆರ್‌ಸಿಬಿಯ ಮುಖವಾಗಿರುವ ವಿರಾಟ್ ಕೊಹ್ಲಿ ಬಗ್ಗೆ ನೀಡಿರುವ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಅಶ್ವಿನ್‌ ಶ್ಲಾಘನೆ!

ವಿರಾಟ್ ಕೊಹ್ಲಿ ಕುರಿತು ರವಿಚಂದ್ರನ್ ಅಶ್ವಿನ್ ಭಾವುಕ ಹೇಳಿಕೆ ನೀಡಿದ್ದಾರೆ. ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ವಿರಾಟ್ ಟೆಸ್ಟ್ ಕ್ರಿಕೆಟ್‌ನ ಅತ್ಯಂತ ಪ್ರಭಾವಶಾಲಿ ಆಟಗಾರರಾಗಿದ್ದಾರೆ ಎಂದು ಅಶ್ವಿನ್ ಹೇಳಿದ್ದಾರೆ. ಇಂಗ್ಲೆಂಡ್ ಸರಣಿಯ ಸಂದರ್ಭದಲ್ಲಿ ವಿರಾಟ್ ಪಿತೃತ್ವ ರಜೆಯ (Paternity Leave) ಮೇಲೆ ತೆರಳಿದ್ದಾಗ, ಮೈದಾನದಲ್ಲಿ ಅವರ ಅನುಪಸ್ಥಿತಿ ಕಾಡಿತ್ತು ಎಂದು ಅವರು ಸ್ಮರಿಸಿದ್ದಾರೆ. ಕೆಲವೊಮ್ಮೆ ಒಬ್ಬ ವ್ಯಕ್ತಿಯ ಮಹತ್ವವು ಅವರು ದೂರವಿದ್ದಾಗಲೇ ಅರ್ಥವಾಗುತ್ತದೆ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. ವಿರಾಟ್ ಅವರ ಉತ್ಸಾಹ, ಉಮೇದು ಮತ್ತು ತಂಡವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಅವರು ಮನಸಾರೆ ಶ್ಲಾಘಿಸಿದ್ದಾರೆ.

ಅಭಿಮಾನಿಗಳು ಫಿದಾ!

ಮೈದಾನದಲ್ಲಿ ವಿರಾಟ್ ಕೊಹ್ಲಿ ತೋರುವ ಆಕ್ರಮಣಕಾರಿ ಉತ್ಸಾಹ, ಆಟದ ಮೇಲಿನ ಅಪಾರ ಉಮೇದು ಮತ್ತು ಇಡೀ ತಂಡವನ್ನು ಹುರಿದುಂಬಿಸಿ ಮುನ್ನಡೆಸುವ ಅವರ ನಾಯಕತ್ವದ ಸಾಮರ್ಥ್ಯವನ್ನು ಅಶ್ವಿನ್ ಮನಸಾರೆ ಕೊಂಡಾಡಿದ್ದಾರೆ. ಐಪಿಎಲ್‌ನಲ್ಲಿ ಬದ್ಧ ಎದುರಾಳಿ ತಂಡಗಳಾದ ಸಿಎಸ್‌ಕೆ ಮತ್ತು ಆರ್‌ಸಿಬಿ ಪರ ಆಡಿದ್ದರೂ, ದೇಶಕ್ಕಾಗಿ ಆಡುವಾಗ ಬೆಳೆದ ಈ ಇಬ್ಬರು ದಿಗ್ಗಜರ ನಡುವಿನ ಗೌರವ ಮತ್ತು ಬಾಂಧವ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL 2027: ಈ ಮೂವರು ಅನ್‌ಕ್ಯಾಪ್ಡ್‌ ಆಟಗಾರರನ್ನು ಉಳಿಸಿಕೊಳ್ಳಲು ರೆಡಿಯಾದ ಆರ್‌ಸಿಬಿ..! ಲಿಸ್ಟ್‌ನಲ್ಲಿದೆ ಅಚ್ಚರಿ ಹೆಸರು
‘ಸೆಲೆಕ್ಟರ್‌ ಎಲ್ಲಿ ಕೂತಿದ್ದಾರೋ ಅಲ್ಲಿಗೇ ಹೊಡೆಯಬೇಕು’; ಟೀಂ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡಲು 'ಧೋನಿ ಫಿಲ್ಮ್' ರೀತಿ ಬ್ಯಾಟಿಂಗ್ ಮಾಡಿದ ಸೂರ್ಯ..!