ವಿರಾಟ್ ಕೊಹ್ಲಿಯಷ್ಟು ರೋಹಿತ್ ಆಕ್ರಮಣಕಾರಿಯಲ್ಲವೆಂದ ರವಿಶಾಸ್ತ್ರಿ..!

By Suvarna News  |  First Published Jan 28, 2022, 1:28 PM IST

* ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇಬ್ಬರ ನಾಯಕತ್ವದ ಗುಣ ವರ್ಣಿಸಿದ ರವಿಶಾಸ್ತ್ರಿ

* ಎಲ್ಲಾ ಮಾದರಿಯ ನಾಯಕತ್ವಕ್ಕೆ ಗುಡ್‌ ಬೈ ಹೇಳಿರುವ ವಿರಾಟ್‌ ಕೊಹ್ಲಿ

* ಸೀಮಿತ ಓವರ್‌ಗಳ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ


ನವದೆಹಲಿ(ಜ.28): ವಿರಾಟ್‌ ಕೊಹ್ಲಿ (Virat Kohli) ಹಾಗೂ ರೋಹಿತ್‌ ಶರ್ಮಾ (Rohit Sharma) ಅವರ ನಾಯಕತ್ವ ಗುಣಗಳ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಕೋಚ್‌ ರವಿಶಾಸ್ತ್ರಿ(Ravi Shastri), ಇಬ್ಬರೂ ಭಿನ್ನ ವ್ಯಕ್ತಿತ್ವದ ಆಟಗಾರರು ಎಂದಿದ್ದಾರೆ. ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್‌ ಅಖ್ತರ್‌ (Shoaib Akhtar) ಅವರೊಂದಿಗೆ ಯೂಟ್ಯೂಬ್‌ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ರವಿಶಾಸ್ತ್ರಿ ಈ ಇಬ್ಬರು ಆಟಗಾರರ ನಡುವಿನ ಭಿನ್ನತೆಯನ್ನು ವಿಶ್ಲೇಷಿಸಿದ್ದಾರೆ.

‘ಕೊಹ್ಲಿ ಒಮ್ಮೆ ಮೈದಾನಕ್ಕೆ ಕಾಲಿಟ್ಟರೆ ಅವರು ಯಾರ ಬಗ್ಗೆಯೂ ಯೋಚಿಸುವುದಿಲ್ಲ. ಆದರೆ ಹೊರಗೆ ತುಂಬಾ ಮೃದುವಾಗಿರುತ್ತಾರೆ. ನಾಯಕನಾಗಿದ್ದಾಗ ಇದ್ದ ಅದೇ ಶಕ್ತಿಯೊಂದಿಗೆ ಆಡಬೇಕಾದ ಸವಾಲು ಈಗ ಕೊಹ್ಲಿಗಿದೆ. ಆದರೆ ರೋಹಿತ್‌ ಕೊಹ್ಲಿಗಿಂತ ಭಿನ್ನ. ಅವರು ಯಾವತ್ತೂ ಶಾಂತ ರೂಪದಲ್ಲಿರುತ್ತಾರೆ’ ಎಂದಿದ್ದಾರೆ.

Tap to resize

Latest Videos

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾ (Team India) ಟೆಸ್ಟ್ ಸರಣಿಯನ್ನು ಸೋಲುತ್ತಿದ್ದಂತೆಯೇ ವಿರಾಟ್ ಕೊಹ್ಲಿ ದಿಢೀರ್ ಎನ್ನುವಂತೆ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ಗುಡ್‌ ಬೈ ಹೇಳಿದ್ದರು. ಈಗಾಗಲೇ ರೋಹಿತ್ ಶರ್ಮಾ ಅವರಿಗೆ ಭಾರತ ಸೀಮಿತ ಓವರ್‌ಗಳ ತಂಡಕ್ಕೆ ನಾಯಕತ್ವದ ಪಟ್ಟ ಕಟ್ಟಲಾಗಿದೆ. ಇನ್ನು ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಿರುವುದರಿಂದ ರೋಹಿತ್ ಶರ್ಮಾ ಅವರಿಗೆ ಟೆಸ್ಟ್ ನಾಯಕತ್ವವೂ ಒಲಿಯಬಹುದು ಎಂದು ವರದಿಯಾಗಿದೆ

ರೋಹಿತ್‌ ನಾಯಕತ್ವದಲ್ಲಿ ಮೊದಲ ಬಾರಿ ಕೊಹ್ಲಿ ಆಟ

ವಿಂಡೀಸ್‌ ವಿರುದ್ಧದ ಏಕದಿನ, ಟಿ20 ಸರಣಿಗಳಲ್ಲಿ ಆಡಲು ವಿರಾಟ್‌ ಕೊಹ್ಲಿ ನಿರ್ಧರಿಸಿದ್ದು, ಇದೇ ಮೊದಲ ಬಾರಿಗೆ ಅವರು ರೋಹಿತ್‌ ಶರ್ಮಾ ಅವರ ನಾಯಕತ್ವದಲ್ಲಿ ಕಣಕ್ಕಿಳಿಯಲಿದ್ದಾರೆ. ನಾಯಕತ್ವ ವಿಚಾರದಲ್ಲಿ ಇಬ್ಬರ ನಡುವೆ ಮನಸ್ತಾಪ ಶುರುವಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇಬ್ಬರೂ ವರದಿಗಳನ್ನು ನಿರಾಕರಿಸಿದ್ದರು.

ಎರಡು ಹಂತಗಳಲ್ಲಿ ರಣಜಿ ಟ್ರೋಫಿಗೆ ಚಿಂತನೆ: ಬಿಸಿಸಿಐ

ನವದೆಹಲಿ: ರಣಜಿ ಟ್ರೋಫಿ(Ranji Trophy) ಟೂರ್ನಿಯನ್ನು ಎರಡು ಹಂತಗಳಲ್ಲಿ ಆಯೋಜಿಸಲು ಬಿಸಿಸಿಐ(BCCI) ಚಿಂತನೆ ನಡೆಸಿದೆ ಎಂದು ಖಜಾಂಚಿ ಅರುಣ್‌ ಧುಮಾಲ್‌ ಗುರುವಾರ ಹೇಳಿದ್ದಾರೆ. ಜ.13ರಿಂದ ಆರಂಭಗೊಳ್ಳಬೇಕಿದ್ದ ಟೂರ್ನಿ ಕೋವಿಡ್‌ ಪ್ರಕರಣಗಳು ಹೆಚ್ಚಾದ ಕಾರಣ ಮುಂದೂಡಿಕೆಯಾಗಿತ್ತು. ಇದೀಗ ಕೋವಿಡ್‌ ಕೇಸ್‌ಗಳು ಕಡಿಮೆಯಾಗುತ್ತಿದ್ದು, ಬಿಸಿಸಿಐ ಟೂರ್ನಿ ಆಯೋಜನೆಗೆ ಸಿದ್ಧತೆ ಆರಂಭಿಸಿದೆ.

West Indies Squad: ಭಾರತ ಎದುರಿನ ಏಕದಿನ ಸರಣಿಗೆ ಬಲಿಷ್ಠ ವೆಸ್ಟ್ ಇಂಡೀಸ್ ತಂಡ ಪ್ರಕಟ..!

ಆದರೆ ಮಾರ್ಚ್‌ 27ರಿಂದ ಐಪಿಎಲ್‌ ಆರಂಭಿಸಲು ಮುಂದಾಗಿರುವ ಬಿಸಿಸಿಐ, ಫೆಬ್ರವರಿಯಿಂದ ಮಾರ್ಚ್‌ವರೆಗೂ ಒಂದು ತಿಂಗಳು ಲೀಗ್‌ ಪಂದ್ಯಗಳನ್ನು ಮುಗಿಸಿ, ಐಪಿಎಲ್‌ (IPL 2022) ಮುಗಿದ ಬಳಿಕ ನಾಕೌಟ್‌ ಪಂದ್ಯಗಳನ್ನು ನಡೆಸಲು ಚಿಂತನೆ ನಡೆಸಿದೆ ಎಂದು ಧುಮಾಲ್‌ ಹೇಳಿದ್ದಾರೆ

8 ವರ್ಷಗಳ ಬಳಿಕ ಏಷ್ಯನ್‌ ಗೇಮ್ಸ್‌ನಲ್ಲಿ ಕ್ರಿಕೆಟ್‌

ಬೀಜಿಂಗ್‌: 2022ರ ಏಷ್ಯನ್‌ ಗೇಮ್ಸ್‌ ಸೆ.10ರಿಂದ 25ರ ವರೆಗೆ ಚೀನಾದ ಹ್ಯಾಂಗ್‌ಝುನಲ್ಲಿ ನಡೆಯಲಿದ್ದು, 8 ವರ್ಷಗಳ ಬಳಿಕ ಕ್ರಿಕೆಟ್‌ ಕೂಡಾ ಗೇಮ್ಸ್‌ನ ಭಾಗವಾಗಿರಲಿದೆ. 2010 ಮತ್ತು 2014ರ ಏಷ್ಯನ್‌ ಗೇಮ್ಸ್‌ನಲ್ಲಿ ಕ್ರಿಕೆಟ್‌ ನಡೆಸಲಾಗಿತ್ತು. ಆದರೆ ಇಂಡೋನೇಷ್ಯಾದಲ್ಲಿ ನಡೆದಿದ್ದ 2018ರ ಆವೃತ್ತಿಯಲ್ಲಿ ಕ್ರಿಕೆಟ್‌ ಇರಲಿಲ್ಲ. ಈ ಬಾರಿ ಗೇಮ್ಸ್‌ನಲ್ಲಿ ಟಿ20 ಮಾದರಿಯ ಕ್ರಿಕೆಟ್‌ ಸೇರ್ಪಡೆಗೊಳಿಸಿರುವುನ್ನು ಭಾರತೀಯ ಒಲಿಂಪಿಕ್‌ ಸಂಸ್ಥೆ ಸ್ವಾಗತಿಸಿದೆ. ಇನ್ನು, ಕ್ರಿಕೆಟ್‌ ಜೊತೆಗೆ ಗೇಮ್ಸ್‌ನಲ್ಲಿ ಆಥ್ಲೆಟಿಕ್ಸ್‌, ಈಜು, ಆರ್ಚರಿ, ಬ್ಯಾಡ್ಮಿಂಟನ್‌ ಸೇರಿದಂತೆ ಸುಮಾರು 40 ವಿವಿಧ ಕ್ರೀಡೆಗಳಿದ್ದು, ಇ-ಸ್ಪೋರ್ಟಿಂಗ್‌ ಹಾಗೂ ಬ್ರೇಕ್‌ ಡ್ಯಾನ್ಸಿಂಗ್‌ ಮೊದಲ ಬಾರಿ ಗೇಮ್ಸ್‌ನಲ್ಲಿ ಕಾಣಿಸಿಕೊಳ್ಳಲಿದೆ.

click me!