ಅಹಮ್ಮದಾಬಾದ್ ಹೋಗೋ ವಿಮಾನ ತುಂಬಾ ಆರ್‌ಸಿಬಿ ಫ್ಯಾನ್ಸ್, ಅಚ್ಚರಿಗೊಂಡ ಪೈಲೆಟ್ ಹೇಳಿದ್ದೇನು?

Published : May 30, 2026, 07:58 PM IST
RCB Fever Takes Over Flight

ಸಾರಾಂಶ

ಅಹಮ್ಮದಾಬಾದ್ ವಿಮಾನಗಳಲ್ಲಿ ಇದೀಗ ಆರ್‌ಸಿಬಿ ಅಭಿಮಾನಿಗಳೇ ತುಂಬಿದ್ದಾರೆ. ಎಲ್ಲರು ಫೈನಲ್ ನೋಡಲು ಹೋಗ್ತಿದ್ದೀರಾ ಎಂದು ಪೈಲೆಟ್ ಕೇಳಿದಾಗ ಎಲ್ಲರೂ ಆರ್‌ಸಿಬಿ ಎಂದು ಕೂಗಿದ್ದಾರೆ. ಕೊನೆಯಲ್ಲಿ ಪೈಲೆಟ್ ಹೇಳಿದ ಮಾತಿಗೆ ಇಡೀ ವಿಮಾನವೇ ಜೈಕಾರ ಹಾಕಿದೆ.

ಬೆಂಗಳೂರು (ಮೇ.30) ಐಪಿಎಲ್ ಫೈನಲ್ ಪಂದ್ಯಕ್ಕೆ ಅಭಿಮಾನಿಗಳು ಕಾತರರಾಗಿದ್ದಾರೆ. ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಫೈನಲ್ ಪಂದ್ಯ ನಡೆಯಲಿದೆ. ಇದೀಗ ದೇಶದ ಯಾವುದೇ ಮೂಲೆಯಿಂದ ಅಹಮ್ಮದಾಬಾದ್‌ಗೆ ಹೋಗೋ ವಿಮಾನದಲ್ಲಿ ಆರ್‌ಸಿಬಿ ಅಭಿಮಾನಿಗಳೇ ತುಂಬಿದ್ದಾರೆ. ಈ ಕುರಿತು ವಿಡಿಯೋ ಒಂದು ಭಾರಿ ವೈರಲ್ ಆಗುತ್ತಿದೆ. ಪೈಲೆಟ್ ಮೈಕ್ ಮೂಲಕ ಯಾರೆಲ್ಲಾ ಗುಜರಾತ್ ಟೈಟಾನ್ಸ್ ಫಾಲೋವರ್ಸ್ ಇದ್ದೀರಾ ಎಂದಾಗ ವಿಮಾನದಲ್ಲಿ ಕುಳಿತ ಇಬ್ಬರು ಪ್ರಯಾಣಿಕರು ಕೈ ಎತ್ತಿದ್ದಾರೆ. ಆದರೆ ಆರ್‌ಸಿಬಿ ಎಂದ ತಕ್ಷಣ ಜೋರಾದ ಘೋಷಣೆ, ಶಿಳ್ಳೆ ಮೊಳಗಿದೆ. ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

ಅಹಮ್ಮದಾಬಾದ್ ವಿಮಾನದಲ್ಲಿ ಆರ್‌ಸಿಬಿ ಹವಾ

ಈ ವಿಡಿಯೋ ಬೆಂಗಳೂರಿನಿಂದ ಅಹಮ್ಮದಾಬಾದ್ ವಿಮಾನದಲ್ಲಿ ಪ್ರಯಾಣಿಕ ಹಾಗೂ ಆರ್‌ಸಿಬಿ ಅಭಿಮಾನಿ ತೆಗೆದ ವಿಡಿಯೋ. ಎಲ್ಲಾ ಪ್ರಯಾಣಿಕರ ಹೊತ್ತ ವಿಮಾನ ಇನ್ನೇನು ಟೇಕ್ ಆಫ್ ಆಗಬೇಕು. ಅಷ್ಟರಲ್ಲಿ ಎಂದನಂತೆ ವಿಮಾನದ ಪೈಲೆಟ್ ಮೈಕ್ ಮೂಲಕ ಮಾತನಾಡಿದ್ದಾರೆ.

ಆರ್‌ಸಿಬಿಗೆ ಚಿಯರ್ ಅಪ್ ಮಾಡಲು ಪ್ರಯಾಣ

ಈ ವಿಮಾನ ಬೆಂಗಳೂರಿನಿಂದ ಅಹಮ್ಮದಾಬಾದ್ ತೆರಳುತ್ತಿದೆ. ವಿಶೇಷ ಅಂದರೆ ನಾಳೆ ಅಹಮ್ಮದಾಬಾದ್‌ನಲ್ಲಿ ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ ಎಂದು ಪೈಲೆಟ್ ಮೈಕ್ ಮೂಲಕ ಹೇಳಿದ್ದಾರೆ. ಬಳಿಕ ಯಾರಾದರೂ ಐಪಿಎಲ್ ಫೈನಲ್ ಪಂದ್ಯ ವೀಕ್ಷಿಸಲು ಪ್ರಯಾಣ ಮಾಡುತ್ತಿದ್ದೀರಾ ಎಂದು ಪೈಲೆಟ್ ಪ್ರಶ್ನಿಸಿದ್ದಾರೆ. ಈ ವೇಳೆ ಬಹುತೇಕರು ಹೌದು ಎಂದು ಕೈ ಎತ್ತಿದ್ದಾರೆ. ಇಡೀ ವಿಮಾನದ ಬಹುತೇಕರು ಐಪಿಎಲ್ ಫೈನಲ್ ವೀಕ್ಷಿಸಲು ತೆರಳುತ್ತಿರುವುದು ನಿಜಕ್ಕೂ ಅಚ್ಚರಿ ಎಂದು ಪೈಲೆಟ್ ಪ್ರತಿಕ್ರಿಯಿಸಿದ್ದಾರೆ.ಇದೇ ವೇಳೆ ಕೆಲ ಪ್ರಯಾಣಿಕರು ನಾವು ಆರ್‌ಸಿಬಿ ಅಭಿಮಾನಿಗಳು, ಆರ್‌ಸಿಬಿಗೆ ಚಿಯರ್ ಅಪ್ ಮಾಡಲು ತೆರಳುತ್ತಿರುವುದಾಗಿ ಹೇಳಿದ್ದಾರೆ.

 

 

ಈ ಸಲ ಕಮ್ ನಮ್ದು

ಈ ವಿಮಾನದಲ್ಲಿ ಗುಜರಾಟ್ ಟೈಟಾನ್ಸ್ ಅಭಿಮಾನಿಗಳಿದ್ದೀರಾ ಎಂದು ಪೈಲೆಟ್ ಪ್ರಶ್ನಿಸಿದಾಗ ಇಬ್ಬರು ಪ್ರಯಾಣಿಕರು ಕೈ ಎತ್ತಿದ್ದಾರೆ. ಇದೇ ವೇಳೆ ಆರ್‌ಸಿಬಿ ಎಂದಾಗ ಇಡೀ ವಿಮಾನದ ಪ್ರಯಾಣಿಕರು ಕೈಎತ್ತಿದ್ದಾರೆ. ವಿಮಾನದ ಎಲ್ಲರೂ ಆರ್‌ಸಿಬಿ ಅಭಿಮಾನಿಗಳಿದ್ದೀರಾ. ಹಾಗಾದರೆ ಈ ಸಲ ಕಪ್ ನಮ್ದು ಎಂದು ಪೈಲೆಟ್ ಹೇಳಿದ್ದಾರೆ. ಇದೇ ವೇಳೆ ಪ್ರಯಾಣಿಕರು ಚಿಯರ್‌ಅಪ್ ಮಾಡಿದ್ದಾರೆ.

ಆರ್‌ಸಿಬಿ ಅಭಿಮಾನಿಗಳು ಇದೀಗ ಅಹಮ್ಮದಾಬಾದ್‌ನತ್ತ ಮುಖಮಾಡಿದ್ದಾರೆ. ಆರ್‌ಸಿಬಿ ಹಾಗೂ ಗುಜರಾತ್ ಫೈನಲ್ ಪಂದ್ಯದಲ್ಲಿ ತಂಡಕ್ಕೆ ಚಿಯರ್ ಅಪ್ ಮಾಡಲು ಸಜ್ಜಾಗಿದ್ದಾರೆ. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಆರ್‌ಸಿಬಿ ಟ್ರೋಫಿ ಗೆಲ್ಲೋ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹೀನಾಯ ಸೋಲಿಗೆ ಶ್ರೇಯಸ್‌ ತೀವ್ರ ಅಸಮಾಧಾನ; ತಂಡದ ಸೋಲಲು ಅವರು ಮಾಡಿದ ತಪ್ಪೇ ಕಾರಣ ಎಂದು ಪರೋಕ್ಷವಾಗಿ ಹೇಳಿದ ಅಯ್ಯರ್!
ಬೆಂಗಳೂರು ನಗರ ನನ್ನ ಬದುಕನ್ನೇ ಬದಲಿಸಿತು: ಕರುನಾಡನ್ನು ಕೊಂಡಾಡಿದ ಎಬಿ ಡಿವಿಲಿಯರ್ಸ್