ದೇಶವೇ ಸಂಪೂರ್ಣ ಬಂದ್ ಆಗಿದೆ. ಬಹುತೇಕರು ತಮ್ಮ ತಮ್ಮ ಮನೆಯಲ್ಲಿ ಸ್ವಯಂ ದಿಗ್ಬಂದನಕ್ಕೆ ಒಳಗಾಗಿದ್ದಾರೆ. ಯಾರಿಗೇ ಫೋನ್ ಮಾಡಿದರೂ ಹೇಳುವುದೊಂದೆ ಮಾತು, ಕೊರೋನಾ, ಕೊರೋನಾ, ಏನ್ ಮಾಡ್ಲಿ, ಮನೆಯಿಂದ ಮಾತ್ರ ಹೊರಬರ್ಬೇಡಿ. ಕೊರೋನಾ ಮಹಾಮಾರಿಯ ಆತಂಕ ನಡುವೆಯೂ ಇಂದಿನ ದಿನವನ್ನೂ ಭಾರತೀಯ ಕ್ರಿಕೆಟ್ ಅಭಿಮಾನಿ ಮರೆಯುವುದಿಲ್ಲ. ಕಾರಣ ನಮಗಿಂದು ಯುದ್ಧಗೆದ್ದ ಸಂಭ್ರಮ.
ಬೆಂಗಳೂರು(ಮಾ.30): ಕೊರೋನಾ ಹರಡುವ ಆತಂಕದಿಂದ ಎಲ್ಲರೂ ಮನೆಯಲ್ಲೇ ಇರಲು ಸೂಚಿಸಲಾಗಿದೆ. ಮನೆಯಲ್ಲಿದ್ದ ಮಾತ್ರಕ್ಕೆ ಇಂದಿನ ದಿನ ಮರೆತು ಹೋಗುವುದುಂಟೆ?. ಚಾನ್ಸೇ ಇಲ್ಲ.. ಮಾರ್ಚ್ 30, 2011.. ಅಂದರೆ ಸರಿಯಾಗಿ 9 ವರ್ಷಗಳ ಹಿಂದೆ ಭಾರತೀಯರಿಗೆ ಯುದ್ಧ ಗೆದ್ದ ಸಂಭ್ರಮ. ನಗರ, ಪಟ್ಟಣ, ಹಳ್ಳಿ, ಗಲ್ಲಿ, ಬೀದಿಗಳಲ್ಲಿ ಭಾರತದ ಭಾವುಟ ಹಿಡಿದು ಕುಣಿದು ಕುಪ್ಪಳಿಸಿದ ದಿನ, ಮೆರವಣಿಗೆ ಮಾಡಿದ ದಿನ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ದಿನ. ಈ ದಿನ ಬೇರೇ ಯಾವುದು ಅಲ್ಲ, 2011ರ ವಿಶ್ವಕಪ್ ಟೂರ್ನಿಯಲ್ಲಿ ಬದ್ಧವೈರಿ ಪಾಕಿಸ್ತಾನವನ್ನು ಮಣಿಸಿದ ದಿನ.
2007ರ ಟಿ20 ವಿಶ್ವಕಪ್ ಹೀರೋ, ಇದೀಗ ರಿಯಲ್ ಲೈಫ್‌ನಲ್ಲೂ ಹೀರೋನೇ..!...
undefined
ಭಾರತ ಆತಿಥ್ಯ ವಹಿಸಿದ 2011ರ ವಿಶ್ವಕಪ್ ಟೂರ್ನಿ. ಮೊಹಾಲಿ ಕ್ರೀಡಾಂಗಣದಲ್ಲಿ ಸೆಮಿಫೈನಲ್ ಹೋರಾಟಕ್ಕೆ ವೇದಿಕೆ ಸಜ್ಜಾಗಿತ್ತ. ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿ ಇಡೀ ವಿಶ್ವದ ಗಮನಸೆಳೆದಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಗೆ ಆಸರೆಯಾಗಿದ್ದು ಮತ್ತದೇ ಸಚಿನ್ ತೆಂಡುಲ್ಕರ್.. ಪಾಕಿಸ್ತಾನ ವಿರುದ್ಧ ಪ್ರತಿ ಭಾರಿ ಅಬ್ಬರಿಸಿರವ ಸಚಿನ್ ತೆಂಡುಲ್ಕರ್ ಮತ್ತೆ ಸಿಡಿಲಬ್ಬರ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಸಚಿನ್ ತೆಂಡುಲ್ಕರ್ 85 ರನ್ ಚಚ್ಚಿದರು.
ವಿರೇಂದ್ರ ಸೆಹ್ವಾಗ್ 38, ಗೌತಮ್ ಗಂಭೀರ್ 27, ನಾಯಕ ಎಂ.ಎಸ್.ಧೋನಿ 25, ಸುರೇಶ್ ರೈನಾ ಅಜೇಯ 36 ರನ್ ನೆರವಿನಿಂದ ಟೀಂ ಇಂಡಿಯಾ 9 ವಿಕೆಟ್ ನಷ್ಟಕ್ಕೆ 260 ರನ್ ಸಿಡಿಸಿತು. ಈ ಮೂಲಕ ಪಾಕಿಸ್ತಾನ ತಂಡಕ್ಕೆ 261 ರನ್ ಗುರಿ ನೀಡಲಾಯಿತು. ಇಡೀ ಭಾರತೀಯರ ಪ್ರಾರ್ಥನೆ ಒಂದೇ ಆಗಿತ್ತು. ಫೈನಲ್ ಸೋತರೂ ಪರ್ವಾಗಿಲ್ಲ, ಆದರೆ ಪಾಕ್ ವಿರುದ್ಧ ಗೆಲುವೇ ಬೇಕು ಎಂದು ಪ್ರಾರ್ಥಿಸುತ್ತಿದ್ದರು.
ರನ್ ಚೇಸ‌್‌ಗೆ ಆಗಮಿಸಿದ ಪಾಕಿಸ್ತಾನಕ್ಕೆ ದಿಟ್ಟ ಹೋರಾಟ ನೀಡೋ ಸೂಚನೆ ನೀಡಿತ್ತು. ಆದರೆ ಟೀಂ ಇಂಡಿಯಾ ಬೌಲರ್‌ಗಳಾದ ಜಹೀರ್ ಖಾನ್, ಮನಾಫ್ ಪಟೇಲ್, ಆಶಿಶ್ ನೆಹ್ರಾ, ಹರ್ಭಜನ್ ಸಿಂಗ್ ಹಾಗೂ ಯುವರಾಜ್ ಸಿಂಗ್ ತಲಾ ಎರಡೆರಡು ವಿಕೆಟ್ ಕಬಳಿಸಿ ಪಾಕ್ ಆಟ ಮುಗಿಸಿದರು. ಪಾಕಿಸ್ತಾನ 49.5 ಓವರ್‌ಗಳಲ್ಲಿ 231 ರನ್‌ಗೆ ಆಲೌಟ್ ಆಯಿತು. ಟೀಂ ಇಂಡಿಯಾ 29 ರನ್ ಗೆಲುವು ಸಾಧಿಸಿತು.
ಪಾಕಿಸ್ತಾನ ವಿರುದ್ಧ ಗೆದ್ದ ಟೀಂ ಇಂಡಿಯಾ ನೇರವಾಗಿ ಫೈನಲ್‌ಗೆ ಎಂಟ್ರಿಕೊಟ್ಟಿತು. ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ 28 ವರ್ಷಗಳ ಬಳಿಕ ಟೀಂ ಇಂಡಿಯಾ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತು. ಬಳಿಕ 2015 ಹಾಗೂ 2019ರ ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸಿ ನಿರಾಸೆ ಅನುಭವಿಸಿದೆ.