
ನವದೆಹಲಿ(ಸೆ.24): ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಫಿಟ್ ಇಂಡಿಯಾ ಆಂದೋಲನ ಆರಂಭಿಸಿದ್ದರು. ದೇಶದ ನಾಗರೀಕರ ಉತ್ತಮ ಆರೋಗ್ಯಕ್ಕಾಗಿ ಫಿಟ್ನೆಸ್ ಅತೀ ಅಗತ್ಯ ಅನ್ನೋ ಅರಿವು ಮೂಡಿಸುವ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದಾರೆ. ಈ ಆಂದೋಲನ ಮೂಲಕ ದೇಶದ ಪ್ರತಿಯೊಬ್ಬರಲ್ಲಿ ಫಿಟ್ನೆಸ್ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಆಂದೋಲನ 1 ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಫಿಟ್ನೆಸ್ ಐಕಾನ್ ಜೊತೆ ಚರ್ಚೆ ನಡೆಸಿದ್ದಾರೆ.
ಫಿಟ್ ಇಂಡಿಯಾ ಚಳುವಳಿಗೆ ನೀವೂ ಕೈಜೋಡಿಸಿ
ಕೊರೋನಾ ವೈರಸ್ ಮಾಹಾಮಾರಿ ಸಂದರ್ಭದಲ್ಲಿ ಫಿಟ್ನೆಸೆ ಅಗತ್ಯತೆ ಮತ್ತಷ್ಟು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಮೋದಿ, ಹಲವು ಗಣ್ಯರ ಜೊತೆಗೆ ವರ್ಚುವಲ್ ಮಾತುಕತೆ ನಡೆಸಿದ್ದಾರೆ. ಈ ವೇಳೆ ಟೀಂ ಇಂಡಿಯಾದ ಫಿಟ್ನೆಸ್ ಕುರಿತು ಮೋದಿ, ಕೊಹ್ಲಿ ಬಳಿ ಪ್ರಶ್ನೆ ಕೇಳಿದ್ದಾರೆ. ನಾನು ಕೇಳಿದ್ದೇನೆ ಟೀಂ ಇಂಡಿಯಾದ ಯೋ ಯೋ ಟೆಸ್ಟ್ ಕುರಿತು. ಈ ಟೆಸ್ಟ್ ಯಾವ ರೀತಿ ಇದೆ, ಹೇಗೆ ಸಹಕಾರಿಯಾಗಿದೆ ಎಂದು ಮೋದಿ ಕೇಳಿದ್ದಾರೆ.
ಟೀಂ ಇಂಡಿಯಾ ಕ್ರಿಕೆಟಿಗರು ಅತ್ಯಂತ ಪ್ರತಿಭಾಶಾಲಿಗಳಾಗಿದ್ದಾರೆ. ಕೌಶಲ್ಯ ಹೊಂದಿದ್ದಾರೆ. ಆದರೆ ಫಿಟ್ನೆಸ್ ವಿಚಾರದಲ್ಲಿ ನಾವೆಲ್ಲಾ ಹಿಂದೆ ಉಳಿದಿದ್ದೆವು. ಇದರಿಂದ ಮೈದಾನದಲ್ಲಿ ನಿರೀಕ್ಷೆಗೆ ತಕ್ಕೆ ಪ್ರದರ್ಶನ ನೀಡಲು ಸಾಧ್ಯವಾಗುತ್ತಿರಲಿಲ್ಲ. ಅದರಲ್ಲೂ ಪ್ರಮುಖವಾಗಿ ಟೆಸ್ಟ್ ಕ್ರಿಕೆಟ್ ಸತತ 5 ದಿನ ಫಿಟ್ನೆಸ್ ಇಲ್ಲದೆ ಆಡುವುದು ಕಷ್ಟ. ಹೀಗಾಗಿ ಟೀಂ ಇಂಡಿಯಾದಲ್ಲಿ ಯೋ ಯೋ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಇದರಿಂದ ನಮ್ಮೆಲ್ಲರ ಫಿಟ್ನೆಸ್ ಬದಲಾಗಿದೆ. ವಿಶ್ವದ ಇತರ ತಂಡಕ್ಕೆ ಸರಿಸಮಾನವಾದ ಫಿಟ್ನೆಸ್ ಹೊಂದಿದ್ದೆವೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ನಮ್ಮ ವೇಗಿಗಳು ಇತರ ಎಲ್ಲಾ ತಂಡದ ವೇಗಿಗಳಿಂತ ಉತ್ತಮವಾಗಿದ್ದಾರೆ. ನಮ್ಮಲ್ಲಿ ನಾವು ಪರಿವರ್ತನೆ ಬಯಸಿದರೆ ಮಾತ್ರ ಸಾಧ್ಯ. ಇದರಿಂದ ದೈಹಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯವಿದೆ. ಕ್ರೀಡಾಪಟುವಿಗೆ ಎರಡೂ ಅತೀ ಮುಖ್ಯವಾಗಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಕೊಹ್ಲಿ ಜೊತೆ ಮಾತನಾಡಿದ ಪ್ರಧಾನಿ ಮೋದಿ, ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾಗೆ ಶುಭಾಶಯ ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.