ಫವಾದ್‌ ಆಲಂ ಆಕರ್ಷಕ ಶತಕ: ಪಾಕ್‌ಗೆ ಇನ್ನಿಂಗ್ಸ್‌ ಮುನ್ನಡೆ

Suvarna News   | Asianet News
Published : Jan 28, 2021, 10:23 AM IST
ಫವಾದ್‌ ಆಲಂ ಆಕರ್ಷಕ ಶತಕ: ಪಾಕ್‌ಗೆ ಇನ್ನಿಂಗ್ಸ್‌ ಮುನ್ನಡೆ

ಸಾರಾಂಶ

ದಕ್ಷಿಣ ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಪಾಕಿಸ್ತಾನ ತಂಡ ಹರಿಣಗಳಿಗೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಕರಾಚಿ(ಜ.28): ಫವಾದ್‌ ಅಲಂ ಬಾರಿಸಿದ ಆಕರ್ಷಕ ಶತಕ(109)ದ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದೆ. ದಶಕಗಳ ಕಾಲ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದ ಆಲಂ, ಕಮ್‌ಬ್ಯಾಕ್‌ ಮಾಡಿ ಕೆಲವೇ ದಿನಗಳಲ್ಲಿ ಎರಡು ಶತಕ ಬಾರಿಸುವ ಮೂಲಕ ಬ್ಯಾಟ್‌ ನಿಂದಲೇ ಉತ್ತರ ನೀಡಿದ್ದಾರೆ. 2ನೇ ದಿನದ ಅಂತ್ಯಕ್ಕೆ ಪಾಕಿಸ್ತಾನ 8 ವಿಕೆಟ್‌ ನಷ್ಟಕ್ಕೆ 308 ರನ್‌ ಗಳಿಸಿದ್ದು, 88 ರನ್‌ ಮುನ್ನಡೆ ಪಡೆದಿದೆ.

ಮೊದಲ ದಿನದಾಟದಂತ್ಯಕ್ಕೆ 33 ರನ್‌ ಗಳಿಸಿ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಪಾಕಿಸ್ತಾನ ತಂಡಕ್ಕೆ ಅನುಭವಿ ಬ್ಯಾಟ್ಸ್‌ಮನ್‌ ಫವಾದ್ ಆಲಂ ಹಾಗೂ ಅಜರ್‌ ಅಲಿ ಆಸರೆಯಾದರು. 220 ಎಸೆತಗಳನ್ನು ಎದುರಿಸಿ ಸಿಕ್ಸರ್‌ನೊಂದಿಗೆ ಆಲಂ ತಮ್ಮ ವೃತ್ತಿಜೀವನದ ಮೂರನೇ ಶತಕ ಪೂರೈಸಿ ಸಂಭ್ರಮಿಸಿದರು. 

ಫವಾದ್‌ ಆಲಂ ಒಟ್ಟು 245 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 109 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರೆ, ಅಜರ್‌ ಅಲಿ(51) ಹಾಗೂ ಫಾಹಿಮ್ ಅಶ್ರಫ್‌(64) ಸಮಯೋಚಿತ ಅರ್ಧಶತಕ ಬಾರಿಸುವ ಮೂಲಕ ತಂಡ ದಕ್ಷಿಣ ಆಫ್ರಿಕಾ ವಿರುದ್ದ ಮೊದಲ ಇನಿಂಗ್ಸ್‌ ಮುನ್ನಡೆ ಸಾಧಿಸಲು ನೆರವಾದರು.

ಟೆಸ್ಟ್‌: ಮೊದಲ ದಿನವೇ ಪಾಕ್‌ ವಿರುದ್ಧ ಹರಿಣಗಳ ಮೇಲುಗೈ

ಸದ್ಯ ಪಾಕಿಸ್ತಾನ ಪರ ಹಸನ್‌ ಅಲಿ(11) ಹಾಗೂ ನೂಮನ್ ಅಲಿ(6) ಮೂರನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಪರ ಕಗಿಸೋ ರಬಾಡ, ಆನ್ರಿಚ್‌ ನೋಕಿಯೇ, ಲುಂಗಿ ಎಂಗಿಡಿ, ಕೇಶವ್ ಮಹರಾಜ್ ತಲಾ 2 ವಿಕೆಟ್ ಪಡೆದಿದ್ದಾರೆ. 

ಸ್ಕೋರ್‌: ದ.ಆಫ್ರಿಕಾ 220 
ಪಾಕಿಸ್ತಾನ 308/8
(*ಎರಡನೇ ದಿನದಾಟ ಮುಕ್ತಾಯದ ವೇಳೆಗೆ)

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ರೀನ್‌ನಿಂದ ಮೊರಿಸ್‌ವರೆಗೆ, ಐಪಿಎಲ್‌ ಮಿನಿ ಹರಾಜಿನ ಅತ್ಯಂತ ದುಬಾರಿ ಪ್ಲೇಯರ್ಸ್‌!
ಕಡಿಮೆ ಮೊತ್ತಕ್ಕೆ ಆರ್‌ಸಿಬಿ ತೆಕ್ಕೆಗೆ ಜಾರಿದ ಸ್ಟಾರ್ ಆಲ್ರೌಂಡರ್! ಹಾಲಿ ಚಾಂಪಿಯನ್ ಬೆಂಗಳೂರು ತಂಡಕ್ಕೆ ಜಾಕ್‌ಪಾಟ್