ಜಹೀರ್‌ ಅವಮಾನಿಸಿದ ಪಾಂಡ್ಯಾಗೆ ಸರಿಯಾಗಿ ಜಾಡಿಸಿದ ಫ್ಯಾನ್ಸ್!

Published : Oct 08, 2019, 03:14 PM ISTUpdated : Oct 09, 2019, 04:36 PM IST
ಜಹೀರ್‌ ಅವಮಾನಿಸಿದ ಪಾಂಡ್ಯಾಗೆ ಸರಿಯಾಗಿ ಜಾಡಿಸಿದ ಫ್ಯಾನ್ಸ್!

ಸಾರಾಂಶ

ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಕಾಫಿ ವಿತ್ ಕರಣ್ ಕಾರ್ಯಕ್ರಮದ ಬಳಿಕ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದ ಪಾಂಡ್ಯ, ಇದೀಗ ಎಲ್ಲೆ ಮೀರಿದ್ದಾರೆ.  ಟೀಂ ಇಂಡಿಯಾ ವೇಗಿ ಜಹೀರ್ ಖಾನ್ ಅವಮಾನಿಸೋ ಮೂಲಕ ಅಭಿಮಾನಿಗಳ ಆಕ್ರೋಷಕ್ಕೆ ತುತ್ತಾಗಿದ್ದಾರೆ.

"

ಬರೋಡ(ಅ.08): ಟೀಂ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್ 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಭಾರತ ಕಂಡ ಅತ್ಯಂತ ಶ್ರೇಷ್ಠ ವೇಗಿಗೆ, ದಿಗ್ಗಜ ಕ್ರಿಕೆಟಿಗರು ಸೇರಿದಂತೆ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ಜಹೀರ್‌ಗೆ ಹುಟ್ಟು ಹಬ್ಬದ ವಿಶ್ ವೇಳೆ ಟೀಂ ಇಂಡಿಯಾ ಅಲ್ರೌಂಡರ್ ಹಾರ್ದಿಕ್ ಪಾಂಡ್ಯ ಧಿಮಾಕು ತೋರಿಸಿದ್ದಾರೆ. ಪಾಂಡ್ಯ ನಡೆಗೆ ಅಭಿಮಾನಿಗಳು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

 

ಇದನ್ನೂ ಓದಿ: ಜಹೀರ್ ಖಾನ್‌ಗೆ 41ನೇ ಹುಟ್ಟುಹಬ್ಬದ ಸಂಭ್ರಮ

ಜಹೀರ್ ಖಾನ್‌ಗೆ ಟ್ವೀಟ್ ಮೂಲಕ ಶುಭಕೋರಿದ ಪಾಂಡ್ಯ, ಜಹೀರ್ ಎಸೆತಕ್ಕೆ ಸಿಕ್ಸರ್ ಸಿಡಿಸೋ ವಿಡಿಯೋವನ್ನು ಪೋಸ್ಟ್  ಮಾಡಿದ್ದಾರೆ, "ನಾನು ಸಿಕ್ಸರ್ ಭಾರಿಸಿದಂತೆ ನೀವೂ ಕೂಡ ಚೆಂಡನ್ನು ಮೈದಾನದ ಹೊರಗೆ ಕಳುಹಿಸುವಿರಿ ಎಂದು ಭಾವಿಸಿದ್ದೇನೆ". ಇದು  ಹಾರ್ದಿಕ್ ಪಾಂಡ್ಯ ವಿಡಿಯೋಗೆ ನೀಡಿರುವ ವಿವರಣೆ. ಪಾಂಡ್ಯ ಟ್ವೀಟ್ ಮೂಲಕ ಶುಭಕೋರಿದ ಬೆನ್ನಲ್ಲೇ ಅಭಿಮಾನಿಗಳು ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆನ್ನಿನ ಜೊತೆಗೆ ಮೆದುಳಿಗೂ ಶಸ್ತ್ರಚಿಕಿತ್ಸೆ; ಹಾರ್ದಿಕ್ ಟ್ರೋಲ್ ಮಾಡಿದ ರಾಹುಲ್!

ಹಾರ್ದಿಕ್ ಪಾಂಡ್ಯ, ದಿಗ್ಗಜ ಜಹೀರ್‌ ಖಾನ್‌ಗೆ ಅವಮಾನ ಮಾಡಿದ್ದಾರೆ. ಹಣ, ಹೆಸರು ಬಂದರೂ ನಿಮ್ಮ ನಡತೆ ಬದಲಾಗುವುದಿಲ್ಲ ಅನ್ನೋದಕ್ಕೆ ಪಾಂಡ್ಯ ಉತ್ತಮ ಊದಾಹರಣೆ. 2003,2007 ಹಾಗೂ 2011ರಲ್ಲಿ ಜಹೀರ್ ಖಾನ್ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ದಾಖಲೆ ಬರೆದಿದ್ದಾರೆ. ವಿಶ್ವಕಪ್‌ನಲ್ಲಿ ಪಾಂಡ್ಯ ಏನು ಮಾಡಿದ್ದಾರೆ ಎಂದು ಅಭಿಮಾನಿಗಳು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

 


ಸೌತ್ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಯಿಂದ ವಿಶ್ರಾಂತಿ ಪಡೆದಿರುವ ಹಾರ್ದಿಕ್  ಪಾಂಡ್ಯ, ಬೆನ್ನು ನೋವಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ. ಸದ್ಯ ವಿಶ್ರಾಂತಿಗೆ ಜಾರಿರುವ ಪಾಂಡ್ಯ, ನವೆಂಬರ್‌ನಲ್ಲಿ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೂ ಅಲಭ್ಯರಾಗುವ ಸಾಧ್ಯತೆ ಇದೆ.

ಅಕ್ಟೋಬರ್ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?