* ಐಪಿಎಲ್‌ನಲ್ಲಿ ಸಾಲು ಸಾಲು ವೈಫಲ್ಯ ಅನುಭವಿಸುತ್ತಿದ್ದಾರೆ ವಿರಾಟ್ ಕೊಹ್ಲಿ
* ಕಳೆದೆರಡು ಐಪಿಎಲ್‌ನಲ್ಲಿ ಶೂನ್ಯ ಸುತ್ತಿರುವ ಮಾಜಿ ನಾಯಕ ವಿರಾಟ್
* ಕೊಹ್ಲಿ ಕ್ಯಾಪ್ಟನ್ಸಿ ತ್ಯಜಿಸಿದ್ರೂ ಬ್ಯಾಕ್ಲಕ್ ಬಿಟ್ಟು ಹೋಗಿಲ್ಲ
ಬೆಂಗಳೂರು(ಏ.25): ಅದ್ಯಾಕೋ ಈ ಬಾರಿ ಐಪಿಎಲ್‌ನಲ್ಲಿ ಕಿಂಗ್ ಕೊಹ್ಲಿಗೆ ಅದೃಷ್ಟ ಕೈಕೊಟ್ಟಿದೆ. ಕ್ಯಾಪ್ಟನ್ಸಿ ತ್ಯಜಿಸಿದ್ರೂ ಬ್ಯಾಕ್ಲಕ್ ಬಿಟ್ಟು ಹೋಗಿಲ್ಲ. ಆರ್‌ಸಿಬಿ ತಂಡ ಉತ್ತಮ ಪ್ರದರ್ಶನ ನೀಡ್ತಿದ್ರೂ ವಿರಾಟ್ ಕೊಹ್ಲಿ (Virat Kohli) ಮಾತ್ರ ರನ್ ಬರ ಎದುರಿಸ್ತಿದ್ದಾರೆ. ಪಂದ್ಯ ನಡೆದಾಗಲೆಲ್ಲಾ ವಿರಾಟ್ ಆರ್ಭಟಿಸ್ತಾರೆ ಅಂತಾ ಫ್ಯಾನ್ಸ್ ಬಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಆದ್ರೆ ಆ ಆಸೆಗೆ ಪ್ರತಿ ಪಂದ್ಯದಲ್ಲಿ ವಿರಾಟ್ ಕೊಳ್ಳಿಯಿಡ್ತಿದ್ದಾರೆ. ಹೌದು, ಮೊದಲ ಆರು ಪಂದ್ಯಗಳಲ್ಲಿ ನೀರಸ ಆಟವಾಡಿ ಕೊಹ್ಲಿ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ರು. ತಂಡದಿಂದ ವಿರಾಟ್ಗೆ ಗೇಟ್ಪಾಸ್ ಕೊಡ್ಬೇಕು ಅನ್ನೋ ಟಾಕ್ಸ್ ಕೇಳಿ ಬಂದಿತ್ತು. ಈಗ ಆ ಪಿತ್ತ ಮತ್ತಷ್ಟು ನೆತ್ತಿಗೇರುವಂತೆ ಮಾಡಿದ್ದಾರೆ. ಮೊನ್ನೆ ಹೈದ್ರಬಾದ್ ವಿರುದ್ಧ ಕೊಹ್ಲಿ ಮತ್ತೆ ಸೊನ್ನೆ ಸುತ್ತುವ ಮೂಲಕ ಫ್ಯಾನ್ಸ್ ಕೆರಳಿ ಕೆಂಡಾಗುವಂತೆ ಮಾಡಿದ್ದಾರೆ.
ಕೆರಳಿದ ಫ್ಯಾನ್ಸ್ನಿಂದ ಕೊಹ್ಲಿಗೆ ‘ಡಕ್‌ಪ್ಪ’ ಎಂದು ನಾಮಕರಣ:
ಲಖನೌ ಸೂಪರ್ ಜೈಂಟ್ಸ್ (Lucknow Super Giants) ವಿರುದ್ಧ ಡಕೌಟ್ ಆಗಿದ್ದ ಕೊಹ್ಲಿ, ಸನ್‌ರೈಸರ್ಸ್ ಹೈದ್ರಬಾದ್ (Sunrisers Hyderabad) ವಿರುದ್ಧವೂ ಅದನ್ನೇ ಮುಂದುವರಿಸಿದ್ರು. ಎದುರಿಸಿದ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದ್ರು. ಆ ಮೂಲಕ ಬ್ಯಾಕ್ ಟು ಬ್ಯಾಕ್ ಡಕೌಟ್ ಲಿಸ್ಟ್ಗೆ ಸೇರಿಕೊಂಡ್ರು. ಇನ್ನು ವಿರಾಟ್ ಸೊನ್ನೆ ಸುತ್ತುತ್ತಿರೋದನ್ನ ಕಂಡು ಅಭಿಮಾನಿಗಳು ಕೆರಳಿದ್ದು, ಕೊಹ್ಲಿಯನ್ನ ‘ಡಕಪ್ಪ’ ಎಂದು ಟ್ರೋಲ್ ಮಾಡ್ತಿದ್ದಾರೆ.
ಕೊಹ್ಲಿಯಿಂದ 5 ವರ್ಷದ ಡಕೌಟ್ ಚಾಲೆಂಜ್:
2017, ಏಫ್ರಿಲ್ 23. ಈ ದಿನವನ್ನ ಆರ್‌ಸಿಬಿ ಫ್ಯಾನ್ಸ್ (RCB Fans) ಎಂದೂ ಮರೆಯಲು ಸಾಧ್ಯವಿಲ್ಲ. ಯಾಕಂದ್ರೆ ಆರ್‌ಸಿಬಿ ತಂಡ ಈ ದಿನ ಐಪಿಎಲ್ ಹಿಸ್ಟರಿಯಲ್ಲಿ ಜಸ್ಟ್ 49 ರನ್ಗೆ ಆಲೌಟಾಗಿತ್ತು. ಆ ಪಂದ್ಯದಲ್ಲಿ ಕೊಹ್ಲಿ ಸೊನ್ನೆ ಸುತ್ತಿದ್ರು. ನಿನ್ನೆ ಪಂದ್ಯದಲ್ಲೂ ವಿರಾಟ್ ಡಕೌಟ್ ಆಗುವ ಮೂಲಕ ಕೊಹ್ಲಿ ಐದು ವರ್ಷದ ಡಕೌಟ್ ಚಾಲೆಂಜ್ ಗೆದ್ದಿದ್ದಾರೆ ಎಂದು ಫ್ಯಾನ್ಸ್ ಕಾಲೆಳೆಯುತ್ತಿದ್ದಾರೆ. ಇನ್ನು ಇಷ್ಟಕ್ಕೆ ಸುಮ್ಮನಾಗದ ಫ್ಯಾನ್ಸ್, ಎಬಿಡಿ ಐಪಿಎಲ್ ಆರಂಭಕ್ಕೂ ಮುನ್ನ ಕೊಹ್ಲಿ ಈ ಸಲ 600 ರನ್ ಸಿಡಿಸಲಿದ್ದಾರೆ ಎಂದಿದ್ರು. ಸದ್ಯ ಅದೇ ಮಾತು ಫ್ಯಾನ್ಸ್ಗೆ ಅಸ್ತ್ರವಾಗಿದ್ದು, ಎಬಿಡಿ ನೀವು ಜೋಕ್ಸ್ ಮಾಡ್ಬೇಡಿ ಎನ್ನುವ ಮೂಲಕ ಕೊಹ್ಲಿಯನ್ನ ಕಿಚಾಯಿಸಿದ್ದಾರೆ.
IPL 2022: ವಿರೋಧಿಗಳೇ RCB 68ಕ್ಕೆ ಆಲೌಟಾದ ಮಾತ್ರಕ್ಕೆ ಖುಷಿಪಡಬೇಡಿ..!
8 ಇನ್ನಿಂಗ್ಸ್, 119 ರನ್, 48 ಬೆಸ್ಟ್..:
ಪ್ರಸಕ್ತ ಐಪಿಎಲ್‌ನಲ್ಲಿ ಕೊಹ್ಲಿ ದಯನೀಯ ವೈಫಲ್ಯ ಅನುಭವಿಸ್ತಿದ್ದಾರೆ. ಈವರೆಗೆ ಆಡಿದ 8 ಪಂದ್ಯಗಳಿಂದ ಬರೀ 119 ರನ್ ಗಳಿಸಿದ್ದಾರೆ. 2 ಬಾರಿ ಡಕೌಟ್ ಆದ್ರೆ 4 ಬಾರಿ ಎರಡಂಕಿ ದಾಟಿದ್ದಾರೆ. ಇನ್ನು 48 ಇವರ ಬ್ಯಾಟ್ನಿಂದ ಮೂಡಿ ಬಂದ ಈವರೆಗಿನ ಬೆಸ್ಟ್ ಸ್ಕೋರ್ ಆಗಿದೆ.
Apparently Best caption ever in cricketing history for Virat kohli 🤣🤣🤣 pic.twitter.com/7k7MSs0tN6
— SCOTT_DHORA (@BLOODLINE45)ಸದ್ಯ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 8 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 3 ಸೋಲುಗಳೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇದೀಗ ಏಪ್ರಿಲ್ 26ರಂದು ಆರ್‌ಸಿಬಿ ತಂಡವು ಬಲಿಷ್ಠ ರಾಜಸ್ಥಾನ ರಾಜಸ್ಥಾನ ರಾಯಲ್ಸ್ ಸವಾಲು ಸ್ವೀಕರಿಸಲು ಸಜ್ಜಾಗಿದೆ.