ಡುಪ್ಲೆಸಿಸ್ ಸ್ಫೋಟಕ ಬ್ಯಾಟಿಂಗ್: KKRಗೆ ಬೃಹತ್ ಟಾರ್ಗೆಟ್!

By Suvarna NewsFirst Published Apr 21, 2021, 9:22 PM IST
Highlights

ಫಾಫ್ ಡುಪ್ಲೆಸಿಸ್ ಸ್ಫೋಟಕ ಬ್ಯಾಟಿಂಗ್‌ನಿಂಂದ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕರ ಉತ್ತಮ ಪ್ರದರ್ಶನ ನೀಡಿದೆ.  ಆರಂಭಿಕ ಬ್ಯಾಟ್ಸ್‌ಮನ್‌ಗಳ ಹಾಫ್ ಸೆಂಚುರಿಯಿಂದ ಚೆನ್ನೈ 220 ರನ್ ಕಲೆಹಾಕಿದೆ. 

ಮುಂಬೈ(ಏ.21):  ಆರಂಭಿಕ ರುತುರಾಜ್ ಗಾಯಕ್ವಾಡ್ ಹಾಗೂ ಫಾಫ್ ಡುಪ್ಲೆಸಿಸ್ ಜೊತೆಯಾಟ, ಮೊಯಿನ್ ಆಲಿ ಸ್ಫೋಟಕ ಬ್ಯಾಟಿಂಗ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನೆರವಾಯಿತು. ಹೀಗಾಗಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸಿಎಸ್‌ಕೆ 3 ವಿಕೆಟ್ ಕಳೆದುಕೊಂಡು 220 ರನ್ ಸಿಡಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಆರಂಭ ಪಡೆಯಿತು. ಗಾಯಕ್ವಾಡ್ ಹಾಗೂ ಡುಪ್ಲೆಸಿಸ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. 42 ಎಸೆತದಲ್ಲಿ ರುತುರಾಜ್ 64 ರನ್ ಸಿಡಿಸಿ ಔಟಾದರು. ಇನ್ನು ಮೊಯಿನ್ ಆಲಿ ಜೊತೆ ಸೇರಿದ ಡುಪ್ಲೆಸಿಸ್ ಹೋರಾಟ ಮುಂದುವರಿಸಿದರು.

ಮೊಯಿನ್ ಆಲಿ 25 ರನ್ ಸಿಡಿಸಿ ಔಟಾದರು. ಬ್ಯಾಟಿಂಗ್ ಆರ್ಡರನ್‌ನಲ್ಲಿ ಬಡ್ತಿ ಪಡೆದ ಕಣಕ್ಕಿಳಿದ ನಾಯಕ ಎಂ.ಎಸ್.ಧೋನಿ ಉತ್ತಮ ಸಾಥ್ ನೀಡಿದರು. ಧೋನಿ 17 ರನ್ ಸಿಡಿಸಿ ಔಟಾದರು. ಆದರೆ ಡುಪ್ಲೆಸಿಸ್ ಅಬ್ಬರ ಮುಂದುವರಿಯಿತು.

ರವೀಂದ್ರ ಜಡೇಜಾ ಜೊತೆ ಇನ್ನಿಂಗ್ಸ್ ಮುಂದುವರಿಸಿದ ಡುಪ್ಲೆಸಿಸ್ ಚೆನ್ನೈ ಬೃಹತ್ ಮೊತ್ತಕ್ಕೆ ನೆರವಾದರು. ಡುಪ್ಲೆಸಿಸ್ 60 ಎಸೆತದಲ್ಲಿ ಅಜೇಯ 95 ರನ್ ಸಿಡಿಸಿದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ 3 ವಿಕೆಟ್ ನಷ್ಟಕ್ಕೆ 220 ರನ್ ಸಿಡಿಸಿತು. 

click me!