Eng vs Pak ಪಾಕ್ ವಿರುದ್ದ ಇಂಗ್ಲೆಂಡ್ 3-0 ಟೆಸ್ಟ್ ಸರಣಿ ಕ್ಲೀನ್‌ಸ್ವೀಪ್‌; ಬಾಬರ್ ಪಡೆಗೆ ಮುಖಭಂಗ..!

By Kannadaprabha NewsFirst Published Dec 21, 2022, 9:23 AM IST
Highlights

ಇಂಗ್ಲೆಂಡ್ ಎದುರಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನಕ್ಕೆ 8 ವಿಕೆಟ್‌ಗಳ ಸೋಲು
3 ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿದ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್
ತವರಿನಲ್ಲಿ ಮೊದಲ ಬಾರಿಗೆ 0-3 ಅಂತರದಲ್ಲಿ ಟೆಸ್ಟ್ ಸರಣಿ ಸೋತ ಪಾಕಿಸ್ತಾನ

ಕರಾಚಿ: 17 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಟೆಸ್ಟ್‌ ಸರಣಿ ಆಡಿದ ಇಂಗ್ಲೆಂಡ್‌ 3 ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿದೆ. 3ನೇ ಟೆಸ್ಟ್‌ ಗೆಲ್ಲಲು 167 ರನ್‌ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್‌ಗೆ 4ನೇ ದಿನವಾದ ಮಂಗಳವಾರ ಗೆಲ್ಲಲು ಕೇವಲ 55 ರನ್‌ ಬೇಕಿತ್ತು. ಇಂಗ್ಲೆಂಡ್‌ 38 ನಿಮಿಷಗಳಲ್ಲೇ ಗುರಿ ತಲುಪಿತು. ಇಂಗ್ಲೆಂಡ್‌ಗಿದು ಕೊನೆ 10 ಟೆಸ್ಟ್‌ಗಳಲ್ಲಿ 9ನೇ ಗೆಲುವು.

ಮೊದಲ ಇನ್ನಿಂಗ್‌್ಸನಲ್ಲಿ ಪಾಕಿಸ್ತಾನದ 304 ರನ್‌ಗೆ ಉತ್ತರವಾಗಿ ಇಂಗ್ಲೆಂಡ್‌ 354 ರನ್‌ ಕಲೆಹಾಕಿತ್ತು. 2ನೇ ಇನ್ನಿಂಗ್ಸಲ್ಲಿ 216 ರನ್‌ಗೆ ಕುಸಿದ ಪಾಕಿಸ್ತಾನ, ಇಂಗ್ಲೆಂಡ್‌ಗೆ 167 ರನ್‌ಗಳ ಸುಲಭ ಗುರಿ ನೀಡಿತ್ತು. ಇಂಗ್ಲೆಂಡ್‌ ಪರ 2ನೇ ಇನ್ನಿಂಗ್ಸಲ್ಲಿ ಬೆನ್‌ ಡಕ್ಕೆಟ್‌ ಔಟಾಗದೆ 82 ರನ್‌ ಗಳಿಸಿದರು.

England complete a 3-0 clean sweep with a dominant win in Karachi 👏 | | 📝 https://t.co/y5SkcqY16s pic.twitter.com/Ny7Q4EIrE1

— ICC (@ICC)

ಸ್ಕೋರ್‌: ಪಾಕಿಸ್ತಾನ 304 ಹಾಗೂ 216, ಇಂಗ್ಲೆಂಡ್‌ 354 ಹಾಗೂ 170/2

ತವರಲ್ಲಿ ಪಾಕ್‌ಗೆ ಮೊದಲ 0-3 ಸರಣಿ ಸೋಲು!

ಪಾಕಿಸ್ತಾನ ತಂಡ ತವರಿನಲ್ಲಿ ಮೊದಲ ಬಾರಿಗೆ 3 ಪಂದ್ಯಗಳ ಟೆಸ್ಟ್‌ ಸರಣಿಯನ್ನು 0-3ರಲ್ಲಿ ಸೋತಿದೆ. ಅಲ್ಲದೇ ತಂಡಕ್ಕಿದು ತವರಿನಲ್ಲಿ ಸತತ 4ನೇ ಟೆಸ್ಟ್‌ ಸೋಲು. ಈ ವರ್ಷದ ಆರಂಭದಲ್ಲಿ ಆಸ್ಪ್ರೇಲಿಯಾ ವಿರುದ್ಧದ 2 ಪಂದ್ಯಗಳ ಸರಣಿಯ ಕೊನೆ ಪಂದ್ಯದಲ್ಲಿ ಸೋಲುಂಡಿತ್ತು.

ಹೊರಗೆ ಊಟಕ್ಕೆ ಹೋಗಲು ಬಿಡದ್ದಕ್ಕೆ ಸಿಟ್ಟಾದ ಬಾಬರ್‌!

ಕರಾಚಿ: ಭದ್ರತೆ ಕಾರಣದಿಂದಾಗಿ ತಮ್ಮನ್ನು ಹೊರಗೆ ಊಟಕ್ಕೆ ಹೋಗಲು ಬಿಡದ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕ ಬಾಬರ್‌ ಆಜಂ ಪೊಲೀಸರ ಜೊತೆ ಗಲಾಟೆ ಮಾಡಿಕೊಂಡ ಪ್ರಸಂಗ ಇತ್ತೀಚೆಗೆ ನಡೆದಿದೆ. ಇಂಗ್ಲೆಂಡ್‌ ವಿರುದ್ಧ 3ನೇ ಟೆಸ್ಟ್‌ನ ಮೊದಲ ದಿನದಾಟ ಮುಕ್ತಾಯಗೊಂಡ ಬಳಿಕ ಆ ದಿನ ರಾತ್ರಿ ಬಾಬರ್‌ ತಮ್ಮ ಸಹ ಆಟಗಾರರ ಜೊತೆ ಹೊರಗೆ ಊಟಕ್ಕೆ ಹೋಗಲು ಮುಂದಾದಾಗ ಭದ್ರತಾ ಸಿಬ್ಬಂದಿ ಅವರನ್ನು ತಡೆದಿದ್ದಾರೆ. 

Ind vs Ban ಭಾರತ ಎದುರಿನ ಎರಡನೆ ಟೆಸ್ಟ್ ಪಂದ್ಯಕ್ಕೆ 15 ಆಟಗಾರರನ್ನೊಳಗೊಂಡ ಬಾಂಗ್ಲಾದೇಶ ತಂಡ ಪ್ರಕಟ

ಪಾಕಿಸ್ತಾನಿ ಆಟಗಾರರು ತಾವು ಉಳಿದುಕೊಂಡಿರುವ ಹೋಟೆಲ್‌ ಬಿಟ್ಟು ಹೊರಹೊಗಬೇಕಿದ್ದರೆ ಮುಂಚಿತವಾಗಿಯೇ ಭದ್ರತಾ ಸಿಬ್ಬಂದಿಗೆ ವಿಷಯ ತಿಳಿಸಬೇಕಿದೆ. ವಿಷಯ ತಿಳಸದೆ ಕಾರಣ ಬಾಬರ್‌ ಹಾಗೂ ಉಳಿದವರನ್ನು ಸಿಬ್ಬಂದಿ ಬಿಟ್ಟಿಲ್ಲ. ಇದರಿಂದ ಸಿಟ್ಟಾದ ಬಾಬರ್‌, 2ನೇ ದಿನದಾಟದ ಮೊದಲ ಅವಧಿಯಲ್ಲಿ ಮೈದಾನಕ್ಕಿಳಿಯದೆ ಪ್ರತಿಭಟಿಸಿದರು ಎಂದು ತಿಳಿದುಬಂದಿದೆ. ಬಾಬರ್‌ ಅನುಪಸ್ಥಿತಿಯಲ್ಲಿ ರಿಜ್ವಾನ್‌ ತಂಡ ಮುನ್ನಡೆಸಿದರು.

ಬ್ರಿಸ್ಬೇನ್‌ ಪಿಚ್‌ಗೆ ಐಸಿಸಿ ಕಳಪೆ ರೇಟಿಂಗ್‌

ಬ್ರಿಸ್ಬೇನ್‌: ಆಸ್ಪ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್‌ ಎರಡೇ ದಿನಕ್ಕೆ ಮುಕ್ತಾಯಗೊಂಡ ಬಳಿಕ ಇಲ್ಲಿನ ಗಾಬಾ ಕ್ರೀಡಾಂಗಣದ ಪಿಚ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಕಳಪೆ ರೇಟಿಂಗ್‌ ನೀಡಿದೆ. ಪಂದ್ಯದ ರೆಫ್ರಿಯಾಗಿದ್ದ ರಿಚಿ ರಿಚರ್ಡ್‌ಸನ್‌, ‘ಗಾಬಾ ಪಿಚ್‌ ಬೌಲರ್‌ಗಳಿಗೆ ಅತಿಯಾದ ನೆರವು ನೀಡಿತು. ಇದೇ ಕಾರಣಕ್ಕೆ ಪಿಚ್‌ ಕಳಪೆ ಎಂದು ಐಸಿಸಿಗೆ ವರದಿ ನೀಡಿದ್ದೇನೆ’ ಎಂದಿದ್ದಾರೆ. ಡಿ.26ರಿಂದ ಉಭಯ ತಂಡಗಳ ನಡುವಿನ 2ನೇ ಟೆಸ್ಟ್‌ ಮೆಲ್ಬರ್ನ್‌ನಲ್ಲಿ ನಡೆಯಲಿದೆ.

click me!