ಕೊರೋನಾಗೆ ಇಂಗ್ಲೆಂಡ್-ಸೌತ್ ಆಫ್ರಿಕಾ ಏಕದಿನ ಸರಣಿ ರದ್ದು!

By Suvarna NewsFirst Published Dec 7, 2020, 11:02 PM IST
Highlights

ಕೊರೋನಾ ವೈರಸ್ ಕಾರಣ ಕಳೆದ 8 ತಿಂಗಳಿನಿಂದ ಎಲ್ಲಾ ಕ್ರಿಕೆಟ್ ಸರಣಿಗಳು ರದ್ದಾಗಿತ್ತು. ಇದೀಗ ದ್ವಿಪಕ್ಷೀಯ ಟೂರ್ನಿ ಆರಂಭಗೊಂಡಿದೆ. ಎಲ್ಲಾ ತಯಾರಿ, ಮುಂಜಾಗ್ರತ ಕ್ರಮ ಕೈಗೊಂಡು ಆರಂಭಿಸಿದ ಇಂಗ್ಲೆಂಡ್ ಹಾಗೂ ಸೌತ್ ಆಫ್ರಿಕಾ ಸರಣಿ ರದ್ದಾಗಿದೆ.
 

ಇಂಗ್ಲೆಂಡ್(ಡಿ.07): ಏಕದಿನ ಸರಣಿಗಾಗಿ ಸೌತ್ ಆಫ್ರಿಕಾ ಪ್ರವಾಸ ಮಾಡಿದ ಇಂಗ್ಲೆಂಡ್ ಇದೀಗ ಕೊರೋನಾ ವೈರಸ್‌ಗೆ ತುತ್ತಾಗಿದೆ. ಇತ್ತ ಆತಿಥೇಯ ಸೌತ್ ಆಫ್ರಿಕಾ ತಂಡದಲ್ಲೂ ಕೊರೋನಾ ಕಾಣಿಸಿಕೊಂಡಿದೆ. ಹೀಗಾಗಿ ಡಿ.4ಕ್ಕೆ ಆಯೋಜಿಸಿದ್ದ ಮೊದಲ ಏಕದಿನ ಪಂದ್ಯ ಮುಂದೂಡಲಾಗಿತ್ತು. ಆದರೆ ಕೊರೋನಾ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಇದೀಗ ಟೂರ್ನಿಯನ್ನೇ ರದ್ದು ಮಾಡಲಾಗಿದೆ.

ಕೊರೋನಾದಿಂದಾಗಿ ಇಂಗ್ಲೆಂಡ್‌-ದಕ್ಷಿಣ ಆಫ್ರಿಕಾ ಮೊದಲ ಏಕದಿನ ರದ್ದು!..

ಇಂಗ್ಲೆಂಡ್ ಹಾಗೂ ಸೌತ್ ಆಫ್ರಿಕಾ ತಂಡಗಳಲ್ಲಿ ಕೊರೋನಾ ಪಾಸಿಟೀವ್ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಸೌತ್ ಆಫ್ರಿಕಾ ಕ್ರಿಕೆಟ್ ಮಂಡಳಿ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಜಂಟಿಯಾಗಿ ಟೂರ್ನಿ ರದ್ದುಗೊಳಿಸುವ ನಿರ್ಧಾರ ಕೈಗೊಂಡಿದೆ.

ಡಿಸೆಂಬರ್ 7 ರಂದು 2ನೇ ಏಕದಿನ ಹಾಗೂ ಡಿಸೆಂಬರ್ 9 ರಂದು 3ನೇ ಏಕದಿನ ಪಂದ್ಯ ಆಯೋಜಿಸಲಾಗಿತ್ತು. ಒಂದೂ ಪಂದ್ಯ ಆಯೋಜಿಸಲು ಸಾಧ್ಯವಾಗದೆ ಟೂರ್ನಿ ರದ್ದಾಗಿದೆ. ಇದಕ್ಕೂ ಮೊದಲು 3 ಪಂದ್ಯಗಳ ಟಿ20 ಟೂರ್ನಿ ಯಶಸ್ವಿಯಾಗಿತ್ತು. ಇದರಲ್ಲಿ ಇಂಗ್ಲೆಂಡ್ 3-0 ಅಂತರದಲ್ಲಿ ಸರಣಿ ಕೈಶವ ಮಾಡಿತ್ತು.
 

click me!