
ಲಂಡನ್ (ಜುಲೈ 18): ಇಂಗ್ಲೆಂಡ್‌ನ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಮಂಗಳವಾರ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದ ನಂತರ ಅವರು ಈ ಮಾದರಿಯಲ್ಲಿ ಆಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಸ್ಟೋಕ್ಸ್ ಇದುವರೆಗೆ 104 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 31ರ ಹರೆಯದ ಸ್ಟೋಕ್ಸ್ 2019ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಪಂದ್ಯ ಶ್ರೇಷ್ಠರಾಗಿದ್ದರು.' ಡರ್ಹಾಮ್‌ನಲ್ಲಿ ಮಂಗಳವಾರ ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ಗಾಗಿ ನನ್ನ ಕೊನೆಯ ಪಂದ್ಯವನ್ನು ಆಡಲಿದ್ದೇನೆ. ನಾನು ಈ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಇಂಥದ್ದೊಂದು ಕಠಿಣ ನಿರ್ಧಾರ ಮಾಡುವುದು ನನ್ನ ಪಾಲಿಗೆ ಅಸಾಧ್ಯವಾಗಿತ್ತು. ಇಂಗ್ಲೆಂಡ್ ತಂಡದೊಂದಿಗೆ ನನ್ನ ಸಹಪಾಠಿಗಳೊಂದಿಗೆ ಆಡಿದ ಪ್ರತಿ ನಿಮಿಷವನ್ನು ನಾನು ಇಷ್ಟಪಟ್ಟಿದ್ದೇನೆ. ಈ ದಾರಿಯನ್ನು ನಾನು ಅವಿಸ್ಮರಣೀಯ ಪ್ರಯಾಣವನ್ನು ಕಂಡಿದ್ದೇನೆಎ ಈ ನಿರ್ಧಾರಕ್ಕೆ ಬರುವುದು ಬಹಳ ಕಠಿಣವಾಗಿತ್ಉತ. ನಾನು ಇನ್ನು ಮುಂದೆ ಈ ಸ್ವರೂಪದಲ್ಲಿ ನನ್ನ ತಂಡದ ಸಹ ಆಟಗಾರರಿಗೆ ನನ್ನ 100% ಅನ್ನು ನೀಡಲು ಸಾಧ್ಯವಿಲ್ಲ ಎಂಬ ಅಂಶವನ್ನು ನಿಭಾಯಿಸುವುದು ಅಷ್ಟು ಕಷ್ಟವಲ್ಲ. ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಆಡುವುದು ನನಗೆ ಸಾಧ್ಯವಾಗುತ್ತಿಲ್ಲ' ಎಂದು ಇನ್ಸ್‌ಟಾಗ್ರಾಮ್ ಪೋಸ್ಟ್‌ನಲ್ಲಿ ಬೆನ್ ಸ್ಟೋಕ್ಸ್ ಬರೆದಿದ್ದಾರೆ.
ಪ್ಲೀಸ್ ನಿರ್ಧಾರ ವಾಪಾಸ್ ತೆಗೆದುಕೊಳ್ಳಿ: ಬೆನ್ ಸ್ಟೋಕ್ಸ್ (Ben Stokes) ತಮ್ಮ ನಿರ್ಧಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಬೆನ್ನಲ್ಲಿಯೇ ಟ್ವಿಟರ್‌ನಲ್ಲಿ (Twitter) ಕ್ರಿಕೆಟ್ ಅಭಿಮಾನಿಗಳು (Cricket Fans) ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಿರ್ಧಾರವನ್ನು ವಾಪಾಸ್ ತೆಗೆದುಕೊಳ್ಳುವಂತೆ ಬೆನ್ ಸ್ಟೋಕ್ಸ್‌ಗೆ ಮನವಿ ಮಾಡಿದ್ದಾರೆ.
"ನಿಜಕ್ಕೂ ಬಹಳ ಬೇಗನೆ ಈ ನಿರ್ಧಾರ ಮಾಡಿದ್ದೀರಿ. ಅದರ ಬದಲು ಒಂದು ದೀರ್ಘ ಬ್ರೇಕ್ ತೆಗೆದುಕೊಳ್ಳಿ, ಸದ್ಯಕ್ಕೆ ನಿವೃತ್ತಿ ಬೇಡ ಸ್ಟೋಕ್ಸ್' ಎಂದು ಆಶೀಶ್ ಅರೋರಾ ಬರೆದುಕೊಂಡಿದ್ದಾರೆ. "ಬೆನ್ ಸ್ಟೋಕ್ಸ್ ಏಕದಿನ ಕ್ರಿಕೆಟ್‌ನಿಂದನಿವೃತ್ತರಾಗಿರುವುದು ನಮ್ಮ ಸ್ಟಾರ್ ಆಟಗಾರರಿಗೆ ಅವರ ಕೆಲಸದ ಹೊರೆಯನ್ನು ನಿರ್ವಹಿಸಲು ವಿಶ್ರಾಂತಿ ನೀಡುವುದನ್ನು ನಾವು ಏಕೆ ಟೀಕಿಸಬಾರದು ಎಂಬುದಕ್ಕೆ ಸಾಕ್ಷಿಯಾಗಬೇಕು' ಎಂದು ಅನ್ವಿತ್ ನಾಯ್ಕ್ ಎನ್ನುವವರು ಬರೆದಿದ್ದಾರೆ.
ಇದನ್ನೂ ಓದಿ: BEN STOKES ಇಂಗ್ಲೆಂಡ್‌ಗೆ ವಿಶ್ವಕಪ್ ಗೆದ್ದುಕೊಟ್ಟ ಹೀರೋ ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಣೆ..!
"ಇದರ ಬದಲಿಗೆ ನೀವು ಅಂತಾರಾಷ್ಟ್ರೀಯ ಟಿ20ಗಳಿಂದ ನಿವೃತ್ತರಾಗಬೇಕಿತ್ತು. ನಿಮ್ಮಂತಹ ಆಟಗಾರರಿಗೆ ಏಕದಿನ ಕ್ರಿಕೆಟ್ ಸೂಕ್ತ ಮಾದರಿಯಾಗಿದೆ. ನಿಮ್ಮ ನಿರ್ಧಾರವನ್ನು ಮರುಪರಿಶೀಲಿಸಿ. ಟೆಸ್ಟ್ ಮತ್ತು ಏಕದಿನ ಪಂದ್ಯಗಳನ್ನು ಮಾತ್ರ ಆಡಿ. ಟಿ20 ಆಡಬೇಡಿ' ಎಂದು ಜುನೈದ್ ಲೋನ್ ಎನ್ನುವ ವ್ಯಕ್ತಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಸ್ಮೃತಿ ಮಂಧನಾ ಹುಟ್ಟುಹಬ್ಬ: ನ್ಯಾಷನಲ್ ಕ್ರಿಕೆಟ್ ಕ್ರಶ್ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳಿವು..!
"ಚಾಂಪಿಯನ್ ಇದು ಬಹಳ ಶೀಘ್ರವಾಯಿತು. ಆದರೆ, ಗುಡ್ ಲಕ್. ODIನಲ್ಲಿ ನಿಮ್ಮ ಆಲ್ ರೌಂಡ್ ಪ್ರದರ್ಶನವನ್ನು ನಾವು ನಿಜವಾಗಿಯೂ ಆನಂದಿಸಿದ್ದೇವೆ. 2019 ರ ವಿಶ್ವಕಪ್ ಫೈನಲ್ ನಿಮ್ಮ ಅತ್ಯುತ್ತಮ ಪ್ರದರ್ಶನಗಳಲ್ಲಿ ಒಂದಾಗಿದೆ, ಇದು ದೀರ್ಘಕಾಲ ನಮ್ಮ ನೆನಪಿನಲ್ಲಿ ಉಳಿಯುತ್ತದೆ' ಎಂದು ನಾನವನಲ್ಲ ಎನ್ನುವ ಹೆಸರಿನ ಹ್ಯಾಂಡಲ್‌ನಿಂದ ಪ್ರತಿಕ್ರಿಯೆ ವ್ಯಕ್ತವಾಗಿದೆ.
"ವಿಪರೀತ ಎನ್ನುವಷ್ಟು ಟಿ20 ಲೀಗ್‌ಗಳ ಫಲಿತಾಂಶಗಳು ಇದೀಗ ದೊಡ್ಡ ಫಲಿತಾಂಶವನ್ನು ತೋರಿಸುತ್ತಿದೆ. ಈ ಹಣ ಮಾಡುವ ಯಂತ್ರಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ತನ್ನ ತಾರೆಗಳನ್ನು ಕಳೆದುಕೊಳ್ಳುತ್ತಿದೆ.' ಎಂದು ಇನ್ನೊಬ್ಬ ಅಭಿಮಾನಿ ಬರೆದಿದ್ದಾರೆ.
ಕೊಹ್ಲಿ ಅಭಿನಂದನೆ: ಮೈದಾನದಲ್ಲಿ ಸ್ಟೋಕ್ಸ್ ವಿರುದ್ಧ ಆಗಾಗ ಮಾತಿನ ಚಕಮಕಿಯ ಕಾರಣದಿಂದಾಗಿ ಸುದ್ದಿಯಲ್ಲಿರುತ್ತಿದ್ದ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Team India Former Captain Virat Kohli), ಆಲ್ ರೌಂಡರ್ ಮಾಡಿದ ನಿರ್ಧಾರ ಬಗ್ಗೆ ಪ್ರತಿಕ್ರಿಯೆನೀಡಿದ್ದಾರೆ ಸ್ಟೋಕ್ಸ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಕೊಹ್ಲಿ "ನಾನು ಆಡಿದ ಅತ್ಯಂತ ಸ್ಪರ್ಧಾತ್ಮಕ ಎದುರಾಳಿ ನೀವು. ರೆಸ್ಪೆಕ್ಟ್," ಎಂದು ಕೊಹ್ಲಿ ಕಾಮೆಂಟ್ ಮಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.