ಗುರು ಕಾಣಿಕೆ..! ಮಾಜಿ ಕೋಚ್ ರವಿಶಾಸ್ತ್ರಿಗೆ ಶಾಂಫೇನ್ ಗಿಫ್ಟ್ ಕೊಟ್ಟ ರಿಷಭ್ ಪಂತ್..! ವಿಡಿಯೋ ವೈರಲ್

By Naveen Kodase  |  First Published Jul 18, 2022, 5:29 PM IST

* ಮಾಜಿ ಕೋಚ್‌ ರವಿಶಾಸ್ತ್ರಿಗೆ ರಿಷಭ್ ಪಂತ್ ಶಾಂಫೇನ್ ಗಿಫ್ಟ್
* ಇಂಗ್ಲೆಂಡ್ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಜಯಿಸಿದ್ದ ಪಂತ್
* ಇಂಗ್ಲೆಂಡ್ ಎದುರಿನ ಸರಣಿಯನ್ನು 2-1 ಅಂತರದಲ್ಲಿ ಜಯಿಸಿದ್ದ ಟೀಂ ಇಂಡಿಯಾ


ಮ್ಯಾಂಚೆಸ್ಟರ್(ಜು.18): ಟೀಂ ಇಂಡಿಯಾ ವಿಕೆಟ್ ಕೀಪರ್‌ ಬ್ಯಾಟರ್ ರಿಷಭ್ ಪಂತ್, ಇಂಗ್ಲೆಂಡ್ ಎದುರಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಅಜೇಯ ಶತಕ ಸಿಡಿಸುವ ಮೂಲಕ ಭಾರತ ತಂಡವು ಏಕದಿನ ಕ್ರಿಕೆಟ್ ಸರಣಿ ಗೆಲ್ಲವಲ್ಲಿ ಮಹತ್ತರ ಪಾತ್ರವಹಿಸಿದ್ದರು. ಇಲ್ಲಿನ ಓಲ್ಡ್ ಟ್ರಾಫರ್ಡ್‌ ಮೈದಾನದಲ್ಲಿ ನಡೆದ ಇಂಗ್ಲೆಂಡ್ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ರಿಷಭ್ ಪಂತ್ 111 ಎಸೆತಗಳನ್ನು ಎದುರಿಸಿ ಅಜೇಯ 125 ರನ್ ಚಚ್ಚಿ ತಂಡಕ್ಕೆ 5 ವಿಕೆಟ್‌ಗಳ ಭರ್ಜರಿ ಗೆಲಿವು ತಂದುಕೊಟ್ಟಿದ್ದರು. ಇದೇ ವೇಳೆ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಶತಕ ಚಚ್ಚಿದ ಭಾರತದ ಮೊದಲ ವಿಕೆಟ್ ಕೀಪರ್ ಬ್ಯಾಟರ್ ಎನ್ನುವ ಹಿರಿಮೆಯೂ ರಿಷಭ್ ಪಂತ್ ಪಾಲಾಗಿದೆ.

ಇನ್ನು ಮಹತ್ವದ ಪಂದ್ಯದಲ್ಲಿ ಕೆಚ್ಚೆದೆಯ ಶತಕ ಸಿಡಿಸಿ, ಏಕದಿನ ಸರಣಿ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿದ್ದಕ್ಕಾಗಿ ರಿಷಭ್ ಪಂತ್, ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದ ಬೆನ್ನಲ್ಲೇ ರಿಷಭ್ ಪಂತ್, ತಮ್ಮ ಮಾಜಿ ಕೋಚ್ ಹಾಗೂ ಹಾಲಿ ವೀಕ್ಷಕ ವಿವರಣೆಗಾರಿಕೆ ಮಾಡುತ್ತಿರುವ ರವಿಶಾಸ್ತ್ರಿ ಬಳಿ ಹೋಗಿ ತಮ್ಮ ಕೈಯಲ್ಲಿದ್ದ ಶಾಂಫೇನ್ ಗಿಫ್ಟ್‌ ನೀಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

Pant offering his champagne to Ravi Shastri pic.twitter.com/n9HguNNuID

— Tejesh R. Salian (@tejrsalian)

Tap to resize

Latest Videos

ಇನ್ನು ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಪಂದ್ಯದ ವಿಚಾರಕ್ಕೆ ಬರುವುದಾದರೇ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದಿ ಇಂಗ್ಲೆಂಡ್ ತಂಡಕ್ಕೆ ವೇಗಿ ಮೊಹಮ್ಮದ್ ಸಿರಾಜ್ ತಾವೆಸೆದ ಮೊದಲ ಓವರ್‌ನಲ್ಲೇ ಶಾಕ್ ನೀಡಿದರು. ಇದಾದ ಬಳಿಕ ಕರಾರುವಕ್ಕಾದ ದಾಳಿ ನಡೆಸಿದ ಹಾರ್ದಿಕ್ ಪಾಂಡ್ಯ ಪ್ರಮುಖ 4 ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿಯುವಲ್ಲಿ ಯಶಸ್ವಿಯಾದರು. ಇನ್ನು ಯುಜುವೇಂದ್ರ ಚಹಲ್ 3 ವಿಕೆಟ್ ಉರುಳಿಸಿದರು. ಇದರ ಹೊರತಾಗಿಯೂ ಜೋಸ್ ಬಟ್ಲರ್(60) ಸಮಯೋಚಿತ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ತಂಡವು 259 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು.

Team India ಗೆಲುವಿನ ದಡ ಸೇರಿಸಿದ ಪಂತ್, ರೋಹಿತ್ ರಿಯಾಕ್ಷನ್ ವಿಡಿಯೋ ವೈರಲ್‌..!

ಇನ್ನು 260 ರನ್‌ಗಳ ಸ್ಪರ್ಧಾತ್ಮಕ ಗುರಿ ಪಡೆದ ಟೀಂ ಇಂಡಿಯಾ ಒಂದು ಹಂತದಲ್ಲಿ 72 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಆತಂಕಕ್ಕೆ ಒಳಗಾಗಿತ್ತು. ಈ ವೇಳೆ 5ನೇ ವಿಕೆಟ್‌ಗೆ ಜತೆಯಾದ ಹಾರ್ದಿಕ್ ಪಾಂಡ್ಯ ಹಾಗೂ ರಿಷಭ್ ಒಂತ್ ಜೋಡಿ 133 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಬೌಲಿಂಗ್‌ನಲ್ಲಿ 4 ವಿಕೆಟ್ ಕಬಳಿಸಿದ್ದ ಹಾರ್ದಿಕ್ ಪಾಂಡ್ಯ, ಬ್ಯಾಟಿಂಗ್‌ನಲ್ಲಿ 71 ರನ್ ಸಿಡಿಸಿ ಮಿಂಚಿದರು. ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಪ್ರದರ್ಶನ ತೋರಿದ ರಿಷಭ್ ಪಂತ್, ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.

click me!